ಪ್ರಸಕ್ತ ಸಾಲಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಬಿವೃದ್ಧಿ ನಿಗಮದ
ವತಿಯಿಂದ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ,
ಸಿಖ್ಖರು, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರ ಸಾಮಾಜಿಕ,
ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ಧಿಗಾಗಿ
ಅನುಷ್ಠಾನಗೊಳಿಸುತ್ತಿರುವ ರಾಜ್ಯ ಸರ್ಕಾರ ಪ್ರಾಯೋಜಿತ
ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆನ್-ಲೈನ್ ಮೂಲಕ ಅರ್ಜಿ
ಆಹ್ವಾನಿಸಲಾಗಿದೆ.
ಶ್ರಮಶಕ್ತಿ ಯೋಜನೆ : ಅಲ್ಪಸಂಖ್ಯಾತ ಸಮುದಾಯದ
ಸಾಂಪ್ರದಾಯಕ ಕುಶಲಕರ್ಮಿಗಳಿಗೆ ಮತ್ತು
ಕುಲಕಸುಬುದಾರರಿಗೆ ಅವರ ವೃತ್ತಿ ಕೌಶಲ್ಯವನ್ನು ಅಭಿವೃದ್ಧಿ
ಪಡಿಸಿಕೊಳ್ಳಲು 50 ಸಾವಿರ ರೂ.ಗಳವರೆಗೆ ಶೇ.4 ರ ಬಡ್ಡಿ ದರದಲ್ಲಿ
ಸಾಲ ಸೌಲಭ್ಯ ನೀಡಲಾಗುವುದು. ನಿಗದಿತ ಅವಧಿಯೊಳಗೆ ಸಾಲ
ಮರುಪಾವತಿ ಮಾಡುವ ಅರ್ಜಿದಾರರಿಗೆ ಶೇ.50 ರ ಬ್ಯಾಂಕ್ ಎಂಡ್
ಸಹಾಯಧನ ಸಿಗುತ್ತದೆ.
ಕಿರು (ಮೈಕ್ರೋ ಸಾಲ) ಮತ್ತು ಸಹಾಯಧನ
ಯೋಜನೆ : ಅಲ್ಪಸಂಖ್ಯಾತರು ನಡೆಸುತ್ತಿರುವ ಮತ್ತು
ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ
ಸ್ವ-ಸಹಾಯ ಸಂಘಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ
ಚಟುವಟಿಕೆಗಳಿಗಾಗಿ ಪ್ರತಿ ಸದಸ್ಯರಿಗೆ ಶೇ.4ರ ಬಡ್ಡಿ ದರದಲ್ಲಿ ರೂ.10
ಸಾವಿರ ಸಾಲ ಸೌಲಭ್ಯ ನೀಡಲಾಗುವುದು. ಇದರಲ್ಲಿ ಶೇ.50 ರಷ್ಟು
ಸಹಾಯಧನ ಸಿಗುತ್ತದೆ.
ಗಂಗಾ ಕಲ್ಯಾಣ ಯೋಜನೆ : ವೈಯಕ್ತಿಕ ಕೊಳವೆಬಾವಿಗಳಿಗಾಗಿ
02 ಎಕರೆ ಮೇಲ್ಪಟ್ಟು 05 ಎಕರೆ ಒಳಗೆ ಕೃಷಿ ಜಮೀನು ಹೊಂದಿರುವ
ಅಲ್ಪಸಂಖ್ಯಾತ ಸಮುದಾಯಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ
ರೂ.2 ಲಕ್ಷಗಳ ಆರ್ಥಿಕ ನೆರವು ನೀಡಲಾಗುವುದು.
ಟ್ಯಾಕ್ಸಿ/ಸರಕು ಸಾಗಾಣಿ ವಾಹನ ಖರೀದಿ ಯೋಜನೆ : ಟ್ಯಾಕ್ಸಿ/ಸರಕು
ಸಾಗಣೆ ವಾಹನ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕುಗಳಿಂದ
ಪಡೆಯುವ ಸಾಲಕ್ಕೆ ನಿಗಮದಿಂದ ರೂ.75 ಸಾವಿರ ಸಹಾಯಧನ
ಸೌಲಭ್ಯ ನೀಡಲಾಗುವುದು.
ಮೈಕ್ರೋಸಾಲ (ವೈಯಕ್ತಿಕ) ಕೋವಿಡ್-19 ಸಾಲ
ಯೋಜನೆ : ಅಲ್ಪಸಂಖ್ಯಾತ ವರ್ಗದ ಮಹಿಳೆಯಾಗಿರಬೇಕು. ಒಂದು
ಕುಟುಂಬದಲ್ಲಿ ಒಬ್ಬ ಮಹಿಳೆಗೆ ಮಾತ್ರ ಸಾಲ ಸೌಲಭ್ಯ
ನೀಡಲಾಗುವುದು. ಶೇ.4 ರ ಬಡ್ಡಿ ದರದಲ್ಲಿ ಪ್ರತಿ
ಫಲಾನುಭವಿಗಳಿಗೆ ರೂ.2 ಸಾವಿರ ಸಹಾಯಧನ ಹಾಗೂ ರೂ.8
ಸಾವಿರ ಸಾಲ ಸೇರಿದಂತೆ ಒಟ್ಟು ರೂ.10 ಸಾವಿರ ಸಾಲ ಸೌಲಭ್ಯ
ನೀಡಲಾಗುವುದು.
ಅರ್ಜಿದಾರರು ಆನ್‍ಲೈನ್
ವೆಬ್‍ಸೈಟ್ : hಣಣಠಿs://ಞmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ
ಸಲ್ಲಿಸಬಹುದು. ಆನ್‍ಲೈನ್ ಅರ್ಜಿಯ ಹಾರ್ಡ್ ಕಾಪಿಯನ್ನು ಅಗತ್ಯ
ದಾಖಲಾತಿಗಳೊಂದಿಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಲು ಡಿ.12
ಕೊನೆಯ ದಿನಾಂಕವಾಗಿರುತ್ತದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ
ಹಾರ್ಡ್ ಕಾಪಿಯನ್ನು ಜಿಲ್ಲಾ ಕಚೇರಿಗೆ ಸಲ್ಲಿಸದೇ ಇದ್ದಲ್ಲಿ ಅವುಗಳನ್ನು
ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, (ನಿ) ಕುರುಬರ ಹಾಸ್ಟೆಲ್,
ಜಯದೇವ ವೃತ್ತದ ಹತ್ತಿರ, ದಾವಣಗೆರೆ. ದೂರವಾಣಿ ಸಂಖ್ಯೆ :
08192-232349 ಕ್ಕೆ ಸಂಪರ್ಕಿಸಬಹುದು ಎಂದು ್ಧ ನಿಗಮದ ಜಿಲ್ಲಾ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.