ಕಾಂಗ್ರೆಸ್ ಪಕ್ಷದಿಂದ ಬಿ.ಬಿ.ಎಂ.ಪಿ.ಚುನಾವಣೆಗೆ ಭರ್ಜರಿ ತಯಾರಿ
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮನೆ ,ಮನೆಗೆ ಭೇಟಿ ನೀಡಬೇಕು ,ಮತದಾರರ ಪಟ್ಟಿ ಕರಡು ಪ್ರತಿಯಲ್ಲಿ ಬೋಗಸ್ ಮತದಾರರನ್ನು ಪತ್ತೆ ಮಾಡಿ ,ಡಿಲಿಟ್ ಮಾಡಿಸಬೇಕು -ರಾಮಲಿಂಗಾರೆಡ್ಡಿ
ಕಾಂಗ್ರೆಸ್ ಭವನ ರೇಸ್ ಕೋರ್ಸ್ ನಲ್ಲಿ ಬೆಂಗಳೂರುನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಭೆ ಆಯೋಜಿಸಲಾಗಿತ್ತು .
ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿರವರು ,ಶಾಸಕರಾದ ಎನ್.ಎ.ಹ್ಯಾರೀಸ್ ಮತ್ತು ನಗರ ಜಿಲ್ಲಾ ಅಧ್ಯಕ್ಷರುಗಳಾದ ಶೇಖರ್ ,ಜಿ.ಕೃಷ್ಣಪ್ಪರವರು ಭಾಗವಹಿಸಿದ್ದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮಹಮದ್ಮ ರಿಜ್ಞಾನ್ ನವಾಬ್ ,ಜಿ.ಕೃಷ್ಣಮೂರ್ತಿ ,
ಶಿವಕುಮಾರ್ ,ಅಭಿಲಾಶ್ ರೆಡ್ಡಿ ,ನವೀನ್ ಕುಮಾರ್ ರಾಥೋಡ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಧಕೃಷ್ಣ ,ವೆಂಕಟೇಶ್ ,ಸರವಣ ಮತ್ತು ಬ್ಲಾಕ್ ಕಾಂಗ್ರೆಸ್ ,ಅಲ್ಪಸಂಖ್ಯಾತ ,ಎಸ್.ಸಿ./ಎಸ್.ಟಿ.ಘಟಕ ಮತ್ತು ಮಂಚೂಣಿ ಘಟಕದ ಮುಖಂಡರುಗಳು ಪಾಲ್ಗೊಂಡಿದ್ದರು.
ರಾಮಲಿಂಗಾರೆಡ್ಡಿ ರವರು ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗಳಿಗೆ ಭೇಟಿ ನೀಡಬೇಕು .ದೇಶಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಕೊಟ್ಟ ಕೊಡುಗೆಗಳ ಬಗ್ಗೆ ಅರಿವು ಮೂಡಿಸಬೇಕು ಮತ್ತು ಬಿ.ಜೆ.ಪಿ.ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕು .
ಕಾಂಗ್ರೆಸ್ ಪಕ್ಷ ಸದಸ್ಯತ್ವ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಬೇಕು .
ಇದೇ ತಿಂಗಳು 18ನೇ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದೆ .ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಪಟ್ಟಿ ಪರಿಶೀಲನೆ ಮಾಡಬೇಕು ವಿಳಾಸ ಬದಲಾವಣೆಯಾದವರು ಮತ್ತು ಮರಣ ಹೊಂದಿದವರು ಹಾಗೂ ಮತದಾರರ ಪಟ್ಟಿಯಲ್ಲಿ ಬೋಗಸ್ ಮತದಾರರು ಸೇರ್ಪಡೆಯಾಗಿದ್ದಾರೆ ಅದನ್ನ ಪತ್ತೆ ಹಚ್ಚಿ ಮತದಾರರ ಪಟ್ಟಿಯಿಂದ ಡಿಲಿಟ್ ಮಾಡಿಸಬೇಕು .ಡಿಲಿಟ್ ಮಾಡದೇ ಹೋದರೆ ಹೋರಾಟ ಮಾಡೋಣ ಎಂದು ಹೇಳಿದರು.