ದೇಶದಲ್ಲಿ ಸುಖ,ಶಾಂತಿ,ಸುಭಿಕ್ಷೆ ನೆಲಸುವುದರೊಂದಿಗೆ ದೇಶ ಸಮೃದ್ಧಿಯಾಗಲೆಂದು ಪ್ರಧಾನಿಗಳಾದ ನರೇಂದ್ರ ಮೋದಿಯವರು
ಕೇದಾರನಾಥ ಪುಣ್ಯ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಪುತ್ಥಳಿ ಅನಾವರಣ ಮಾಡುತ್ತಿದ್ದಾರೆಂದು ಸಂಸದರಾದ ಜಿ ಎಂ ಸಿದ್ಧೇಶ್ವರ
ಹೇಳಿದರು
ಹರಿಹರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಆದಿ ಶಂಕರರ ಪುತ್ಥಳಿ ಅನಾವರಣ ನೇರ ಪ್ರಸಾರ ಕಾರ್ಯಕ್ರಮಕ್ಕೂ ಮುನ್ನ
ದೇವಸ್ಥಾನದ ಆವರಣದಲ್ಲಿ ಗೋಪೂಜೆ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಾರ್ಯಕ್ರಮದ ಅಂಗವಾಗಿ ದೇಶಾದ್ಯಂತ
ಜ್ಯೋತಿರ್ ಲಿಂಗಗಳಿರುವ ಕಡೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು ರಾಜ್ಯದ ಎಂಟ್ಹತ್ತು ಕಡೆ ಕಾರ್ಯಕ್ರಮಗಳನ್ನು
ಆಯೋಜಿಸಲಾಗಿದೆ. ಎಲ್ಲಡೆಯೂ ಅಭಿಷೇಕ, ಶಿವಸ್ತುತಿ, ರುದ್ರಪಠಣ ಮುಂತಾದ ಕಾರ್ಯಕ್ರಮಗಳಿದ್ದು ಅದರಂತೆ ಹರಿಹರೇಶ್ವರ ಸ್ವಾಮಿಗೆ
ಅಭಿಷೇಕ, ವಿಷೇಷ ಅಲಂಕಾರ ಪೂಜೆಯೊಂದಿಗೆ ವೇದ ಘೋಷ ಕಾರ್ಯಕ್ರಮವಿದೆ. ಕೇದಾರನಾಥ ಕ್ಷೇತ್ರದಲ್ಲಿ ಮೋದಿಯವರು ಉದ್ಘಾಟಿಸುವ
ಕಾರ್ಯಕ್ರಮದ ನೇರ ಪ್ರಸಾರ ಆಯೋಜನೆಯಾಗಿದ್ದು ವಿವಿಧ ಕಾರ್ಯಕ್ರಮಗಳು ಸಂಜೆಯವರಗೆ ನಡೆಯಲಿವೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ ಆದಿ ಶಂಕರಾಚಾರ್ಯರು ಭೇಟಿ ನೀಡಿದ್ದ ಸ್ಥಳಗಳಲ್ಲಿ ಹರಿಹರ ಕೂಡ ಒಂದಾಗಿದ್ದು
ಭಾರತ ಸರ್ಕಾರದ ನಿರ್ದೇಶನ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನ ಹಾಗೂ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ,ಧಾರ್ಮಿಕ
ದತ್ತಿ ನಿರ್ದೇಶನಾಲಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸೂಚನೆಯಂತೆ ಇಂದು ದೇವಾಲಯದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು
ನಡೆಯುತಿದ್ದು ಬೆಳಗ್ಗೆ 5 ಗಂಟೆಗೆ ಹರಿಹರೇಶ್ವರ ಸ್ವಾಮಿಗೆ ಹೂವಿನ ಅಲಂಕಾರ, ಅಭಿಷೇಕ, ಮಂತ್ರ ಪಠಣ, ಕಾರ್ಯಕ್ರಮಗಳು ನಡೆದಿದ್ದು
ಗೋಪೂಜೆಯೊಂದಿಗೆ ಕೇದಾರನಾಥ ಕ್ಷೇತ್ರದಿಂದ ನೇರ ಪ್ರಸಾರ ಕಾರ್ಯಕ್ರಮವಿದೆ ಸಂಜೆ ವೇದಿಕೆಯಲ್ಲಿ ಶಿವಸ್ತುತಿ,ಅರ್ಧನಾರೀಶ್ವರ ಹಾಗೂ
ಶಿವನ ಕುರಿತ ವಿವಿಧ ನೃತ್ಯ ರೂಪಕಗಳು ವೀಣಾವಾದನ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು ಜಿಲ್ಲೆಯ ಸಾರ್ವಜನಿಕರು
ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹರಿಹರ ಶಾಸಕ ರಾದ ಎಸ್. ರಾಮಪ್ಪ,ಶಾಸಕ ರಾದ ಎಸ್ ಎ ರವೀಂದ್ರ ನಾಥ್,ಪ್ರೊ.ಲಿಂಗಣ್ಣ,ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್,ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಸೇರಿದಂತೆ ಜನ ಪ್ರತಿನಿಧಿಗಳು ಅಧಿಕಾರಿಗಳು
ಉಪಸ್ಥಿತರಿದ್ದರು.