ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 10/11/ 20 21ರಂದು ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ SDMC ಅಧ್ಯಕ್ಷರುಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪತ್ರಿಕಾಗೋಷ್ಠಿ.
ನಂತರ SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ರವರು ಮಾತನಾಡಿ .ಹೊನ್ನಾಳಿ ತಾಲೂಕು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಶಿಕ್ಷಕಿಯರುಗಳು ಅವರವರ ಶಾಲೆಗಳಿಗೆ ಸರಿಯಾಗಿ ಬರುತ್ತಿಲ್ಲ. ಬಂದರೆ 10:30ರಿಂದ 11ಗಂಟೆಗೆ ಶಾಲೆ ಗ ಬರುತ್ತಾರೆ. ಬಂದ ನಂತರ ಎರಡರಿಂದ ಮೂರು ಗಂಟೆ ಮಕ್ಕಳಿಗೆ ಪಾಠವನ್ನು ಮಾಡಿ ಜಾಗವನ್ನು ಖಾಲಿ ಮಾಡುತ್ತಾರೆ. ಎಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಸರ್ಕಾರಿ ಶಾಲೆಯ ಮಕ್ಕಳ ಪೋಷಕರುಗಳು ಫೋನು ಮಾಡಿ ತಿಳಿಸಿರುತ್ತಾರೆ. ಆದ ಕಾರಣ ಇನ್ನು ಮುಂದೆ LPS ಮತ್ತು h.p.s. ಶಾಲಾ ಶಿಕ್ಷಕರು ಮತ್ತು ಶಿಕ್ಷಕಿಯರುಗಳು 9.30 ಶಾಲೆಯಲ್ಲಿರಬೇಕು 9.45 ಕೆ ಪ್ರೇಯರ್ ಮಾಡಿದನಂತರ ಮಕ್ಕಳು ಗಳಿಗೆ ತಪ್ಪದೇ ಕ್ಷೀರಭಾಗ್ಯ ವನ್ನು ಕೊಟ್ಟು, ಹತ್ತು ಗಂಟೆಗೆ ಸರಿಯಾಗಿ ಪಾಠವನ್ನು ಪ್ರಾರಂಭ ಮಾಡಿ ಸಂಜೆ 4.30 ರವರೆಗೆ ಶಾಲೆಯಲ್ಲಿ ಇದ್ದು ಅವಧಿ ಮುಗಿದ ನಂತರ ತಮ್ಮ ಮನೆಗಳಿಗೆ ತೆರಳಬಹುದು .ತಪ್ಪಿದ್ದಲ್ಲಿ ನಾವುಗಳು ಸರ್ಕಾರಕ್ಕೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಶಿವಲಿಂಗ ಪ್ಪ ತಿಳಿಸಿದರು.
ನಂತರ ರಾಜ್ಯ ಸಂಘಟನಾ ಕಾರ್ಯದರ್ಶಿಯವರಾದ ರುದ್ರಾಯ ನಾಯ್ಕ್ ರವರು ಮಾತನಾಡಿ, ಸರ್ಕಾರವು ಶೀಘ್ರವಾಗಿ ಎಲ್ಪಿಎಸ್ ಮತ್ತು HPS ಶಾಲೆಗಳಲ್ಲಿ ಮುಖ್ಯೋಪಾಧ್ಯಯ ಹುದ್ದೆಗಳು ಸುಮಾರು ಖಾಲಿ ಇದ್ದು ಅವುಗಳನ್ನು ಸೀಗ್ರವಾಗಿ ಸರ್ಕಾರ ಭರ್ತಿ ಮಾಡಬೇಕು ಎಂದು ಒತ್ತಾಯಿಸುತ್ತಾ, H ಕಡದಕಟ್ಟೆ ಹ್ಯಾಂಡ್ ಪೋಸ್ಟ್ ಹತ್ತಿರವಿರುವ ಕಿತ್ತೂರಾಣಿ ಚೆನ್ನಮ್ಮ ಮತ್ತು ಮುರಾರ್ಜಿ ಶಾಲೆಗಳಲ್ಲಿ ಸರಿಯಾಗಿ ಮಕ್ಕಳಿಗೆ ಶಿಕ್ಷಣ ಕೊಡುವುದು ಮತ್ತು ಊಟದ ವ್ಯವಸ್ಥೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಗೊತ್ತಾಗಿದೆ, ಇನ್ನಾದರೂ ಎಚ್ಚೆತ್ತುಕೊಂಡು ಅಲ್ಲಿರುವ ಸಿಬ್ಬಂದಿ ವರ್ಗದವರು ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಹೇಳಿದರು.
ನಂತರ ಪತ್ರಿಕಾಗೋಷ್ಠಿಯನ್ನು ಮುಗಿಸಿದನಂತರ ಹೊನ್ನಾಳಿ ಪೇಟೆಯ ಶಾಲೆಗೆ ತೆರಳಿ ಮಕ್ಕಳಿಗೆ ಯಾವ ರೀತಿ ಊಟವನ್ನು ಬಡಿಸುತ್ತಾರೆ ಎಂದು ವೀಕ್ಷಿಸಿದರು.
ಉಪಸ್ಥಿತಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯವರಾದ ರುದ್ರನಾಯ್ಕ ಹಾಲಿವಾಣ ,ಎಸ್ಡಿಎಂಸಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಅಧ್ಯಕ್ಷರುಗಳಾದ ಶಿವಲಿಂಗಪ್ಪ ಹುಣಸಘಟ್ಟ ಮತ್ತು ರಾಜಶೇಖರ್ ನ್ಯಾಮತಿ. ಸತೀಶ್ ಬನ್ನಿಕೋಡ್. ರಮೇಶ್ ಕೋಟೆಮಲ್ಲೂರು .ತಿಮ್ಮಪ್ಪ ಮಲ್ಲಿಗೆನಹಳ್ಳಿ ಸಹ ಭಾಗಿಯಾಗಿದ್ದರು.