ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ದಾವಣಗೆರೆಯಲ್ಲಿ ಜರುಗಿದ ಜಿಲ್ಲಾ
ಮಟ್ಟದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಘೋಷಿಸಿದಂತೆ,
ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ
ಅವರು, ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ
ವಿಭಾಗದಲ್ಲಿ ತಲಾ 07 ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿಯೊಂದಿಗೆ
ವೈಯಕ್ತಿಕವಾಗಿ 10 ಸಾವಿರ ರೂ. ನಗದು ಬಹುಮಾನವನ್ನು ಜಿಲ್ಲಾ
ಕ್ರೀಡಾಂಗಣದಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ದಿನಾಚರಣೆ
ಸಮಾರಂಭದಲ್ಲಿ ವಿತರಿಸಿ, ಸನ್ಮಾನಿಸಿದರು.
ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಶಿಕ್ಷಕರ ವಿವರ
ಇಂತಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುರೇಖಾ, ಸರ್ಕಾರಿ ಹಿ.ಪ್ರಾ.ಶಾಲೆ,
ಲಿಂಗದಳ್ಳಿ, ಚನ್ನಗಿರಿ ತಾಲ್ಲೂಕು. ನಾಗವೇಣಿ, ಸ.ಹಿ.ಪ್ರಾ.ಶಾಲೆ, ಶ್ರೀರಾಮ
ಬಡಾವಣೆ, ದಾವಣಗೆರೆ. ಲೋಕಣ್ಣ ಮಾಗೋಡು, ಸ.ಹಿ.ಪ್ರಾ.ಶಾಲೆ,
ಆನಗೋಡು. ಶರಣಕುಮಾರ ಹೆಗಡೆ, ಸ.ಹಿ.ಪ್ರಾ.ಶಾಲೆ,
ಧೂಳೆಹೊಳೆ, ಹರಿಹರ ತಾಲ್ಲೂಕು. ರತ್ನಮ್ಮ, ಸ.ಹಿ.ಪ್ರಾ.ಶಾಲೆ,
ಪೇಟೆ, ಹೊನ್ನಾಳಿ. ಕಮಲಾಕ್ಷಿ, ಸುರಹೊನ್ನೆ, ನ್ಯಾಮತಿ ತಾಲ್ಲೂಕು.
ಡಿ. ಬಸವರಾಜ್, ದಿದ್ದಿಗಿ, ಜಗಳೂರು ತಾಲ್ಲೂಕು.
ಪ್ರೌಢಶಾಲೆ ವಿಭಾಗದಲ್ಲಿ ಎಂ.ಬಿ. ಪ್ರಭಾಕರ್, ಎಸ್‍ಟಿಜೆ
ಪ.ಪೂ.ಕಾಲೇಜು, ಹಿರೇಕೊಗಲೂರು, ಚನ್ನಗಿರಿ ತಾಲ್ಲೂಕು.
ರಾಜೇಶ್ವರಿ, ಸರ್ಕಾರಿ ಪ್ರೌಢಶಾಲೆ, ಮೆಳ್ಳೆಕಟ್ಟೆ, ದಾವಣಗೆರೆ
ತಾಲ್ಲೂಕು. ಸುಜಾತಾ ಎಚ್.ಎನ್., ಸೀತಮ್ಮ ಬಾಲಕಿಯರ ಪ.ಪೂ.
ಕಾಲೇಜು, ದಾವಣಗೆರೆ. ಜ್ಯೋತಿ ಪಿ.ಎಂ., ಸರ್ಕಾರಿ ಪ್ರೌಢಶಾಲೆ,
ಬನ್ನಿಕೋಡು, ಹರಿಹರ ತಾಲ್ಲೂಕು. ದೇವರಾಜ, ಉಮಾ ಪ್ರಗತಿ
ಪ್ರೌಢಶಾಲೆ, ಬೇಲಿಮಲ್ಲೂರು, ಹೊನ್ನಾಳಿ ತಾಲ್ಲೂಕು. ವಿಶ್ವನಾಥ ಸಿ.ಎಂ.,
ಸರ್ಕಾರಿ ಪ್ರೌಢಶಾಲೆ, ಬೆಳಗುತ್ತಿ ಮಲ್ಲಿಗೆನಹಳ್ಳಿ, ನ್ಯಾಮತಿ
ತಾಲ್ಲೂಕು. ಶಶಿರೇಖಾ, ಸರ್ಕಾರಿ ಪ್ರೌಢಶಾಲೆ, ದೊಣ್ಣೆಹಳ್ಳಿ,
ಜಗಳೂರು ತಾಲ್ಲೂಕು.
ಸಮಾರಂಭದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ದಾವಣಗೆರೆ
ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ದಾವಣಗೆರೆ
ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಧೂಡಾ ಅಧ್ಯಕ್ಷ
ದೇವರಮನಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ
ಡಾ. ವಿಜಯ ಮಹಾಂತೇಶ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,
ಪೊಲೀಸ್ ಇಲಾಖೆಯ ಐಜಿಪಿ ರವಿ, ಎಸ್‍ಪಿ ಸಿ.ಬಿ. ರಿಷ್ಯಂತ್, ಸಾರ್ವಜನಿಕ ಶಿಕ್ಷಣ ಇಲಾಖೆ
ಉಪನಿರ್ದೇಶಕ ಪರಮೇಶ್ವರಪ್ಪ ಸೇರಿದಂತೆ ವಿವಿಧ ಗಣ್ಯರು
ಇದ್ದರು.