ತೇಜಸ್ವಿ ಪಟೇಲ್ ರಿಗೆ ವಿಧಾನ ಪರಿಷತ್ ನ ಟಿಕೆಟ್ ನೀಡಲು ಚೆನ್ನಗಿರಿ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರ ಒತ್ತಾಯ…!!

  • ಜೆ.ಹೆಚ್ ಪಟೇಲ್ ವಂಶದ ಅನುಭವಿ ರಾಜಕಾರಣಿ ತೇಜಸ್ವಿ ಪಟೇಲ್

ಶಿವಮೊಗ್ಗ :ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಲ್ ರವರ ಸಹೋದರ ವಿ ಹೆಚ್ ಪಟೇಲ್ ರವರ ಪುತ್ರ ತೇಜಸ್ವಿ ಪಟೇಲ್ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿ,ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲದ ನಿರ್ದೇಶಕರಾಗಿ ರೈತ ಪರ ವೇದಿಕೆಗಳಲ್ಲಿ ಅಧಿಕೃತವಾಗಿ ಜವಾಬ್ದಾರಿ ಹೊಂದಿದ್ದು, ಚನ್ನಗಿರಿ ತಾ ಹೊಸಕೆರೆ (ಬಸವ ಪಟ್ಟಣ) ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಅವರ ಪತ್ನಿ ಲತಾ ತೇಜಸ್ವಿ ಪಟೇಲ್ 2010 ರಿಂದ 2015 ರವರೆಗೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿ ಹತ್ತು ಹಲವು ಗಮನ ಸೆಳೆಯುವ ಕಾರ್ಯಗಳನ್ನು ಕೈಗೊಂಡಿದ್ದು,ಜನಪರ ಹೋರಾಟಗಳ ಮೂಲಕ ಸಾರ್ವಜನಿಕ ಭಾಗವಹಿಸುವಿಕೆ ಆರಂಭಿಸಿರುವ ತೇಜಸ್ವಿ ವಿ ಪಟೇಲ್ ದಾವಣಗೆರೆ ಜಿಲ್ಲೆಯ ರಾಜ್ಯದ ಗಮನ ಸೆಳೆಯುವ ಅನೇಕ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಸ್ವಯಂ ಪ್ರೇರಿತರಾಗಿ ಜೈಲ್ ಭರೋ ಚಳುವಳಿ ನಡೆಸಿ 15 ದಿನ ಜೈಲಿನಲ್ಲಿದ್ದು ಸಣ್ಣ ಹಿಡುವಳಿದಾರರ ದಾವಣಗೆರೆ ತಾಲೂಕಿನ ದೊಡ್ಡ ಭಾತಿಯ 185 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡಿಸುವಲ್ಲಿ ಹಾಗೂ ತಾಲೂಕಿನ 6 ವರ್ಷಗಳಿಂದ ಸ್ಥಗಿತಗೊಂಡಿದ್ದ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಾರಾರಂಭಿಸಿದರು.ಕರೂರು ಗ್ರಾಮದ ಸು 150 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆಂದು ಸ್ವಾದಿನ ಪಡಿಸಿಕೊಂಡು ತಾಂತ್ರಿಕ ನೆಪದಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿದ್ದನ್ನು ಪ್ರಶ್ನಿಸಿ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಸತತ ಧರಣಿ ನಡಿಸಿ 8 ಕೋಟಿ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ತಾಲೂಕಿನ ಬೆಳಲೆಗೆರೆ ಗ್ರಾಮದ ಗೋಮಾಳವನ್ನು ರೈತರಿಂದ ಕಸಿದುಕೊಳ್ಳುವ ಪ್ರಯತ್ನಕ್ಕೆ ಹೋರಾಟದ ಮೂಲಕ ಸು 61 ಎಕರೆ ಜಮೀನು ರೈತರಿಗೆ ಸಿಗುವಂತೆ ಮಾಡಿದ್ದು, ಮೂಲತಃ ರಾಜಕೀಯ ಕುಟುಂಬದಿಂದ ಬಂದುರುವ ತೇಜಸ್ವಿ ಪಟೇಲ್ 2009 ರಿಂದ ಈವರೆಗೂ ನಡೆಸಿರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದಿದ್ದರು ಕೊಡ ಜಾತ್ಯಾತೀತ ನಿಲುವನ್ನು ಬೆಂಬಲಿಸಿರುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಹುರಿದುಂಬಿಸಿದ್ದಾರೆ. ಸೌಹಾರ್ದ ವೇದಿಕೆ,ಮಾನವ ಬಂಧುತ್ವ ವೇದಿಕೆಗಳಂತಹ ಸಾಮಾಜಿಕ ಸಂಘಟನೆಗಳಲ್ಲಿಯು ಸಕ್ರಿಯ ಲವಾಗಿ ಪಾಲ್ಗೊಂಡಿದ್ದರು. ದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಮಾರಕ ಮೂರು ಕಾಯಿದೆ ವಿರುದ್ಧ ನಡೆಯುವ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ತೇಜಸ್ವಿ ವಿ ಪಟೇಲ್ ರನ್ನು ಸ್ಥಳೀಯ ಸಂಸ್ಥೆಗಳು ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರಕ್ಕೆ ಹಾಲಿ ಸದಸ್ಯ ಪ್ರಸನ್ನ ಕುಮಾರ್ ರವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕೆಂಬ ಒತ್ತಾಯವು ದಾವಣಗೆರೆ ಜಿಲ್ಲೆಯಲ್ಲಿ ಆರಂಭವಾಗಿದೆ.

Leave a Reply

Your email address will not be published. Required fields are marked *