ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 13 /11 /2021 ರಂದು ಇಂದು ಹೊನ್ನಾಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ 20 20/ 21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಏರ್ಪಡಿಲಾಗಿತ್ತು, ಇದರ ಉದ್ಘಾಟನೆಯನ್ನು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ನೆರವೇರಿಸಿದರು.
20 20 /21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ನಡುವಳಿಕೆಗಳನ್ನು ಮುಖ್ಯ ಕಾರ್ಯನಿರ್ವಾಹಕರಾದ ಮುರುಗೇಶಪ್ಪ ನವರು ಸವಿಸ್ತಾರವಾಗಿ ಲೆಕ್ಕಪತ್ರ ಲಾಭ ಮತ್ತು ನಷ್ಟದ ಬಗ್ಗೆ ಸಹಕಾರ ಸಂಘದ ಸದಸ್ಯರುಗಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರುಗಳ ನೇತೃತ್ವದಲ್ಲಿ ಚರ್ಚೆ ಜೊತೆಗೆ ಲೆಕ್ಕದ ವಿವರವನ್ನು ಸವಿಸ್ತಾರವಾಗಿ ತಿಳಿಸಿದರು.
ಈ ಚರ್ಚೆ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕರಾದ ಹನುಮನಹಳ್ಳಿ ಬಸವ ರಾಜಪ್ಪನವರು ಎದ್ದು ನಿಂತು ಕಾರ್ಯನಿರ್ವಾಹಕರಿಗೆ ನೀವುಗಳು ಸಹಕಾರ ಮಂಡಳಿಯ ಮಳಿಗೆಯನ್ನು ಬಾಡಿಗೆಗೆ ಕೊಟ್ಟಿದ್ದೀರಿ, ಆ ಬಾಡಿಗೆಯನ್ನು ಸರಿಯಾಗಿ ವಸೂಲು ಮಾಡಿಲ್ಲ ,ನೀವು ಏನು ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದಾಗ ,ಮಧ್ಯಪ್ರವೇಶ ಮಾಡಿದ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಮಾತನಾಡುತ್ತ ಹೊಸದಾಗಿ ಈ ವರ್ಷದ ಅವಧಿಯಲ್ಲಿ ರೂಮಿನ ಅಗ್ರಿಮೆಂಟ್ ನ್ನು ಮಾಡಿಕೊಂಡು ಬಾಡಿಗೆ ದರವನ್ನು ಈ ಸಾಲಿನಲ್ಲಿ ಏರಿಸಲಾಗಿದೆ. ಹಳೆಯ ಬಾಡಿಗೆ ಯು ಸಹ ಶೇಕಡ 90/; ಪರ್ಸೆಂಟ್ ವಸುಲಾತಿ ಯಾಗಿದ್ದು ,ಶೇಕಡಾ 10/; ಪರ್ಸೆಂಟ್ ರಷ್ಟು ಬಾಕಿ ಇದ್ದು ಆ ಬಾಡಗಿ ಹಣವನ್ನು ಎರಡರಿಂದ ಮೂರು ತಿಂಗಳ ಒಳಗೆ ವಸೂಲಿ ಮಾಡಲಾಗುವುದು.ಆ ಬಾಡಿಗೆಯನ್ನು ಬಾಡಿಗೆದಾರರು ಸರಿಯಾಗಿ ಕಟ್ಟದಿದ್ದರೆ ತಿಂಗಳಿಗೊಮ್ಮೆ ನಡೆಯುವ ಸರ್ವಸದಸ್ಯರ ಸಭೆಯಲ್ಲಿ ಚರ್ಚಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಅವರು ಈ ಸಭೆಯಲ್ಲಿ ತಿಳಿಸಿದರು.
ತದಾದ ನಂತರ ಆ ಸಹಕಾರ ಸಂಘದ ಸರ್ವಸದಸ್ಯರ ಮಕ್ಕಳುಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಕ್ಲಾಸಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಾವಿರ ಮೊತ್ತದ ಚೆಕ್ಕನ್ನು ವಿತರಣೆಯ ಜೊತೆಗೆ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಯಿತು.
ಆ ವಿಧ್ಯಾರ್ಥಿ ನಿಯರುಗಳಿಗೆ ಡಿ ಜಿ ಶಾಂತನಗೌಡ್ರು ರವರು ಅಮೃತ ಹಸ್ತದಿಂದ ಪ್ರಶಸ್ತಿಯನ್ನು ವಿತರಿಸಲಾಯಿತು.
ಉಪಸ್ಥಿತಿಯಲ್ಲಿ ಡಿ ಜಿ ಶಾಂತನ ಗೌಡ್ರು ಮಾಜಿ ಶಾಸಕರು ಹೊನ್ನಾಳಿ ಅಧ್ಯಕ್ಷರಾದ ಸುರೇಶ್ ಎಮ್ ಸಿ ,ಉಪಾಧ್ಯಕ್ಷರುಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಸರ್ವ ನಿರ್ದೇಶಕರುಗಳು ,ನಾಮ ನಿರ್ದೇಶಕರುಗಳು ಹಾಗೂ ಕಾರ್ಯನಿರ್ವಾಹಕರಾದ ಜಿ ಇ ಮುರುಗೇಶಪ್ಪ ,ಗುಮಾಸ್ತ ರಾದ ಎಸ್ ಆರ್ ಗೋಪಿ, ಶ್ರೀಮತಿ ಸುಧಾ ,w.h. ಸುರೇಶ್, ಅರುಣ್ ಕಮಾರ್ ,ಹಾಗೂ ಈ ಕಾರ್ಯ ಕ್ರಮದಲ್ಲಿ ಎಲ್ಲಾ ಶೇರು ಹೋಲ್ಡರ್ ಗಳು ಸಹ ಭಾಗಿಯಾಗಿದ್ದರು.