ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮಳೆಯಿಂದ
ಹಾನಿಗೊಳಗಾದ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ
ಕುಂಬಳೂರು, ನಿಟ್ಟೂರು, ಆದಾಪುರ ಹಾಗೂ ಮಲೆಬೆನ್ನೂರು
ಗ್ರಾಮಗಳಿಗೆ ಗುರುವಾರ ರೈತರೊಂದಿಗೆ ಭೇಟಿ ನೀಡಿ
ಪರಿಶೀಲಿಸಿದರು. ನಂತರ ಸಂತ್ರಸ್ಥರನ್ನು ಕುರಿತು ಶೀಘ್ರವೇ
ಹಾನಿಗೆ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು
ಸಾಂತ್ವನ ಹೇಳಿದರು.