ನಗರದ 05 ಪರೀಕ್ಷಾ ಕೇಂದ್ರಗಳಲ್ಲಿ ಇದೇ ನವೆಂಬರ್ 13
ಮತ್ತು 14 ರಂದು ಪಿಜಿಸಿಇಟಿ ಮತ್ತು ಡಿಸಿಇಟಿ-2021 ರ ಸಾಮಾನ್ಯ ಸಾಮಥ್ರ್ಯ
ಪರೀಕ್ಷೆಗಳು ನಡೆಯಲಿದ್ದು, ಸಂಬಂಧಿಸಿದ ಪರೀಕ್ಷಾ ಕೇಂದ್ರದಲ್ಲಿ
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ
ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ
ಸುತ್ತಲೂ 200 ಮೀಟರ್ ಪ್ರದೇಶವನ್ನು ಸಾರ್ವಜನಿಕ ಪ್ರವೇಶಕ್ಕೆ
ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಆದೇಶ ಹೊರಡಿಸಿರುತ್ತಾರೆ.
ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುವಾಗುವಂತೆ,
ನಗರದ ಎ.ವಿ ಕಮಲಮ್ಮ ಪಿಯು ಕಾಲೇಜಿಗೆ ಎಪಿಎಂಸಿ ಕಾರ್ಯದರ್ಶಿ
ಎಂ.ಇ.ಸುಮಾ, ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿಗೆ
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್,
ಆರ್.ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪರಿಸರ
ಅಧಿಕಾರಿ ಸಂತೋಷ್, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿಗೆ ತೂಕ
ಮತ್ತು ಮಾಪನ ಇಲಾಖೆ ಸಹಾಯಕ ನಿರ್ದೇಶಕ ರಾಜು.ಹೆಚ್.ಎನ್,
ಸೆಂಟ್‍ಪಾಲ್ ಪಿಯು ಕಾಲೇಜಿಗೆ ಪಶುಸಂಗೋಪನೆ ಇಲಾಖೆ
ಉಪನಿರ್ದೇಶಕ ಚಂದ್ರಶೇಖರ್ ಎಸ್.ಸುಂಕದ ಅವರನ್ನು ಆಯಾ
ಪರೀಕ್ಷಾ ಕೇಂದ್ರದ ವೀಕ್ಷಕರಾಗಿ ನೇಮಕ ಮಾಡಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ತಹಶೀಲ್ದಾರ್ ಗಿರೀಶ್
ಬಾಬು, ಸ.ಪ.ಪೂರ್ವ ಕಾಲೇಜು ಪ್ರಾಂಶುಪಾಲ ಶ್ರೀನಿವಾಸ ನೇತೃತ್ವದಲ್ಲಿ
ತಂಡ ರಚಿಸಲಾಗಿದ್ದು, 05 ಪರೀಕ್ಷಾ ಕೇಂದ್ರಗಳ ಸಂಪೂರ್ಣ ಜವಾಬ್ದಾರಿ
ವಹಿಸಲಾಗಿದೆ.
ನ.13 ರಂದು ಒಂದು ಪರೀಕ್ಷಾ ಕೇಂದ್ರ ಹಾಗೂ ನ.14 ರಂದು
ಐದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳು ನಡೆಯಲಿದ್ದು,
ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ
ಹಾಗೂ ಇತರೆ ರಹಸ್ಯ ಪತ್ರಗಳನ್ನು ಪರೀಕ್ಷಾ ಕೇಂದ್ರಗಳಿಗೆ
ತೆಗೆದುಕೊಂಡು ಹೋಗಲು ಮತ್ತು ಪರೀಕ್ಷೆಯ ನಂತರ
ತೆಗೆದುಕೊಂಡು ಬರಲು ಜವಾಬ್ದಾರಿ ವಹಿಸಿರುವ ಮಾರ್ಗಾಧಿಕಾರಿಗಳ
ತಂಡಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಪ್ರಶ್ನಪತ್ರಿಕೆಗಳನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ
ತಲುಪಿಸಲು ಮಾರ್ಗಾಧಿಕಾರಿಗಳನ್ನು ನೇಮಿಸಿದ್ದು, ಸಂಬಂಧಪಟ್ಟ
ಅಧಿಕಾರಿಗಳು ಜಿಲ್ಲಾ ಖಜಾನೆಗೆ ಬೆಳಿಗ್ಗೆ 8 ಗಂಟೆಗೆ ಹಾಜರಿರುವಂತೆ
ಆದೇಶಿಸಲಾಗಿದೆ.
ಪರೀಕ್ಷಾ ಕೇಂದ್ರಗಳು: ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ
ಕಾಲೇಜು, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಆರ್.ಸೀತಮ್ಮ
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಸೆಂಟ್‍ಪಾಲ್ ಪಿಯು
ಕಾಲೇಜು, ಎವಿ ಕಮಲಮ್ಮ ಪಿಯು ಕಾಲೇಜು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ವಿವರ: ಎಂಟೆಕ್ ಟೈಪ್ ‘ಬಿ’-24,
ಎಂಟೆಕ್ ಟೈಪ್ ‘ಎ’-336, ಎಂಸಿಎ-552, ಎಂಬಿಎ-984, ಡಿಸಿಇಟಿ-1176 ವಿದ್ಯಾರ್ಥಿಗಳು
ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ವೇಳಾಪಟ್ಟಿ: ನ.13 ರ ಶನಿವಾರ ಬೆಳಿಗ್ಗೆ 10.30 ರಿಂದ 12.30
ಹಾಗೂ ಮಧ್ಯಾಹ್ನ 2.30 ರಿಂದ 4.30 ರವರೆಗೆ ಎಂ.ಇ, ಎಂಟೆಕ್,
ಎಂ.ಆರ್ಕಿಟೆಕ್ ಪರೀಕ್ಷೆಗಳು ನಡೆಯಲಿವೆ. ನ.14 ರ ಭಾನುವಾರ
ಬೆಳಿಗ್ಗೆ 10.30 ರಿಂದ 12.30 ಹಾಗೂ ಮಧ್ಯಾಹ್ನ 2.30 ರಿಂದ 4.30 ರವರೆಗೆ
ಎಂ.ಬಿ.ಎ ಪರೀಕ್ಷೆಗಳು ಮತ್ತು ಬೆಳಿಗ್ಗೆ 10 ಗಂಟೆಯಿಂದ 01
ಗಂಟೆಯವರೆಗೆ ಡಿಪ್ಲೋಮಾ ಸಿಇಟಿ ಪರೀಕ್ಷೆಗಳು ನಡೆಯಲಿವೆ
ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.