ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಡಿ ಜಿ ಶಾಂತನಗೌಡ್ರು ಅಭಿಮಾನಿ ಬಳಗ ಮತ್ತು ಹಿತೈಷಿಗಳ ವತಿಯಿಂದ ಡಿ ಜಿ ಶಾಂತನಗೌಡ್ರು ರವರರ 73ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ದಿನಾಂಕ 9-11 -2021ರಂದು ಮಧ್ಯಾಹ್ನ 3:00 ಗಂಟೆಗೆ ಸಭೆಗೆ ಅಭಿಮಾನಿಗಳು ಸೇರುತ್ತಾರೆ. ಆ ಸಭೆಗೆ 50ರಿಂದ60 ಜನ ಸೇರಿರುವ ಕಾರಣ ಆ ಸಭೆಯನ್ನು ಮುಂದೂಡಲಾಗುತ್ತದೆ, ದಿನಾಂಕ 11- 11- 21 ರಂದು ಎರಡನೇ ಪೂರ್ವಭಾವಿ ಸಬೆಯಲ್ಲಿ ಪ್ರತಿ ಯೊಬ್ಬರ ‌ಸಲಹೆ ಸೂಚನೆಗಳನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು. ಆ 2ನೇ ಪೂರ್ವಭಾವಿ ಸಭೆಗೆ 400ರಿಂದ500 ಜನ ಸೇರುತ್ತಾರೆ .

ಆ ಸಭೆಯಲ್ಲಿ ಯಾವ ಯಾವ ರೀತಿ ಕಾರ್ಯಕ್ರಮಗಳನ್ನು ಮಾಡಬೇಕೆಂದು ಅವರ ಅಭಿಮಾನಿಗಳಿಂದ ಚರ್ಚಿಸಲಾಗುತ್ತದೆ. ಆ ಸಭೆಯಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಲಹೆ ಸೂಚನೆ ಮತ್ತು ತಮ್ಮ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಆ ಸಭೆಯಲ್ಲಿ ತಿಳಿಸುತ್ತಾರ. ಆ ಚರ್ಚೆಯ ಸಮಯವೂ ತುಂಬಾ ಸಮಯವನ್ನು ತೆಗೆದುಕೊಂಡಿರುವ ಕಾರಣದಿಂದ ಮುಂದಿನ ಸಭೆಯಲ್ಲಿ ಅಂದರೆ ದಿನಾಂಕ 15 -11- 21 ರಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ಮೂರನೇ ಪೂರ್ವಭಾವಿ ಸಭೆಯು ನಡೆಯುತ್ತದೆ ಎಂದು ತಿಳಿಸಿದಾಗ. ಆ ಪೂರ್ವಭಾವಿ ಸಭೆಯು ದಿನಾಂಕ15/11/2021ರಂದು ಜನರು ಸೇರಿ ಚರ್ಚಿಸಲು ಬರುತ್ತಾರೆ . ಮಧ್ಯಾಹ್ನ ಮೂರರಿಂದ ನಾಲ್ಕು ಗಂಟೆ ,ನಾಲ್ಕರಿಂದ ಐದು ಗಂಟೆ ರವರೆಗೆ ಆ ಮೂರನೇ ಪೂರ್ವ ಬಾವಿ ಸಬೆಯು ಶುರುವಾಗದೆ ಇರುವ ಕಾರಣ ಅಭಿಮಾನಿಗಳಲ್ಲಿ ಆತಂಕದ ಜೊತೆಗೆ ಅಭಿಮನಿಗಳು ಗುಸು ಗುಸು ಮಾತು ಶುರುವಾಗುತ್ತದೆ.ನಂತರ ಒಬ್ಬರಿಗೊಬ್ಬರು ಮಾತನಾಡಲು ಪ್ರಾರಂಭಿಸುತ್ತಾರೆ, ಕಾರಣ ಇಷ್ಟೇ ಈ ಎರಡು ಪೂರ್ವಭಾವಿ ಸಭೆ ನಡೆದರೂ, ಡಿ.ಜಿ ಶಾಂತನಗೌಡ್ರು ರವರ ಗಮನಕ್ಕೆ ಬಾರದೆ ಮೂರನೆಯ ಪೂರ್ವಭಾವಿ ಸಭೆಯು ನಡೆಯುತ್ತಿದ್ದು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಅವರ ಗಮನಕ್ಕೆ ತರದೇ ಇರುವುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಯಿತೇ .? ಈ ಮೂರನೇ ಪೂರ್ವಭಾವಿ ಸಭೆ ಕಾರ್ಯಕ್ರಮ ನಡೆಯುತ್ತಿದೆ ,ಎಂದು ಅವರ ಗಮನಕ್ಕೆ ಬಂದಾದ, ನಂತರ ಆ ಕಾರ್ಯಕ್ರಮದಲ್ಲಿ ಇದ್ದ ಪ್ರತಿಯೊಂದು ಸಮಾಜದ ಮುಖಂಡರು ಹಾಗೂ ಹಿರೀಕರನ್ನು ಅವರ ಮನೆಗೆ ಕರೆಸಿಕೊಂಡು ಚರ್ಚಿಸಿ, ನೀವು ಯಾರನ್ನು ಕೇಳಿ ನನ್ನ ಹುಟ್ಟುಹಬ್ಬವನ್ನು ಮಾಡುತ್ತಿದ್ದೀರಿ ಎಂದು ಗರಂ ಆಗುತ್ತಾರೆ ,ಗರಂ ಆದ ನಂತರ ಅಲ್ಲಿರುವ ಹಿರೀಕರು ಡಿ ಜಿ ಶಾಂತನಗೌಡ್ರು ರನ್ನು ಸಮಾಧಾನ ಮಾಡಿ ತಮ್ಮ ಅಭಿಮಾನಿಗಳು ನಿಮ್ಮ 73ನೇ ಹುಟ್ಟುಹಬ್ಬವನ್ನು ಮಾಡಲು ಇಷ್ಟಪಟ್ಟಿದ್ದಾರೆ,ಈ ಹುಟ್ಟಿದ ಹಬ್ಬವನ್ನು ಆಚರಿಸಲು ಅನುಮತಿ ಕೂಡಿ, ಆಚರಿಸಿ ದಿದ್ದರೆ ಯುವಕರಗಳು ಬೇಜಾರಾಗುತ್ತಾರೆ .ಎಂದು ಮನವರಿಕೆ ಮಾಡಿದಾಗ ಅಲ್ಲಿರು ಮುಖಂಡರುಗಳಿಗೆ ಡಿ ಜಿ ಶಾಂತನಗೌಡರವರು ನನ್ನದೊಂದು ಶರತ್ ಇದೆ, ನನ್ನ ಮಾತು ಕೇಳುವುದಾದರೆ ನೀವು ಳು ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಮಾಡುವುದಿಲ್ಲ, ಎಂದು ಪ್ರಮಾಣ ಮಾಡಿ ಎಂದು ಹೇಳುತ್ತಾರೆ .ಅದಕ್ಕೆ ಇಷ್ಟವಿಲ್ಲ ದಿದ್ದರು ಮುಖಂಡರು ಗಳು ಒಪ್ಪಿಗೆ ಕೊಡುತ್ತಾರೆ. ಕೊಟ್ಟಾದ ನಂತರ ಡಿ ಜಿ ಶಾಂತನಗೌಡರ್ ಅವರು ಶಾಂತರಾಧ ನಂತರ ಸ್ವಲ್ಪ ಸಮಯ ಕಳೆದು ಅವರ ಮನೆಯಿಂದ ಅಭಿಮಾನಿಗಳು ಶ್ರೀ ತರಳಬಾಳು ಸಮುದಾಯ ಭವನಕ್ಕೆ ಕರೆದುಕೊಂಡು ಬರುತ್ತಾರೆ.

ಆ ಸಮುದಾಯ ಭವನದಲ್ಲಿ ಸೇರಿದ್ದ ಅಭಿಮಾನಿಗಳು ಹಾಗೂ ಹಿತೈಷಿಗಳು ಎದುರುಗಡೆ ಅದ್ದೂರಿಯಾಗಿ ನನ್ನ ಹುಟ್ಟು ಹಬ್ಬವನ್ನು ಮಾಡಲಿಕ್ಕೆ ನನ್ನ ಒಪ್ಪಿಗೆ ಇಲ್ಲ,ಎಂದು ಕೂಡಲೇ ಪ್ರತಿಯೊಬ್ಬ ಅಭಿಮಾನಿಗಳು ಸ್ತಬ್ಧವಾಗಿ ಬಿಡುತ್ತಾರೆ. ನಂತರ ನೀವು ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡಲಿಕ್ಕೆ 50ರಿಂದ 60 ಲಕ್ಷ ಹಣವನ್ನು ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಹಣನ್ನು, ಎತ್ತಿ ಆಕಲಿಕ್ಕೆ ಸಿದ್ಧರಿದ್ದೀರಿ, ಎಂದು ಬೇರೆಯವರಿಂದ ಕೇಳಿ ಪಟ್ಟಿದ್ದೇನೆ .ನೀವು ಆ ಹಣವನ್ನು ಶ್ರೀ ತರಳಬಾಳು ಸಮುದಾಯ ಭವನಕ್ಕೆ ಹಣವಿಲ್ಲದೇ ಕಾಮಗಾರಿ ನಿಂತಿದೆ . ನೀವು 50ಲಕ್ಷ ಹಣವನ್ನು ಅಭಿಮಾನಿಗಳಿಂದ ಎತ್ತಿ ಕೊಟ್ಟರೆ ,ಶ್ರೀಗಳಿಂದ ಅನುಮತಿ ಪಡೆದು ಮಠದ ವತಿಯಿಂದ ಸುಮಾರು 50 ಲಕ್ಷ ಹಣವನ್ನು ಈ ಸಮುದಾಯ ಭವನದ ಕೆಲಸಕ್ಕೆ ಕೊಡುಸುತ್ತೇನೆ ಎಂದು ಹೇಳಿದರು.

ಅದಕ್ಕೆ ಒಪ್ಪಿಗೆಯನ್ನು ಅಭಿಮಾನಿಗಳು ಚಪ್ಪಾಳೆಯ ಮೂಲಕ ಒಪ್ಪಿಗೆ ಸೂಚಿಸಿದಾಗ, ಡಿ ಜಿ ಶಾಂತನಗೌಡ್ರು ಅಭಿಮಾನಿಗಳ ಒತ್ತಡಕ್ಕೆ ಮಣಿದು, 8/12/2021 ರಂದು ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿಯ ಮೇರೆಗೆ ತೀರ್ಮಾನಿಸಲಾಯಿತು.

ನನ್ನ 73ನೇ ಹುಟ್ಟು ಹಬ್ಬವನ್ನು ಆಚರಸಲು ಇಷ್ಟೊಂದು ಅಭಿಮಾನಿಗಳು ಸೇರಿರುವುದು ಅದು ನನ್ನ ಪುಣ್ಯ .ನಿಮ್ಮ ಈ ಅಭಿಮಾನಕ್ಕೆ ನನ್ನ ಜೀವಿತ ಇರುವವರೆಗೂ ನನ್ನ ಜೀವವನ್ನು ಈ ಎರಡೂ ಅವಳಿ ತಾಲೂಕಿನ ಜನತೆಗೆ ಮುಡುಪಾಗಿ ಇಡುತ್ತೇನೆ ಎಂದು ಹೇಳಿದರು. ನೀವುಗಳು ಅದ್ದೂರಿಯಾಗಿ ಹುಟ್ಟಿದ ಹಬ್ಬವನ್ನು ಮಾಡಬಹುದಾದರೆ 75 ನೇ ವಸಂತಕ್ಕೆ ಮಾಡಬಹುದು .ಆ ಸಮಕ್ಕೆ ಏನೇ ಅದ್ದೂರಿ ಕಾರ್ಯಕ್ರಮ ಮಾಡಿದರು ಅದಕ್ಕೆ ನನ್ನ ಸಹಮತ ಇರುತ್ತದೆ. ನೀವುಗಳು ಯಾರು ಕೂಡಾ ಬೇಜಾರು ಮಾಡಿಕೊಳ್ಳ ಬಾರುದು , ಎಂದು ಕೈ ಮುಗಿದು ನಮಸ್ಕರಸಿ ಬಾಹುಕರಾದರು .
ಅಲ್ಲಿಗೆ ಅಭಿಮಾನಿಗಳು ಕೊಂಚ ಸಮಾಧಾನ ಪಟ್ಟುಕೊಂಡು ಅವರವರ ಮನೆಗೆ ತೆರಳಿದರು.

Leave a Reply

Your email address will not be published. Required fields are marked *