52ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಪನೋರಮಾ ವಿಭಾಗಕ್ಕೆ 4 ಕನ್ನಡ ಚಿತ್ರಗಳ ಆಯ್ಕೆ
ಗೋವಾದಲ್ಲಿ ನಡೆಯಲಿರುವ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಭಾರತೀಯ ಪನೋರಮಾ ವಿಭಾಗದಲ್ಲಿ 25 ಫೀಚರ್ ಮತ್ತು 20 ನಾನ್‌ಫೀಚರ್ ಚಿತ್ರಗಳು ಆಯ್ಕೆಯಾಗಿವೆ. ಈ ಚಿತ್ರಗಳನ್ನು ಗೋವಾದಲ್ಲಿ ಇದೆ 20 ರಿಂದ 28 ರವರೆಗೆ ಪ್ರದರ್ಶಿಸಲಾಗುವುದು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಗೋವಾ ಸರ್ಕಾರದ ಸಹಭಾಗಿತ್ವದಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಿದೆ.
- ಸಾಗರ ಪುರಾಣಿಕ ನಿರ್ದೇಶನದ ’ಡೊಳ್ಳು’
- ಕೃಪಾಕರ ಅವರ ’ತಲೆದಂಡ’
- ಮನಸೊರೆ ನಿರ್ದೇಶನದ ’ಆಕ್ಟ್ 1978’
- ಗಣೇಶ ಹೆಗಡೆ ನಿರ್ದೇಶನದ ’ನೀಲಿ ಹಕ್ಕಿ’
ಫೀಚರ್ಸ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ನೇತೃತ್ವದಲ್ಲಿ, 12 ಜ್ಯೂರಿ ಸದಸ್ಯರನ್ನು ನೇಮಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.