ಹೊಸದಾಗಿ ರಚನೆಯಾದ ನ್ಯಾಮತಿ ಪಟ್ಟಣ ಪಂಚಾಯಿತಿಯ ವಾರ್ಡ್
ವಾರು ಕ್ಷೇತ್ರ ಪುನರ್ ವಿಂಗಡನೆಯ ಅಂತಿಮ
ಅಧಿಸೂಚನೆಯನ್ನು ನ.10 ರಂದು ಪ್ರಾಧಿಕಾರದಿಂದ
ಹೊರಡಿಸಲಾಗಿದ್ದು, ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ, ನ್ಯಾಮತಿ
ತಹಶೀಲ್ದಾರ್ ಕಚೇರಿ ಹಾಗೂ ಪಟ್ಟಣ ಪಂಚಾಯಿತಿಯ ಕಚೇರಿಗಳಲ್ಲಿ
ಪಡೆಯಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.