ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಸರ್ಕಾರ ದಿನಾಂಕ ನಿಗದಿಪಡಿಸಿದ್ದು ಇದೇ ತಿಂಗಳ 18 ರಂದು ಚುನಾವಣೆ ನಡೆಯಲಿದೆ.ಈ ಪ್ರಯುಕ್ತ ಕೆಪಿಸಿಸಿ ಬಳ್ಳಾರಿಗೆ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ನ್ನೊಳಗೊಂಡ ವೀಕ್ಷಕರ ಸಮಿತಿಯನ್ನು ರಚಿಸಿದ್ದು,ಈ ಪ್ರಯುಕ್ತ ಯು.ಟಿ.ಖಾದರ್ ರವರು ಈಗಾಗಲೇ ಬಳ್ಳಾರಿ ತಲುಪಿದ್ದಾರೆ.
ಸಮಿತಿಯಲ್ಲಿ ಮಾಜಿ ಸಚಿವರಾದ ಎಚ್.ಎಂ ರೇವಣ್ಣರವರು, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪನವರು ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಆರ್.ಮಂಜುನಾಥ್ ರವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ