75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನ.18 ರಂದು
ಗುರುವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ
‘ಜನಪರ ಉತ್ಸವ 2021-22’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
       ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃದ್ಧಿ ಹಾಗೂ
ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ನೆರವೇರಿಸುವರು. ಕುರ್ಕಿ
ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಜಿ.ನಂದ್ಯಪ್ಪ ಅಧ್ಯಕ್ಷತೆ
ವಹಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ, ಮಾಯಕೊಂಡ
ಕ್ಷೇತ್ರದ ಶಾಸಕ ಹಾಗೂ ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ

ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಪ್ರೊ.ಎನ್.ಲಿಂಗಣ್ಣ
ಗೌರವಾನ್ವಿತ ಉಪಸ್ಥಿತಿಯಲ್ಲಿರುವರು.
       ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ
ಪ್ರೊ. ವಿ.ಹಲಸೆ., ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್,
ಚಿತ್ರದುರ್ಗ ಜಿಲ್ಲೆ ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ
ಕೇಂದ್ರದ ನಿರ್ದೇಶಕ ಡಾ.ಹೆಚ್.ವಿಶ್ವನಾಥ್, ಕುರ್ಕಿ ಗ್ರಾಮ ಪಂಚಾಯಿತಿ
ಉಪಾಧ್ಯಕ್ಷೆ ನಂದಿನಿ ಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ
ಮಹಾಂತೇಶ ಬಿ. ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಿ.ಬಿ.ರಿಷ್ಯಂತ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಕನ್ನಡ
ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್ ಛಲವಾದಿ,
ತಹಶೀಲ್ದಾರ್ ಬಿ.ಎನ್.ಗಿರೀಶ್ ಪಾಲ್ಗೊಳ್ಳುವರು.
       ಜನಪರ ಉತ್ಸವ ಅಂಗವಾಗಿ ದಾವಣಗೆರೆ ಹೆಗ್ಗೆರೆ ರಂಗಪ್ಪ ಅವರಿಂದ
ಜಾನಪದ ಸಂಗೀತ, ಕೊಂಡಜ್ಜಿ ಹನುಮಂತಪ್ಪ ಮತ್ತು
ತಂಡದವರಿಂದ ತಮಟೆ ವಾದನ, ಹಿರಿಯೂರು ಮಾಂತೇಶ್ ಮತ್ತು
ತಂಡದವರಿಂದ ಗಾರುಡಿ ಗೊಂಬೆ, ದಾವಣಗೆರೆ ನೇಸರ ಮತ್ತು
ತಂಡದವರಿಂದ ಮಹಿಳಾ ಡೊಳ್ಳು, ದಾವಣಗೆರೆ ಅನುರಾಧ ಮತ್ತು
ತಂಡದವರಿಂದ ಮಹಿಳಾ ವೀರಗಾಸೆ, ಬ್ಯಾಲದಕೆರೆ ನಾರಾಯಣಸ್ವಾಮಿ ಜಿ.
ಮತ್ತು ಸಂಗಡಿಗರಿಂದ ಹುಲಿವೇಷ, ಹೊದಿಗೆರೆ ಶಾಂತವೀರಪ್ಪ
ಮತ್ತು ತಂಡದವರಿಂದ ಭಜನೆ, ದಾವಣಗೆರೆ ಪ್ರಗತಿ ಶಿರ್ಶಿಕರ
ಅವರಿಂದ ಭರತನಾಟ್ಯ, ಗುಡಾಳ್ ಅಶೋಕ್ ಮತ್ತು ಸಂಗಡಿಗರಿಂದ
ವಾದ್ಯ ಸಂಗೀತ, ಆಲೂರುಹಟ್ಟಿ ಶೃತಿ ಮತ್ತು ಸಂಗಡಿಗರಿಂದ ಲಂಬಾಣಿ
ನೃತ್ಯ, ಚನ್ನಗಿರಿ ರಶ್ಮಿ ಮತ್ತು ಸಂಗಡಿಗರಿಂದ ಸೋಮನಕುಣಿತ,
ನಿಟ್ಟೆಗ್ರಾಮ ಮಹದೇವಯ್ಯ ಮತ್ತು ಸಂಗಡಿಗರಿಂದ
ಬೀಸುಕಂಸಾಳೆ, ಉಮೇಶ್ ನಾಯಕ್ ಚಿನ್ನ ಸಮುದ್ರ ಅವರಿಂದ
ಜಾನಪದ ಗೀತೆಗಳು, ಕೊಪ್ಪಳದ ಕೇಶಪ್ಪ ಶಿಳ್ಳೇಕ್ಯಾತರ
ಅವರಿಂದ ತೊಗಲುಗೊಂಬೆ ಸಾಂಸ್ಕøತಿಕ ಕಾರ್ಯಕ್ರಮಗಳು
ಜರುಗಲಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ
ನಿರ್ದೇಶಕ ರವಿಚಂದ್ರ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *