ಚನ್ನಗಿರಿ ತಾಲ್ಲೂಕಿನ ಶೃಂಗಾರಬಾಗ, ಸೋಮ್ಲಾಪುರ,
ತ್ಯಾವಣಿಗೆ, ಕಾಶಿಪುರ, ಕರೆಕಟ್ಟೆ, ಜಮ್ಲಾಪುರ, ಹಿರೇವುಡ
ತಾಂಡಗಳು ಹಾಗೂ ಮಲಹಾಳ್ ಗೊಲ್ಲರಹಟ್ಟಿಯಲ್ಲಿ ಪಡಿತರ
ಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾ
ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದ ಈ
ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ
ಆಹ್ವಾನಿಸಲಾಗಿದೆ.
       ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣಾ ಆದೇಶದಂತೆ
ಕಲ್ಪಿಸಲಾಗಿರುವ ಎಲ್ಲಾ ಹಾಡಿ, ತಾಂಡ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ
ಕಾಲೋನಿ, ಗೊಲ್ಲರಹಟ್ಟಿಗಳಲ್ಲಿ ವಾಸವಾಗಿರುವ ಕನಿಷ್ಟ 100 ಪಡಿತರ
ಚೀಟಿಗಳಿಗೆ ಸೀಮಿತಗೊಳಿಸಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು
ಆದೇಶಿಸಿದ್ದು, ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು
ನಿಗದಿತ ನಮೂನೆ-ಎ ನಲ್ಲಿ ಅರ್ಜಿ ಕರೆಯಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತ
ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30
ದಿವಸದೊಳಗಾಗಿ ಜಂಟಿ ನಿರ್ದೇಶಕರು, ಆಹಾರ ನಾಗರೀಕ ಸರಬರಾಜು
ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ದಾವಣಗೆರೆ ಇವರಿಗೆ
ಸಲ್ಲಿಸಬೇಕು. ಅವಧಿಯ ನಂತರ ಬಂದ ಅರ್ಜಿಗಳನ್ನು
ಸ್ವೀಕರಿಸಲಾಗುವುದಿಲ್ಲ.
      ಚನ್ನಗಿರಿ ತಾಲ್ಲೂಕಿನ ಶೃಂಗಾರಬಾಗ ತಾಂಡಕ್ಕೆ ಮಂಜೂರು
ಮಾಡಲು ಉದ್ದೇಶಿಸಲಾಗಿರುವ ಹೊಸ ನ್ಯಾಯಬೆಲೆ ಅಂಗಡಿಗೆ 24-
ಎಎವೈ(ಅಂತ್ಯೋದಯ), 150-ಬಿಪಿಎಲ್(ಆದ್ಯತಾ), 04-ಎಪಿಎಲ್(ಆದ್ಯತೇತರ)
ಸೇರಿದಂತೆ ಒಟ್ಟು 178 ಪಡಿತರ ಚೀಟಿಗಳು.   ಅದೇ ರೀತಿ ಸೋಮ್ಲಾಪುರ
ತಾಂಡಕ್ಕೆ ಮಂಜೂರು ಮಾಡಲು ಉದ್ದೇಶಿಸಲಾಗಿರುವ ಹೊಸ
ನ್ಯಾಯಬೆಲೆ ಅಂಗಡಿಗೆ 31-ಎಎವೈ(ಅಂತ್ಯೋದಯ), 99-ಬಿಪಿಎಲ್(ಆದ್ಯತಾ),
01-ಎಪಿಎಲ್(ಆದ್ಯತೇತರ) ಸೇರಿದಂತೆ ಒಟ್ಟು 131 ಪಡಿತರ ಚೀಟಿಗಳು.
ತ್ಯಾವಣಿಗೆ ತಾಂಡ ಹೊಸ ನ್ಯಾಯಬೆಲೆ ಅಂಗಡಿಗೆ 20-
ಎಎವೈ(ಅಂತ್ಯೋದಯ), 114-ಬಿಪಿಎಲ್(ಆದ್ಯತಾ), 08-ಎಪಿಎಲ್(ಆದ್ಯತೇತರ)
ಸೇರಿದಂತೆ ಒಟ್ಟು 142 ಪಡಿತರ ಚೀಟಿ. ಕಾಶಿಪುರ ತಾಂಡ ಹೊಸ
ನ್ಯಾಯಬೆಲೆ ಅಂಗಡಿಗೆ 19-ಎಎವೈ(ಅಂತ್ಯೋದಯ), 147-ಬಿಪಿಎಲ್(ಆದ್ಯತಾ),
02-ಎಪಿಎಲ್(ಆದ್ಯತೇತರ) ಸೇರಿದಂತೆ ಒಟ್ಟು 168 ಪಡಿತರ ಚೀಟಿ.
ಕರೆಕಟ್ಟೆ ತಾಂಡ ಹೊಸ ನ್ಯಾಯಬೆಲೆ ಅಂಗಡಿಗೆ 28-
ಎಎವೈ(ಅಂತ್ಯೋದಯ), 194-ಬಿಪಿಎಲ್(ಆದ್ಯತಾ), 12-ಎಪಿಎಲ್(ಆದ್ಯತೇತರ)
ಸೇರಿದಂತೆ ಒಟ್ಟು 234 ಪಡಿತರ ಚೀಟಿ. ಜಮ್ಲಾಪುರ ತಾಂಡ ಹೊಸ
ನ್ಯಾಯಬೆಲೆ ಅಂಗಡಿಗೆ 33-ಎಎವೈ(ಅಂತ್ಯೋದಯ), 165-ಬಿಪಿಎಲ್(ಆದ್ಯತಾ),
05-ಎಪಿಎಲ್(ಆದ್ಯತೇತರ) ಸೇರಿದಂತೆ ಒಟ್ಟು 203 ಪಡಿತರ ಚೀಟಿ. ಹಿರೇವುಡ
ತಾಂಡ ಹೊಸ ನ್ಯಾಯಬೆಲೆ ಅಂಗಡಿಗೆ 30-ಎಎವೈ(ಅಂತ್ಯೋದಯ), 105-

ಬಿಪಿಎಲ್(ಆದ್ಯತಾ), 04-ಎಪಿಎಲ್(ಆದ್ಯತೇತರ) ಸೇರಿದಂತೆ ಒಟ್ಟು 139 ಪಡಿತರ
ಚೀಟಿ. ಹಾಗೂ ಮಲಹಾಳ್ ಗೊಲ್ಲರಹಟ್ಟಿಗೆ ಮಂಜೂರು ಮಾಡಲು
ಉದ್ದೇಶಿಸಲಾಗಿರುವ ಹೊಸ ನ್ಯಾಯಬೆಲೆ ಅಂಗಡಿಗೆ 05-
ಎಎವೈ(ಅಂತ್ಯೋದಯ), 96-ಬಿಪಿಎಲ್(ಆದ್ಯತಾ), 02-ಎಪಿಎಲ್(ಆದ್ಯತೇತರ)
ಸೇರಿದಂತೆ ಒಟ್ಟು 103 ಪಡಿತರ ಚೀಟಿಗಳನ್ನು ನಿಯೋಜಿಸುವ ಉದ್ದೇಶ
ಹೊಂದಲಾಗಿದೆ.  ಈ ಎಲ್ಲ ಉದ್ದೇಶಿತ ಹೊಸ ನ್ಯಾಯಬೆಲೆ ಅಂಗಡಿಗಳಿಗೆ
ಒಂದು ತಿಂಗಳಿಗೆ ಪಡಿತರ ಎತ್ತುವಳಿಗೆ ಕನಿಷ್ಠ ಮೊತ್ತ ತಲಾ 50
ಸಾವಿರ ರೂಗಳು ಅವಶ್ಯವಿದೆ.
       ನ್ಯಾಯಬೆಲೆ ಅಂಗಡಿ ಕೋರಿ ಅರ್ಜಿ ಸಲ್ಲಿಸುವ ಸಂಸ್ಥೆಗಳು ಅಥವಾ
ಇತರೆಯವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಸಹಕಾರ
ಸಂಘಗಳು ಕನಿಷ್ಠ 3 ವರ್ಷದ ಹಿಂದೆ ನೊಂದಾಯಿತವಾಗಿರಬೇಕು.
ಮತ್ತು ಮೂರು ವರ್ಷಗಳ ನಿರಂತರ
ಚಟುವಟಿಕೆಯಲ್ಲಿರಬೇಕು. ಎರಡು ವರ್ಷಗಳಿಂದ ಕನಿಷ್ಠ ಎರಡು
ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
     ಅರ್ಜಿ ಸಲ್ಲಿಸುವವರು ಇಚ್ಚಿಸುವವರು ಪ್ರಕಟಣೆ ಹೊರಡಿಸಿದ 30
ದಿನಗಳೊಳಗಾಗಿ ತಲುಪುವಂತೆ ನಮೂನೆ-ಎ ನಲ್ಲಿ ಜಂಟಿ
ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ
ವ್ಯವಹಾರಗಳ ಇಲಾಖೆ ದಾವಣಗೆರೆ ಇವರಿಗೆ ಸಲ್ಲಿಸಬೇಕು. ನಿಗದಿತ ಅರ್ಜಿ
ನಮೂನೆಯನ್ನು ಜಿಲ್ಲಾ ಕಚೇರಿ ಅಥವಾ ತಹಶೀಲ್ದಾರ್, ತಾಲ್ಲೂಕು
ಕಚೇರಿಯಿಂದ ಪಡೆಯಬಹುದು. ಅರ್ಜಿಯ ಜೊತೆ ದಾಖಲೆಗಳನ್ನು
ಸಲ್ಲಿಸದ ಅಥವಾ ಅಪೂರ್ಣವಾಗಿರುವ ಮತ್ತು ನಿಗದಿತ ದಿನಾಂಕದ
ನಂತರ ಸ್ವೀಕೃತವಾಗಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
   ಅರ್ಜಿದಾರ ಅಭ್ಯರ್ಥಿಯು ಕಡ್ಡಾಯವಾಗಿ 10ನೇ ತರಗತಿ
ಪಾಸಾಗಿರಬೇಕು. ಸಹಕಾರ ಸಂಘ/ಸಂಸ್ಥೆಗಳ ಮತ್ತು
ಸ್ವಸಹಾಯ ಸಂಘಗಳಾದರೆ ನೋಂದಾವಣೆ ಪತ್ರ, ಕಳೆದ 3
ವರ್ಷಗಳ ದೃಡೀಕೃತ ಲೆಕ್ಕ ಪರಿಶೋಧನಾ ವರದಿ ಮತ್ತು
ಉಪನಿಯಮಗಳು(ಬೈಲಾ), ನ್ಯಾಯಬೆಲೆ ಅಂಗಡಿ ನಡೆಸಲು ಮತ್ತು
ಪ್ರಮಾಣ ಪತ್ರ ಸಲ್ಲಿಸಲು ಅಧಿಕಾರ ಪಡೆದಿರುವ ಪ್ರತಿನಿಧಿಯನ್ನು
ನೇಮಿಸಿರುವ ಬಗ್ಗೆ ನಿರ್ಣಯ, ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್
1959 ಅಡಿ ವಿಚಾರಣೆ, ಟ್ರಯಲ್ ಮತ್ತು ಲಿಕ್ವಿಡೇಷನ್ ನಡವಳಿ
ನಡೆದಿರುವುದಿಲ್ಲ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ
ದೃಡೀಕರಣ ಪತ್ರ, ವ್ಯಾಪಾರದ ಮಳಿಗೆಯ ಖಾತೆ ಅಥವಾ
ಬಾಡಿಗೆ/ಕರಾರು ಪತ್ರ, ಹಣಕಾಸು ಹೊಂದಿರುವ ಬಗ್ಗೆ ಬ್ಯಾಂಕ್ ಪಾಸ್
ಪುಸ್ತಕದ ಪ್ರತಿ, ಸಹಕಾರ ಸಂಘದವರು ಅಧಿಕೃತವಾಗಿ
ನೇಮಿಸಿರುವ ಪ್ರತಿನಿಧಿಯ ಇತ್ತೀಚಿನ 3 ಪಾಸ್‍ಪೋರ್ಟ್ ಅಳತೆಯ
ಭಾವಚಿತ್ರ, ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಾಗ ಕರ್ನಾಟಕ
ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ(ನಿಯಂತ್ರಣ)
ಆದೇಶ 2018 ರಲ್ಲಿ ಆದ್ಯತೆಗಳನ್ನು ಪರಿಗಣಿಸಲಾಗುವುದು ಎಂದು
ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ
ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *