ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಮುಖಂಡರು ಬಿಟ್ ಕಾಯಿನ್ ಹಗರಣವನ್ನು ದಾರಿತಪ್ಪಿಸಿ ಅನವಶ್ಯಕವಾಗಿ ವಿರೋಧ ಪಕ್ಷದ ವಿರುದ್ಧ ಆಧಾರ ರಹಿತ ಆರೋಪ ಹೊರೆಸುವುದರ ಮೂಲಕ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರು ರಕ್ಷಿಸಲು ಮುಂದಾಗಿರುವುದು ಈಗ ಬಹಿರಂಗವಾಗಿದೆ ಹಾಗೂ ಈ ಹಗರಣವನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂಬುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ದೇಶದ ಹಾಗೂ ರಾಜ್ಯದ ಜನ ಗಮನಿಸಿದರೆ ಭ್ರಷ್ಟಾಚಾರಕ್ಕೆ ಪ್ರಧಾನಿ ಮೋದಿಯೇ ಪ್ರೇರೇಪಣೆ ಎಂಬುದು ಈಗ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಹಾಗೂ ಬಿಟ್ ಕಾಯಿನ್ ಹಗರಣವನ್ನು ಮರೆಮಾಚಲು ಮುಖ್ಯಮಂತ್ರಿ ಪ್ರಧಾನಿಯನ್ನು ಭೇಟಿಯಾಗಿರುವುದು ಈಗ ಬಹಿರಂಗವಾಗಿದೆ,
ಕಾಂಗ್ರೆಸ್ ಪಕ್ಷ ಬಹಿರಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸವಾಲೆಸೆದು ಬಿಟ್ ಕಾಯಿನ್ ಹಗರಣವನ್ನು ಸರ್ವೋಚ್ಚ ನ್ಯಾಯಲಯದ ನ್ಯಾಯಮೂರ್ತಿಗಳಿಂದ ತನಿಖೆಗೆ ವಹಿಸಿ ಎಂದು ಒತ್ತಾಯಿಸಿದರು.
ಈ ಪ್ರಕರಣವನ್ನು ಸಿಸಿಬಿ ಸಿಐಡಿ ಹಾಗೂ ಇ.ಡಿ ಸಂಸ್ಥೆ ತನಿಖೆ ನಡೆಸುತ್ತಿದೆ ಎನ್ನುತ್ತಾರೆ
ಹಾಗಾದರೆ ತನಿಖೆಯ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಿಲ್ಲ ಯಾಕೆ ?
ಈ ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಂಧನವಾದರೂ ಆತ ಬಿಡುಗಡೆಯಾಗಿರುವುದನ್ನು ಗಮನಿಸಿದರೆ ಅವನಿಗೆ ಸಂಪೂರ್ಣ ಸಹಕಾರವನ್ನು ಸರ್ಕಾರ ನೀಡಿದಂತೆ ತೋರುತ್ತಿದೆ,
ಸಾವಿರಾರು ಕೋಟಿ ಹಗರಣವನ್ನು ಮುಚ್ಚಿಹಾಕಲು ಬಿಜೆಪಿ ಕೇಂದ್ರ ರಾಜ್ಯ ಹಾಗೂ ಸರ್ಕಾರಗಳು ನಡೆಸುತ್ತಿರುವ ಕುತಂತ್ರ ಈಗ ಬಹಿರಂಗವಾಗಿದೆ,
ಕೂಡಲೇ ಕಾಂಗ್ರೆಸ್ ಪಕ್ಷದ ಒತ್ತಾಸೆಯಂತೆ ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಿ ಸತ್ಯಾಂಶವನ್ನು ಜನತೆ ಮುಂದೆ ತಿಳಿಸದೆ ಹೋದರೆ ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಸಹ ಭಾಗಿಯಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ,
ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ದೇಶದ್ರೋಹಿ ಹೇಳಿಕೆ ನೀಡಿರುವ ಚಿತ್ರ ನಟಿ ಕಂಗನಾ ರಣಾವತ್ ದೇಶದ ಜನರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕ್ಷಮೆಕೋರಿ ದೇಶದಿಂದ ತೊಲಗಬೇಕೆಂದು ಸಹ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
2014 ರ ನಂತರ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂಬ ಕಂಗನಾ ರಾಣಾವತ್ ಹೇಳಿಕೆಯನ್ನು ಗಮನಿಸಿದರೆ 1947 ರಲ್ಲಿ ಸ್ವಾತಂತ್ರಕ್ಕಾಗಿ ಮಡಿದವರು ಯಾರು ಎಂಬುದನ್ನು ಬಿಜೆಪಿಯವರು ತಿಳಿಸಬೇಕು,
ಇಂತಹ ದೇಶದ್ರೋಹಿ ಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಅತ್ಯಂತ ದುರದೃಷ್ಟಕರ ಕೂಡಲೇ ಈ ಪ್ರಶಸ್ತಿಯನ್ನು ವಾಪಸ್ ಪಡೆದು ಇವಳನ್ನ ದೇಶದಿಂದ ಗಡಿಪಾರು ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಸಹ ಒತ್ತಾಯಿಸಲಾಯಿತು.
ಈ ಪ್ರತಿಭಟನೆಯನ್ನು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆಸಲಾಯಿತು. ಪಕ್ಷದ ಮುಖಂಡರಾದ ಎಸ್ ಮನೋಹರ್ ಜಿ ಜನಾರ್ದನ್ ವಿ ಆನಂದ್ ಎಲ್ ಜಯಸಿಂಹ ಪುಟ್ಟರಾಜು ಪ್ರಕಾಶ್ ವೆಂಕಟೇಶ ತೇಜೇಶ್ ಕುಮಾರ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.