ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ .
ನಂತರ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಇಂದು ನಮ್ಮೆಲ್ಲರ ಪಾಲಿಗೆ ಮಹತ್ವಪೂರ್ಣ ದಿನ. ದೇಶದ ಪ್ರಧಾನಿ ಪಂಡಿತ್ ನೆಹರೂ ಅವರ ಜನ್ಮದಿನ.
ಅವರು ದೇಶದ ಪ್ರಥಮ ಪ್ರಧಾನಿ ಮಾತ್ರವಲ್ಲ. ದೇಶದ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿ. ತಮ್ಮ ಯೌವನದ ಒಂಭತ್ತೂವರೆ ವರ್ಷಗಳ ಕಾಲ ಆಂಗ್ಲರ ಜೈಲಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಮಹಾತ್ಮ ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ಸರ್ದಾರ್ ಪಟೇಲ್, ಮೌಲಾನಾ ಅಬ್ದುಲ್ ಅಜಾದ್, ಡಾ.ರಾಜೇಂದ್ರ ಪ್ರಸಾದ್, ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್, ಸುಖ್ ದೇವ್ ಹಾಗೂ ಕೋಟ್ಯಂತರ ಸ್ವಾತಂತ್ರ್ಯ ಸೇನಾನಿಗಳ ಜತೆಗೂಡಿ ಹೋರಾಟ ಮಾಡಿದ್ದಾರೆ.
ಸ್ವತಂತ್ರ ಭಾರತ ನೆಹರೂ ಅವರ ಕನಸಾಗಿತ್ತು ನಿಜ. ಜತಗೆ ಸಂವಿಧಾನವೇ ಶ್ರೇಷ್ಠ ಧರ್ಮ, ಅದಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ ಎಂಬುದು ಅವರ ಕನಸಾಗಿತ್ತು.
ಎಲ್ಲ ವರ್ಗದವರಿಗೂ ಸಮಾನವಾಗಿ ನ್ಯಾಯ ನೀಡುವ ಸಂವಿಧಾನ ಭಾರತಕ್ಕೆ ಬೇಕೆಂಬುದು ಅವರ ಕನಸಾಗಿತ್ತು. ಯಾವುದೇ ವ್ಯಕ್ತಿಯನ್ನು ಜಾತಿ, ಧರ್ಮ, ವರ್ಣ, ಭಾಷೆಯ ಬೇಧದಿಂದ ನೋಡಬಾರದು ಎಂಬುದು ಅವರ ಕನಸಾಗಿತ್ತು. ಇಂತಹ ಪರಿಕಲ್ಪನೆಯ ಭಾರತ ನಿರ್ಮಾಣ ನೆಹರೂ ಅವರ ಕನಸಾಗಿತ್ತು.
ಆದರೆ ಇಂದು ನಾವು ನೆಹರೂ ಅವರನ್ನು ಸ್ಮರಿಸುವುದರ ಜತೆಗೆ ಅವರ ತತ್ವ ಸಿದ್ಧಾಂತಗಳನ್ನು ಸ್ಮರಿಸಿ, ಪಾಲಿಸಬೇಕಾಗಿದೆ.
ಇಂದು ನಮ್ಮ ಪಾಲಿಗೆ ಮತ್ತೊಂದು ಮಹತ್ವಪೂರ್ಣ ದಿನ. ಕಾಂಗ್ರೆಸ್ ನವೆಂಬರ್ 1 ರಿಂದ ದೇಶದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಆರಂಭವಾಗಿದೆ. ಇಂದು ಎಲ್ಲ ಜಿಲ್ಲೆಗಳ ಬ್ಲಾಕ್ ಮಟ್ಟದಿಂದ ನಾಯಕರು ಇಲ್ಲಿ ಸೇರಿ, ತಳಮಟ್ಟದ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಅಭಿಯಾನ.
ರಾಜ್ಯದ ಪ್ರತಿ ಮಹಿಳೆ, ಯುವಕರು, ದಲಿತರು, ಬಡವರು, ಹಿಂದುಳಿದವರನ್ನು ತಲುಪುವ ಅಭಿಯಾನವಿದು.
ನೀವು ಯಾಕೆ ಕಾಂಗ್ರೆಸ್ ಸದಸ್ಯರಾಗಬೇಕು ಎಂಬುದನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ.
ಇಂದು ದೇಶದಲ್ಲಿ ನಮ್ಮ ಸಂವಿಧಾನದ ಮೇಲೆ ದಾಳಿಯಾಗುತ್ತಿದೆ. ಹಿರಿಯ ನಾಯಕರ ತತ್ವ, ನೀತಿ, ಮೌಲ್ಯಗಳು ಅಪಾಯಕ್ಕೆ ಸಿಲುಕಿವೆ. ಸಂವಿಧಾನದ ಮೇಲೆ ದಾಳಿ ನಡೆದರೆ ಮೊದಲು ನಮ್ಮ ದೇಶದ ಜನರ ಅಧಿಕಾರಕ್ಕೆ ಕುತ್ತು ಬರುತ್ತದೆ.
ಈ ದೇಶದ ದಲಿತರು, ಶೋಷಿತರ, ಆದಿವಾಸಿ, ಅಲ್ಪಸಂಖ್ಯಾತ, ಮಹಿಳೆಯರ ಹಕ್ಕು ಕಸಿಯಲಾಗುತ್ತದೆ. ಹೀಗಾಗಿ ಕಾಂಗ್ರೆಸ್ ದೇಶಕ್ಕೆ ಅಗತ್ಯವಾಗಿದೆ.
ಈ ದೇಶದಲ್ಲಿ ಯುವಕರು ಉತ್ತಮ ಅವಕಾಶ, ಬೆಳೆಯಲು ಉತ್ತಮ ಹಾದಿ, ಉತ್ತಮ ಬದುಕು, ಶಿಕ್ಷಣ, ಉದ್ಯೋಗ ಬಯಸುತ್ತಿದ್ದಾರೆ. ಆದರೆ ಈ ಯುವ ಸಮೂಹದ ಮೇಲೆ ಇಂದು ದಾಳಿಯಾಗುತ್ತಿದೆ. ಇದನ್ನು ತಡೆಯಲು ಕಾಂಗ್ರೆಸ್ ಅಗತ್ಯವಿದೆ.
ಅಧಿಕಾರದಲ್ಲಿರುವ ಕೆಲವು ದುಷ್ಟಶಕ್ತಿಗಳು ಈ ದಾಳಿ ನಡೆಸುತ್ತಿವೆ. ಅವರು ವ್ಯವಸ್ಥೆಯನ್ನು ಇದೇ ರೀತಿ ಬದಲಿಸುತ್ತಾ ಹೋದರೆ ಕೆಲವೇ ದಿನಗಳಲ್ಲಿ ಕೆಲವರ ಬಳಿ ಮಾತ್ರ ಹಕ್ಕು, ಅಧಿಕಾರ ಉಳಿಯುತ್ತದೆ. ಉದ್ಯಮಿಗಳು, ಪ್ರಧಾನಿಗಳ ಸ್ನೇಹಿತರು ಈ ದೇಶವನ್ನು ಆಳುತ್ತಾರೆ. ನಾವೆಲ್ಲರೂ ಅವರ ಹಿತಾಸಕ್ತಿಗೆ ಬಲಿಯಾಗ ಬೇಕಾಗುತ್ತದೆ. ಇದರಿಂದ ದೇಶ ರಕ್ಷಿಸಲು ಕಾಂಗ್ರೆಸ್ ಅನಿವಾರ್ಯವಾಗಿದೆ.
ಇಂದು ದೇಶದಲ್ಲಿ ಸಾರ್ವಜನಿಕ ಬ್ಯಾಂಕ್ ಗಳಲ್ಲಿ ಎನ್ ಪಿಎ ಪ್ರಮಾಣ 10 ಲಕ್ಷ ಕೋಟಿ ಮುಟ್ಟಿದೆ. ನೀವು ಬ್ಯಾಂಕ್ ನಲ್ಲಿ ಇಟ್ಟಿರುವ ಹಣ ತೆಗೆಯಲು ನಿಮ್ಮಿಂದ ಹಣ ವಸೂಲಿ ಮಾಡುತ್ತಾರೆ. ಆದರೆ ಕಳೆದ 7 ವರ್ಷಗಳಲ್ಲಿ ಉದ್ಯಮಿಗಳ 8 ಲಕ್ಷ ಕೋಟಿ ರು. ಸಾಲ ಮನ್ನಾ ಆಗಿದೆ.
34 ಬ್ಯಾಂಕ್ ಬಾಗಿಲು ಮುಚ್ಚಿವೆ. ಸಾರ್ವಜನಿಕ ಬ್ಯಾಂಕ್ ಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ 27 ರಿಂದ 12ಕ್ಕೆ ಇಳಿಸಿದೆ. ಇಂದಿರಾಗಾಂಧಿ ಅವರು ಬ್ಯಾಂಕ್ ಗಳನ್ನು ರಾಷ್ಟೀಕರಣ ಮಾಡಿದ್ದು ಏಕೆ? ಬಡವರಿಗೆ ಹಣ, ಸಾಲ ಹಾಗೂ ಇತರ ಸೌಲಭ್ಯ ಸಿಗುವಂತಾಗಲಿ ಎಂಬ ಉದ್ದೇಶದಿಂದ. ಆದರೆ ಈಗ ಇದರ ಮೇಲೆ ದಾಳಿ ಆಗುತ್ತಿದೆ. ಅದನ್ನು ತಡೆಯಲು ಕಾಂಗ್ರೆಸ್ ಅಗತ್ಯವಾಗಿದೆ.
ದೇಶದ ಹಿತಕಾಯಲು ಕಾಂಗ್ರೆಸ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದಕ್ಕಾಗಿ ಕಾಂಗ್ರೆಸ್ ಅಗತ್ಯವಾಗಿದೆ. ಈ ಸಂದೇಶವನ್ನು ದೇಶದ ಮೂಲೆ ಮೂಲೆಗೆ ತಲುಪಿಸಬೇಕಾಗಿದೆ.
ರಾಜ್ಯದ ಎಲ್ಲ ವರ್ಗದ ಜನ ಕಾಂಗ್ರೆಸ್ ಪಕ್ಷದ ಸದಸ್ಯರಾಗಬೇಕಾಗಿದೆ. ನಮ್ಮ ಶಾಸಕರು, ಸಂಸದರ ಆಯ್ಕೆಯಾಗುವುದಕ್ಕೆ ಈ ಸದಸ್ಯತ್ವ ಅಭಿಯಾನ ನಡೆಸುತ್ತಿಲ್ಲ. ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಕಾಂಗ್ರೆಸ್ ಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದವರನ್ನು ತಲುಪಿ. ಭಾರತ ದೇಶವನ್ನು ರಕ್ಷಿಸಲು, ಈ ದೇಶ ಎಲ್ಲ ವರ್ಗದ ಜನರ ಹಿತ ರಕ್ಷಿಸಲು, ಸಮಾನತೆಯ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಸದಸ್ಯರಾಗುವಂತೆ ಮಾಡಬೇಕು.
ನಿಮ್ಮಲ್ಲಿ ಮಹಾತ್ಮ ಗಾಂಧೀಜಿ, ನೆಹರೂ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್ ಇದ್ದಾರೆ. ನಾವೆಲ್ಲರೂ ಸೇರಿ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಶ್ರಮಿಸೋಣ.
ಕಾಂಗ್ರೆಸ್ ಸದಸ್ಯತ್ವ ನೊಂದಣಿಯಲ್ಲಿ ಹೊಸ ದಾಖಲೆ ನಿರ್ಮಿಸೋಣ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕಾರ್ಯದರ್ಶಿ ರಮೀಂದರ್ ಸಿಂಗ್ ಔಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆಸಿದ ಕಲ್ಬುರ್ಗಿ ವಿಭಾಗೀಯ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಈಶ್ವರ ಖಂಡ್ರೆ, ಸಲೀಂ ಅಹಮದ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ರಾಜಶೇಖರ ಪಾಟೀಲ್, ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಬಯ್ಯಾಪುರ, ಬಸವರಾಜ ರಾಯರೆಡ್ಡಿ, ಬೋಸರಾಜ್, ವಿಜಯಸಿಂಗ್ ಮತ್ತಿತರರು ಭಾಗವಹಿಸಿದ್ದರು.