ಹರಿಹರ-ಶಿವಮೊಗ್ಗ ರಸ್ತೆಯಲ್ಲಿನ ಇಂಡಿಯಾನ್ ಡಾಬಾ ಮುಂಭಾಗ
ಕಳೆದ ಸೆ.09 ರಂದು ರಾತ್ರಿ ಅಪರಿಚಿತ ವಾಹನ, ರಸ್ತೆ ಬದಿಯಲ್ಲಿ
ನಡೆದುಕೊಂಡು ಹೋಗುತ್ತಿದ್ದ ಸುಮಾರು 60 ವರ್ಷ ವಯಸ್ಸಿನ
ಅಪರಿಚಿತ ವ್ಯಕ್ತಿ ಡಿಕ್ಕಿ ಹೊಡೆದು, ವಾಹನವನ್ನು ನಿಲ್ಲಿಸದೇ ಹಾಗೆಯೇ
ಹೋಗಿರುತ್ತಾನೆ.
ತಲೆಗೆ, ಕೈ-ಕಾಲುಗಳಿಗೆ ತೀವ್ರ ಪೆಟ್ಟಾದ ಕಾರಣ, ಅಪರಿಚಿತ
ವ್ಯಕ್ತಿಯನ್ನು ಹರಿಹರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ
ಫಲಕಾರಿಯಾಗದೇ ಮೃತಪಟ್ಟಿದರಿಂದ, ಮೃತನ ವಾರಸುದಾರರ
ಪತ್ತೆ ಸಂಬಂಧ,ಅದೇ ದಿನ ರಾತ್ರಿ ಶವವನ್ನು ದಾವಣಗೆರೆ
ಸಿ.ಜಿ.ಆಸ್ಪತ್ರೆಯ ಶೈತ್ಯಾಗಾರದಲ್ಲಿರಿಸಿ, ಬಳಿಕ 5 ದಿನಗಳಾದರೂ
ವಾರಸುದಾರರು ಪತ್ತೆಯಾಗದೇ ಇದ್ದುದ್ದರಿಂದ ಕಾನೂನು ರೀತ್ಯಾ
ಶವ ಸಂಸ್ಕಾರ ಮಾಡಲಾಗಿರುತ್ತದೆ.
ಮೃತನ ಚಹರೆ: ವಯಸ್ಸು 60 ವರ್ಷ, ಎತ್ತರ 5.2 ಅಡಿ, ಬಣ್ಣ
ಎಣ್ಣೆಗೆಂಪು ಬಣ್ಣ, ದುಂಡು ಮುಖ, ಸಾಧರಣ ಮೈಕಟ್ಟು, ಬಿಳಿ
ಗಡ್ಡವಿರುತ್ತದೆ. ಬಿಳಿ ತುಂಬು ತೋಳಿನ ಶರ್ಟ್, ಸಿಮೆಂಟ್ ಕಲರ್
ಪ್ಯಾಂಟ್, ನೀಲಿ ಚಡ್ಡಿ ಧರಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಿ.ಪಿ.ಐ ಹರಿಹರ ವೃತ್ತ ಮೊ.ನಂ:9480803234, ಪಿ.ಎಸ್.ಐ
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ:9480803258, ದಾವಣಗೆರೆ
ಕಂಟ್ರೋಲ್ ರೂಂ: 08192-253100ನ್ನು ಸಂಪರ್ಕಿಸಬಹುದೆಂದು
ಪ್ರಕಟಣೆ ತಿಳಿಸಿದೆ.