ಹೊನ್ನಾಳಿ ಟೌನ್ ಪುರಸಭೆ ಎದುರುಗಡೆ ಇರುವ ಹೊನ್ನಾಳಿ ಟೌನ್ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ ದ್ವಾರಬಾಗಿಲು ಒಳಗಡೆ ಹೋಗುವ ಮಾತೃಶ್ರೀ ಟೀಸ್ಟಾಲ್ ಪಕ್ಕ ಸಾರ್ವಜನಿಕರು ಓಡಾಡುವ ಜಾಗದಲ್ಲಿ ತಂಬಾಕು ಗುಟ್ಕಾವನ್ನು ಹಾಕಿಕೊಂಡು, ಬಾಯಿಯಿಂದ ಉಗಿದು ಕಸದ ತೊಟ್ಟಿಯನ್ನು ಮಾಡಿರುತ್ತಾರೆ. ಇಲ್ಲಿ ಮಳಿಗೆಗಳಿಗೆ ಬರುವಂತಹ ಸಾರ್ವಜನಿಕರು ಅಸಯ್ಯ ಪಟ್ಟು ಕೊಂಡು, ಸಹಕಾರ ಸಂಘ ಕ್ಕೆ ಬರುವ ಈ ಜಾಗದಲ್ಲಿ ಪ್ರತಿನಿತ್ಯ ಸಾವಿರಾರು ಜನರು ಬಂದು ಓಡಾಡುವುದರ ಜೊತೆಗೆ ಈ ಸಹಕಾರ ಸಂಘಕ್ಕೆ ಸಾರ್ವಜನಿಕರು ಪ್ರತಿನಿತ್ಯ ಶಾಪವನ್ನು ಹಾಕಿ ಹೋಗುತಿದ್ದಾರೆ.
ಈಗಲಾದರೂ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಎಚ್ಚೆತ್ತುಕೊಂಡು, ಮಳಿಗೆಯ ಬಾಡಿಗೆಯನ್ನು ತೆಗೆದುಕೊಳ್ಳುವುದು ಒಂದೇ ಗುರಿಯಾಗಿ ಆಗಿದೆಯೇ, ಅನ್ನುವುದು , ಜನರ ಆಕ್ರೋಶ ವ್ಯಕ್ತ ಪಡಿಸುತಿದ್ದಾರೆ.ಈ ಸಹಕಾರ ಸಂಘದವರು, ಇನ್ನಾದರೂ ಪ್ರತಿಯೊಂದು ವಾಣಿಜ್ಯ ಮಳಿಗೆ ಮಾಲೀಕರುಗಳಿಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ನೋಟೀಸು ಕೊಟ್ಟು,
ನಿಮ್ಮ ನಿಮ್ಮ ಮಳಿಗೆಯ ಮುಂದೆ ಕಸವನ್ನು ಆಕದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆಯನ್ನೂ ಕೊಟ್ಟು, ಅದರ ಜೊತೆಗೆ ಮುಂದೆ, ಈ ರೀತಿ ಆದರೆ ದಂಡವನ್ನು ವಸೂಲಿ ಮಾಡಲಾಗುವುದು ಎಂದು ತಿಳಿಸಿದರೆ, ಇಂಥ ಅವಘಡಗಳು ನಡೆಯದಂತೆ ತಡೆಯಬಹುದು ಎಂದು ಸಾರ್ವಜನಿಕರ ಒತ್ತಾಯವಾಗಿದೆ .ಇನ್ನಾದರೂ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸ್ವಚ್ಛತೆ ಬಗ್ಗೆ ಎಚ್ಚೆತ್ತುಕೊಳ್ಳುತ್ತಾರೆ ಅನ್ನುವುದು ಎಕ್ಸ್ ಪ್ರಶ್ನೆಯಾಗಿ ಉಳಿದಿದೆ.
ಕಾದು ನೋಡೋಣ ?