ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸರ್ವಜ್ಞ ಅಧ್ಯಯನ
ಕೇಂದ್ರದ ಉದ್ಘಾಟನೆ ಮತ್ತು ಸರ್ವಜ್ಞನ ವಚನಗಳ ಕುರಿತು
ಅಂತರಶಿಸ್ತೀಯ ಅಧ್ಯಯನ ಕುರಿತು ರಾಷ್ಟ್ರೀಯ ವಿಚಾರ
ಸಂಕೀರಣ ಕಾರ್ಯಕ್ರಮ ನ.11 ಮತ್ತು 12 ರಂದು ಬೆಳಿಗ್ಗೆ 11.30
ಕ್ಕೆ ವಿಶ್ವವಿದ್ಯಾನಿಲಯದ ಎಂಬಿಎ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರು ಕಾರ್ಯಕ್ರಮದ
ಉದ್ಘಾಟನೆ ನೆರವೇರಿಸುವರು. ಕುಲಸಚಿವರಾದ ಪ್ರೊ.ಗಾಯತ್ರಿ
ದೇವರಾಜ, ಪರೀಕ್ಷಾಂಗ ಕುಲಸಚಿವೆ ಪ್ರೊ.ಅನಿತಾ ಎಚ್.ಎಸ್., ಹಣಕಾಸು
ಅಧಿಕಾರಿ ಡಿ.ಪ್ರಿಯಾಂಕ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ
ಕಲ್ಬುರ್ಗಿಯ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ
ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ.ಶಿವಗಂಗಾ ರುಮ್ಮಾ
ಸರ್ವಜ್ಞನ ವಚನಗಳನ್ನು ಕುರಿತು ವಿಶೇಷ ಉಪನ್ಯಾಸ
ನೀಡಲಿದ್ದಾರೆ ಎಂದು ಸರ್ವಜ್ಞ ಅಧ್ಯಯನ ಕೇಂದ್ರದ
ಸಂಯೋಜನಾಧಿಕಾರಿ ಡಾ.ಜಯರಾಮಯ್ಯ ವಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.