ಕರುನಾಡಿನ ಯುವರತ್ನ, ಚಂದನ ವನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮರೆಯಾಗಿ ಇಂದಿಗೆ ಹದಿನೈದು ದಿನಗಳೇ ಆಗುತ್ತ ಬಂದಿದ್ದರೂ ಕೂಡ, ಅವರ ಅಗಲಿಕೆಯ ನೋವೂ ಮಾತ್ರ ಇಂದಿಂಗೂ ಯಾರಿಂದಲೂ ಮರೆಯಲೂ ಆಗುತ್ತಿಲ್ಲ. ಈ ಮಧ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಕನ್ನಡ ಚಿತ್ರ ರಂಗದ ಪವರಾಗಿ ಇಂದು ಬೆಂಗಳೂರಿನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಕನ್ನಡ ಚಿತ್ರ ರಂಗ ಸೇರಿದಂತೆ ದಕ್ಷಿಣ ಭಾರತದ ಚಿತರರಂಗದ ಎಲ್ಲ ನಟ ನಟಿಯರು ಭಾಗಿಯಾಗಿ ಪುನೀತ್ ರಾಜಕುಮಾರಗೆ ಪುಷ್ಪ್ ಸಮರ್ಪಿಸಿ ನುಡಿನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಕರುನಾಡಿನ ಯುವರತ್ನನಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದರು.