ಆರೋಗ್ಯ ತಪಾಸಣೆ ಶಿಬಿರ
ದಾವಣಗೆರೆ: ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ
ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ
ಆಸ್ಪತ್ರೆ ಹಾಗೂ ಬಾಪೂಜಿ ಡೆಂಟಲ್ ಕಾಲೇಜು, ಕಾಲೇಜು ಆಫ್
ಡೆಂಟಲ್ ಸೈನ್ಸ್ ವತಿಯಿಂದ ಮಹಿಳೆಯರಿಗಾಗಿ ಉಚಿತ ಆರೋಗ್ಯ
ಮತ್ತು ದಂತ ತಪಾಸಣಾ ಶಿಬಿರವನ್ನು ದಾವಣಗೆರೆ
ಮಹಾನಗರ 35ನೇ ವಾರ್ಡ್‍ನ ನಿಟುವಳ್ಳಿಯಲ್ಲಿ ಭಾನುವಾರ
ಹಮ್ಮಿಕೊಳ್ಳಲಾಗಿತ್ತು.
ಕಾಂಗ್ರೆಸ್ ಮುಖಂಡರಾದ ಗಣೇಶ್ ಹುಲ್ಮನಿ ಮಾತನಾಡಿ
ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ||
ಶಾಮನೂರು ಶಿವಶಂಕರಪ್ಪನವರು, ಜಂಟಿ ಕಾರ್ಯದರ್ಶಿ
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮತ್ತು ಸದಸ್ಯರಾದ ಶ್ರೀಮತಿ
ಪ್ರಭಾ ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ 35ನೇ
ವಾರ್ಡ್‍ನ ನಿಟುವಳ್ಳಿಯ ಸರ್ಕಾರಿ ಶಾಲೆಯಲ್ಲಿ ಈ ಶಿಬಿರ
ನಡೆಯುತ್ತಿದ್ದು, ಬಡ-ಮಧ್ಯಮ ವರ್ಗದವರಿಗೆ
ಅನುಕೂಲವಾಗುತ್ತಿದೆ ಎಂದರು.
ಶಿಬಿರದಲ್ಲಿ ಮಹಿಳೆಯರಿಗೆ ರಕ್ತ ತಪಾಸಣೆ, ಕಣ್ಣಿನ
ತಪಾಸಣೆ, ಸ್ತನ ಆರೋಗ್ಯ ತಪಾಸಣೆ, ದಂತ ತಪಾಸಣೆ
ಹಾಗೂ ಡಯಾಬಿಟಿಕ್ ನ್ಯೂರೋ ಥೆರಪಿ ಚಿಕಿತ್ಸೆ
ಮಾಡಲಾಯಿತು. ಸುಮಾರು 200ಕ್ಕೂ ಹೆಚ್ಚು
ಮಹಿಳೆಯರು ವಿವಿಧ ತಪಾಸಣೆಗೆ ಒಳಗಾದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ
ಶ್ರೀಮತಿ ಸವಿತಾ ಗಣೇಶ್ ಹುಲ್ಮನಿ, ಬಾಪೂಜಿ ಆಸ್ಪತ್ರೆಯ
ವೈದ್ಯಕೀಯ ನಿರ್ದೇಶಕರಾದ ಡಾ|| ಕುಮಾರ್, ಡಾ|| ಬಾಲು,
ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ||
ಎನ್.ಕೆ.ಕಾಳಪ್ಪನವರ್, ಉಪ ಪ್ರಾಂಶುಪಾಲರಾದ ಡಾ||
ಅರುಣಕುಮಾರ್, ಮುಖಂಡರುಗಳಾದ ಎಂ.ಆರ್.ಮಾಲತೇಶ್,
ಉಮೇಶ್ ಮತ್ತಿತರರಿದ್ದರು.