ದಾವಣಗೆರೆ: ದಾವಣಗೆರೆ ನಗರದಲ್ಲಿ ಕಿಯಾ ಕಾರು ಷೋ ರೂಂ ಇಂದಿನಿಂದ ಆರಂಭಗೊಂಡಿದ್ದು, ಬಿ.ಎಸ್.ವೈ ಅವರ ಮೊಮ್ಮಗ, ಸಂಸದ ರಾಘವೇಂದ್ರ ಪುತ್ರ ಸುಭಾಷ್ ಒಡೆತನದ ಈ ಷೋ ರೂಂನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಶಾಸಕರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರು ಉದ್ಘಾಟಿಸಿದರು.
ನಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಎಸ್ಸೆಸ್ ಅವರು ರಾಜಕಾರಣಿಗಳು ಉದ್ಯಮಿಗಳಾಗುತ್ತಿರುವುದು ಸ್ವಾಗತಾರ್ಹ. ರಾಜಕಾರಣಿಗಳು ಉದ್ಯಮಿಗಳಾದಾಗ ಉದ್ಯಮಿಗಳ ಸಂಕಷ್ಟ ತಿಳಿಯಲಿದೆ ಎಂದರು.
ದಾವಣಗೆರೆ ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ ಷೋ ರೂಂ ಆರಂಭಗೊಳ್ಳುತ್ತಿದ್ದು, ಇನ್ನಷ್ಟು ಉದ್ಯಮಕ್ಕೆ ರಾಘವೇಂದ್ರ ಮತ್ತು ವಿಜೇಂದ್ರ ಕುಟುಂಬ ಬರಲಿ ಎಂದು ಆಶಿಸಿ ವಿಜೇಂದ್ರ ಪುತ್ರಿ ಜಾನ್ಸಿ ಹೆಸರನ್ನು ಷೋ ರೂಂಗೆ ನಾಮಕರಣ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕ್ರಿಸ್ಟಾಲ್ ಕಾರನ್ನು ಖರೀದಿಸುವ ಮೂಲಕ ಶುಭ ಹಾರೈಸಿದರು.
ಕಂಪನಿಯ ಜಾನ್, ಸಂಸದರುಗಳಾದ ಬಿ.ವೈ.ರಾಘವೇಂದ್ರ, ಜಿ.ಎಂ.ಸಿದ್ದೇಶ್ವರ್, ಮುಖಂಡ ವಿಜೇಂದ್ರ ಮಾತನಾಡಿದರು. ಬಿ.ವೈ.ರಾಘವೇಂದ್ರ ಅವರ ಕುಟುಂಬವರ್ಗ,ಬಿ.ವೈ. ವಿಜೇಂದ್ರ ಅವರ ಕುಟುಂಬವರ್ಗದವರು ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಎಸ್.ಎಸ್.ಗಣೇಶ್ ಅವರ ಪುತ್ರ, ಉದ್ಯಮಿ ಎಸ್.ಬಿ.ಅಭಿಷೇಕ್, ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎ.ಹೆಚ್.ಶಿವಯೋಗಿಸ್ವಾಮಿ, ಡೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಹಾಪೌರ ಎಸ್.ಟಿ.ವಿರೇಶ್, ಪಾಲಿಕೆ ಸದಸ್ಯರುಗಳಾದ ಶಿವಾನಂದ್, ಪ್ರಸನ್ನಕುಮಾರ್, ಮುಖಂಡರುಗಳಾದ ಪಿ.ಸಿ.ಶ್ರೀನಿವಾಸ ಭಟ್, ಶಂಕರಗೌಡ ಬಿರಾದಾರ್, ಶಿವನಗೌಡ, ಹರೀಶ್ ಶಾಮನೂರು ಮತ್ತಿತರ ಗಣ್ಯರು ಶುಭ ಹಾರೈಸಿದರು.