ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಅಂಗನವಾಡಿ ಸಹಾಯಕಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಭಾರತಿ (30) ಕೋ ಲೇಟ್ ನಾಗರಾಜ್ ಎಂಬುವರನ್ನು ಅದೇ ಗ್ರಾಮದ ಮೃತೆ ಗಂಡನ ಅಕ್ಕನ ಮಗನಾದ ದಿವಾಕರ್ (25) ಎಂಬುವನು ಅಂಗನವಾಡಿ ಕಟ್ಟಡದ ಹಿಂಭಾಗ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
.ಈ ಘಟನೆ ನಡೆದ ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ವಾಸವಿರುವ ಮನೆಯ ಓರ್ವ ಮಹಿಳೆ ಘಟನೆಯನ್ನು ನೋಡಿದ್ದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಲ ಸಾರ್ವಜನಿಕರು ಈ ಘಟನೆಯನ್ನು ನೋಡಿದ್ದು, ಕಾಪಾಡಲೆಂದು ಹೋಗುವಾಗ ನಿಮ್ಮನ್ನು ಕೊಲೆ ಮಾಡುತ್ತಾನೆ ಎಂದು ಬೆದರಿಕೆ ಹಾಕಿ,ಓಡಿ ಹೋಗಿರುತ್ತಾನೆ.
ಈ ಘಟನೆ ನಡೆದ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸರು ಆಗಮಿಸಿದ್ದು, ಮುಂದಿನ ಕ್ರಮ ಜರುಗಿಸುವ ಈ ನಿಟ್ಟಿನಲ್ಲಿ ಗ್ರಾಮಸ್ಥರು ಕಾಯತೊಡಗಿದ್ದಾರೆ.

ಹೊನ್ನವಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದು ಅರೋಪಿ ಪತ್ತೆಗೆ ಬಲೆ ಬೀಸಲಾಗಿದೆ.
ಈ ಘಟನೆಯನ್ನು ಸಿಐಟಿಯು ಜಿಲ್ಲಾ ಸಮಿತಿಯು ಉಗ್ರವಾಗಿ ಖಂಡಿಸಿದೆ. ಎಂತಹದ್ದೆ ಸಮಸ್ಯೆ ಇದ್ದರು ಜೀವದ ಬಲಿ ಪಡೆಯುವುದು ಸ್ವೀಕಾರಾರ್ಹ ವಲ್ಲ. ಕೊಲೆಗಡುಕರನ್ನು ಈ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಲು ಸಿಐಟಿಯು ಜಿಲ್ಲಾ ಸಮಿತಿ ಪೋಲಿಸರಿಗೆ ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *