(ಬಿಜೆಪಿಯವರು ಸಿದ್ಧರಾಮಯ್ಯನವರ ವಿರುದ್ದ ಹೇಳಿಕೆ ಕೂಡಲೆ ನಿಲ್ಲಿಸಿದರೆ ಸರಿ, ಇಲ್ಲವಾದರೆ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ – ದಲಿತ ಮುಖಂಡ ದಿಡಗೂರು ತಮ್ಮಣ್ಣ )
ಹೊನ್ನಾಳಿ ; ಬಿಜೆಪಿ ಪಕ್ಷದ ಮುಖಂಡರು ಬಿಟ್ ಕಾಯಿನ್ ಪ್ರಕರಣವನ್ನು ಮರೆಮಾಚಲು ಸಿದ್ದರಾಮಯ್ಯ ವಿರುದ್ಧ ದಲಿತ ವಿರೋಧಿ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆಂದು ತಾಲ್ಲೂಕು ಅಹಿಂದಾ ಅಧ್ಯಕ್ಷ ಡಾ.ಈಶ್ವರ ನಾಯ್ಕ ಹೇಳಿದರು.
ಅವರು ಶುಕ್ರವಾರ ಅಹಿಂದಾ ಮುಖಂಡರು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಉಪಚುನಾವಣೆ ಸಂದರ್ಭದಲ್ಲಿ ಸಿದ್ಧರಾಮಯ್ಯನವರು ಗೋವಿಂದ ಕಾರಜೋಳ ಮತ್ತು ರಮೇಶ್ ಜಿಗಜಿಣಗಿ ಅವರು ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದನ್ನು ಬಿಜೆಪಿಯವರು ತಿರುಚಿ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದಿರುವುದಾಗಿ ಅಪಪ್ರಚಾರ ಮಾಡಲು ಮುಂದಾಗಿದ್ದಾರೆ.
ಸಿದ್ಧರಾಮಯ್ಯನವರು ದಲಿತ ವಿರೋಧಿಯಲ್ಲ ದಲಿತರ ದ್ವನಿಯಾಗಿ ಕೆಲಸ ಮಾಡಿದ್ದಾರೆಂದು ಕೆಲವು ಉದಾಹರಣೆಯ ಸಮೇತ ವಿವರಿಸಿದರು.
ಸಿದ್ದರಾಮಯ್ಯ ಅವರು ಈ ರಾಜ್ಯ ಕಂಡ ಅತ್ಯಂತ ಮುತ್ಸದ್ಧಿ ನಾಯಕ, ಯಾವ ಸಮಾಜಕ್ಕೂ ಕೇಡು ಬಯಸುವ ವ್ಯಕ್ತಿಯಲ್ಲ, ಎಲ್ಲಾ ಜಾತಿ ಜನಾಂಗಕ್ಕೂ ಕೊಡುಗೆಗಳನ್ನು ನೀಡಿರುವರು.
ಪರಿಶಿಷ್ಠ ಜಾತಿ, ಪಂಗಡದ ಸರ್ಕಾರಿ ನೌಕರರು ಮುಂಬಡ್ತಿ ಸೌಲಭ್ಯವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದಾಗ ಬಿಜೆಪಿ ಮುಖಂಡರ ಮೌನವಹಿಸಿದ್ದೇಕೆ?
ಸಿದ್ದರಾಮಯ್ಯ ಅವರು ಸುಗ್ರೀವಾಜ್ಞೆ ಮೂಲಕ ಸೌಲಭ್ಯವನ್ನು ಜಾರಿಗೊಳಿಸಿದರು.
ಅರ ಕ್ ಸಿದ್ದಪ್ಪ ಮಾತನಾಡಿ ದಲಿತರಿಗೆ ಅಭಿವೃದ್ಧಿ ಕಾರ್ಯಗಳು ಹಾಗು ಮಾನ್ಯತೆ ಸಿಕ್ಕು ಮುಖ್ಯವಾಹಿನಿಗೆ ಬಂದಿದ್ದಾರೆಂದರೆ ಅದು ಕಾಂಗ್ರೇಸ್ ಪಕ್ಷÀದಿಂದ ಮಾತ್ರವೇ ಸಾಧ್ಯ. ಇಲ್ಲಿ ಸಿದ್ದರಾಮಯ್ಯನವರ ಕೋಡುಗೆ ಆಪರವಾಗಿದ್ದರು ಬಿಜೆಪಿಯಲ್ಲಿರುವ ಕೆಲ ದಲಿತರು ಇವರ ವಿರುದ್ಧ ನೀಡುವ ಹೇಳಿಕೆಗಳನ್ನು ಕೂಡಲೆ ನಿಲ್ಲಿಸಬೇಕೆಂದರು.
ಕೆಪಿಸಿಸಿಯ ಹಿಂದೂಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಹೆಚ್ ಎ ಉಮಾಪತಿ ಮಾತನಾಡಿ ಬಿಜೆಪಿ ಸಂಸದರಾದ ಅನಂತ್ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಾಗ ಮತ್ತು ದಲಿತರನ್ನು ನಾಯಿಗಳು ಎಂದು ಸಂಭೋದಿಸಿದಾಗ ಬಾಯಿ ಮುಚ್ಚಿಕೊಂಡಿದ್ದ ಬಿಜೆಪಿ ದಲಿತ ನಾಯಕರು ಈಗ ಸಿದ್ದರಾಮಯ್ಯ ವಿರುದ್ಧ ಕೂಗು ಹಾಕುತ್ತಿರುವುದು ಅವರ ರಾಜಕೀಯ ಸ್ವಾರ್ಥಕ್ಕಾಗಿ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ಮುಖಂಡರಾದ ದಿಡಗೂರು ತಮ್ಮಣ್ಣ ,ಕೆಂಗಲಹಳ್ಳಿ ಪ್ರಭಾಕರ,ಎಚ್.ಬಿ. ಶಿವಯೋಗಿ, ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜಪ್ಪ, ದಲಿತ ಮುಖಂಡ ಕುಂದೂರು ರಾಜಪ್ಪ, ಶ್ರೀನಿವಾಸ್ ಉಪಸ್ಥಿತರಿದ್ದರು.