ಪ್ರಪಂಚದ ಎರಡನೇ ಮಾಹಾಯುದ್ಧದ ಗೌರವಧನ
ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಜೀವಿತ ಪ್ರಮಾಣ
ಪತ್ರಗಳನ್ನು ಡಿ.31 ರೊಳಗಾಗಿ ಜಂಟಿ ನಿರ್ದೇಶಕರು, ಸೈನಿಕ
ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಳಗಾವಿ ಇವರ
ಕಾರ್ಯಾಲಯಕ್ಕೆ ವೈಯಕ್ತಿಕವಾಗಿ ಬಂದು ಸಲ್ಲಿಸಬೇಕು. ಜೀವಿತ
ಪ್ರಮಾಣಪತ್ರ ಸಲ್ಲಿಸದೆ ಇರುವ ಫಲಾನುಭವಿಗಳ ಗೌರವಧನ
ಸ್ಥಗಿತಗೊಳಿಸಲಾಗುವುದು ಎಂದು ಬೆಳಗಾವಿ ವಿಂಗ್ ಕಮಾಂಡರ್
ಸೂಚನೆ ನೀಡಿದ್ದಾರೆ.
ಅಂಗವಿಕಲರಾದ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ
ಉದ್ಯೋಗ ಕಲ್ಪಿಸಲು ವಿಚಾರಗೋಷ್ಟಿಯನ್ನು ಹಮ್ಮಿಕೊಂಡಿದ್ದು,
ಅಂಗವಿಕಲ ಮಾಜಿ ಸೈನಿಕರು ಹಾಗೂ ಅವರ ಅಂಗವಿಕಲ ಅವಲಂಬಿತರ
ಮಾಹಿತಿಯನ್ನು ನ.18 ರೊಳಗಾಗಿ ಜಂಟಿ ನಿರ್ದೇಶಕರು, ಸೈನಿಕ
ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಳಗಾವಿ ಕಾರ್ಯಾಲಯಕ್ಕೆ
ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ. 8861887366 ಕ್ಕೆ
ಸಂಪರ್ಕಿಸಹುದು ಎಂದು ಬೆಳಗಾವಿ ವಿಂಗ್ ಕಮಾಂಡರ್ ಈಶ್ವರ
ಕೊಡೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.