ದಾವಣಗೆರೆ. ನ.04
ದಿ: 27.08.2021ರ ನಿರ್ದೇಶನದಂತೆ ನಂ-106 ದಾವಣಗೆರೆ ಉತ್ತರ
ಹಾಗೂ ನಂ-107 ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರಗಳ
ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ
ಪರಿಷ್ಕರಣೆ-2022ರ ಕಾರ್ಯವನ್ನು ದಿನಾಂಕ:08.11.2021 ರಿಂದ
08.12.2021ರವರೆಗೆ ಹಮ್ಮಿಕೊಳ್ಳಲಾಗಿದೆ.
ದಿ:01.01.2022ಕ್ಕೆ 18 ವರ್ಷ ಪೂರ್ಣಗೊಳ್ಳುವವರು, ಸಂಬಂಧಿಸಿದ
ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು, ಹೆಸರು
ಕೈಬಿಟ್ಟು ಹೋಗಿರುವವರು, ಮತದಾರರ ಪಟ್ಟಿಯಲ್ಲಿ
ಹೆಸರುಗಳನ್ನು ತಿದ್ದುಪಡಿ ಮಾಡಿಬೇಕಾದಲ್ಲಿ ಮತ್ತು ಒಂದೇ
ವಿಧಾನಸಭಾ ಕ್ಷೇತ್ರದ ಮತದಾರರು ಬೇರೆ ಮತಗಟ್ಟಿಗೆ
ವರ್ಗಾಯಿಸಬೇಕಾಗಿದ್ದಲ್ಲಿ ನಿಗಧಿಪಡಿಸಿರುವ ನಮೂನೆಗಳಲ್ಲಿ
ಅರ್ಜಿಯನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದ
ಮತಗಟ್ಟೆ ಅಧಿಕಾರಿಗಳಲ್ಲಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದು.
ಅದಲ್ಲದೇ ತಿತಿತಿ.ಟಿvsಠಿ.iಟಿ ಅಂತರ್ಜಾಲದ(ಇಂಟರ್ ನೆಟ್) ತಂತ್ರಾಂಶದಲ್ಲಿ
ಹಾಗೂ voಣeಡಿ heಟಠಿ ಟiಟಿe ಂಠಿಠಿ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಈ ವಿಶೇಷ ಪರಿಷ್ಕರಣೆ ಕಾರ್ಯವನ್ನು ಇನ್ನಷ್ಟು ಸಮರ್ಪವಾಗಿ
ಕೈಗೊಂಡು ಪ್ರತಿ ಮತದಾರನ ಹೆಸರನ್ನು ಮತಪಟ್ಟಿಯಲ್ಲಿ
ಸೇರ್ಪಡೆಗೊಳಿಸುವ ಉದ್ದೇಶದಿಂದ ಅರ್ಜಿಗಳನ್ನು ದಿ:08.11.2021
ರಿಂದ 08.12.2021ರವರೆಗೆ ಸ್ವೀಕರಿಸಲಾಗುವುದು. ಅಲ್ಲದೇ ಈ
ಸವಧಿಯಲ್ಲಿ ದಿ:07.11.2021, ದಿ:14.11.2021, ದಿ:21.11.2021 ಮತ್ತು
28.11.2021 ಭಾನುವಾರಗಳಂದು ಸಹಾ ವಿಶೇಷ ಕಾರ್ಯಾಚರಣೆ
ದಿನಗÀಳಾಗಿರುವುದರಿಂದ ಈ ದಿನಗಳಂದು ಸಹಾ ಹಕ್ಕು ಮತ್ತು
ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದೆಂದು ತಿಳಿಸಿದೆ. ಈ
ಅವಕಾಶವನ್ನು ಸಾರ್ವಜನಿಕರು/ಮತದಾರರು ಸದುಪಯೋಗ
ಪಡಿಸಿಕೊಳ್ಳಲು ಮತದಾರರ ನೋಂದಣಾಧಿಕಾರಿಗಳು ಹಾಗೂ ಉಪ
ಆಯುಕ್ತರು ಮಹಾನಗರಪಾಲಿಕೆ ಇವರು ತಿಳಿಸಿರುತ್ತಾರೆಂದು
ಪ್ರಕಟಣೆ ತಿಳಿಸಿದೆ.
===