ದಿನಾಂಕ 21-11-2021 ಭಾನುವಾರ ತುಮಕೂರು ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ “ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನ ಮತ್ತು ಸದಸ್ಯತ್ವ ನೊಂದಣಿ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ಅಮಾನಿಕೆರೆಯ ಗಾಜಿನ ಮನೆಯವರೆಗೂ ಮೆರವಣಿಗೆ. ನಂತರ ಗಾಜಿನ ಮನೆಯಲ್ಲಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು. ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲರವರು, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರು, ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್. ಆರ್.ಪಾಟೀಲ್ ರವರು ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆರವರು, ಶ್ರೀ ಕೆ.ಎಚ್.ಮುನಿಯಪ್ಪ ರವರು, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ಶ್ರೀ ಸಲೀಂ ಅಹ್ಮದ್, ಶ್ರೀ ಈಶ್ವರ ಖಂಡ್ರೆ, ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಆರ್.ಧೃವನಾರಾಯಣ, ಶ್ರೀ ರಾಮಲಿಂಗಾರೆಡ್ಡಿ, ಮಾಜಿ ಉಪ ಮುಖ್ಯಮಂತ್ರಿ ಗಳಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಮಾಜಿ ಸಚಿವರಾದ ಶ್ರೀ ಜಯಚಂದ್ರ ರವರು, ರಾಜ್ಯದ ಎಐಸಿಸಿ ಹಾಗೂ ಕೆಪಿಸಿಸಿ ಹಿರಿಯ ಪದಾಧಿಕಾರಿಗಳು ಹಾಗೂ ನಾಯಕರುಗಳು ಮತ್ತು ಎಲ್ಲಾ ಶಾಸಕರು ಮಾಜಿ ಶಾಸಕರು ಸಂಸದರು,ಮಾಜಿ ಸಂಸದರು ಮತ್ತಿತರರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಪಕ್ಷದ ಮಾಜಿ ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ನಗರಸಭಾ ಪುರಸಭಾ ಪಟ್ಟಣ ಪಂಚಾಯಿತಿ ಸದಸ್ಯರು, ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಮತ್ತು ಸಹಕಾರಿ ಕ್ಷೇತ್ರದ ಪದಾಧಿಕಾರಿಗಳು, ಹಾಗೂ ಪಕ್ಷದ ಹಿರಿಯ ಮುಖಂಡರು,ಮಹಿಳಾ ಪದಾಧಿಕಾರಿಗಳು, ಯುವ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪಕ್ಷದ ಪರವಾಗಿ ಕೋರುತ್ತೇನೆ. ಎಂದ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ (ಅಣ್ಣಯ್ಯ).

Leave a Reply

Your email address will not be published. Required fields are marked *