ರಾಜ್ಯಾದ್ಯಂತ ಕಳೆದ ವಾರದಿಂದ ತುಮಕೂರು ಜಿಲ್ಲೆಯೂ ಸೇರಿದಂತೆ ಭಾರಿ ಮಳೆ ಆಗಿ ರೈತರು ಬೆಳೆದ ಬೆಳೆಗಳು ರಾಗಿ, ಭತ್ತ, ಅಡಿಕೆ, ಈರುಳ್ಳಿ, ಹಾಗೂ ತರಕಾರಿ ಬೆಳೆಗಳು ಎಲ್ಲಾ ಬೆಳೆಗಳು ಮಳೆ ನೀರಿನಿಂದ ಕೊಚ್ಚಿ ಹೋಗಿವೆ. ನಗರಗಳು ಸೇರಿದಂತೆ ಸಾವಿರಾರು ಮನೆಗಳು ಬಿದ್ದು ಹೋಗಿವೆ, ಹಲವಾರು ರಾಸುಗಳು ಪ್ರಾಣ ಬಿಟ್ಟಿವೆ
. ರಸ್ತೆಗಳು ಕೊಚ್ಚಿ ಹೋಗಿವೆ. ಇದರಿಂದ ರೈತರ ಬದುಕು ದುಸ್ತರವಾಗಿದೆ. ಇಷ್ಟಾದರೂ ಸರ್ಕಾರ ಇದುವರೆವಿಗೂ ಯಾವುದೇ ಪರಿಹಾರ ಕಾರ್ಯಕ್ರಮ ಕೈಗೊಂಡಿಲ್ಲದಿರುವದು ದುರ್ದೆವ. ಕೂಡಲೇ ಸರ್ಕಾರ ರೈತರ ಕಷ್ಟಕ್ಕೆ ಸ್ಪಂಧಿಸಿ ಕೇಂದ್ರದ NDRF ನಿಧಿಯಿಂದ ಎಲ್ಲಾ ರೀತಿಯ ಪರಿಹಾರ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ ಎಂದ ಎಂ.ಡಿ.ಲಕ್ಷ್ಮೀನಾರಾಯಣ ಮಾಜಿ ಶಾಸಕರು ತುರುವೇಕೆರೆ ಕ್ಷೇತ್ರ. ಅಧ್ಯಕ್ಷರು ಹಿಂದುಳಿದ ವರ್ಗಗಳ ವಿಭಾಗ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು.