ಜಿಲ್ಲೆಯಲ್ಲಿ ನ.16 ರಂದು 18.59 ಮಿ.ಮೀ ಸರಾಸರಿ ಉತ್ತಮ
ಮಳೆಯಾಗಿದ್ದು, ಒಟ್ಟು ರೂ.63.50 ಲಕ್ಷ ರೂ. ನಷ್ಟದ ಅಂದಾಜು
ಮಾಡಲಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 19.48 ಮಿ.ಮೀ, ದಾವಣಗೆರೆ 05.61 ಮಿ.ಮೀ,
ಹರಿಹರ 19.30 ಮಿ.ಮೀ, ಹೊನ್ನಾಳಿ 27.80 ಮಿ.ಮೀ, ಜಗಳೂರು
ತಾಲ್ಲೂಕಿನಲ್ಲಿ 20.80 ಮಿ.ಮೀ ವಾಸ್ತವ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 20 ಎಕರೆ ಭತ್ತದ ಬೆಳೆ
ಹಾನಿಯಾಗಿದ್ದು ರೂ.2.50 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ಭಾಗಶ:
ಹಾನಿಯಾಗಿದ್ದು 30 ಸಾವಿರ ರೂ. ಹಾಗೂ 695 ಎಕರೆ ಭತ್ತದ ಬೆಳೆ
ಹಾನಿಯಾಗಿದ್ದು ರೂ.55.60 ಲಕ್ಷ ಹಾನಿಯಾಗಿದೆ. ಒಟ್ಟು ರೂ.55.90 ಲಕ್ಷ
ಅಂದಾಜು ನಷ್ಟ ಸಂಭವಿಸಿರುತ್ತದೆ.
ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ಭಾಗಶ:
ಹಾನಿಯಗಿದ್ದು, ರೂ.1.50 ಲಕ್ಷ ರೂ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ
1 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು 30 ಸಾವಿರ ರೂ. ನಷ್ಟದ
ಅಂದಾಜು ಮಾಡಲಾಗಿದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ
ಮನೆ ಭಾಗಶ: ಹಾನಿಯಾಗಿದ್ದು, ರೂ.1.20 ಲಕ್ಷ ಮತ್ತು 2 ಕಚ್ಚಾ
ಮನೆ ತೀವ್ರಹಾನಿಯಾಗಿದ್ದು ರೂ.1.30 ಲಕ್ಷ, 2 ಕಚ್ಚಾ ಮನೆ
ಭಾಗಶ: ಹಾನಿಯಾಗಿದ್ದು 80 ಸಾವಿರ ರೂ. ಹಾನಿಯಾಗಿದೆ. ಒಟ್ಟು 3.30 ಲಕ್ಷ
ಅಂದಾಜು ನಷ್ಟ ಸಂಭವಿಸಿರುತ್ತದೆ.
ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ
ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.