ಕೆ.ಎಸ್.ಆರ್.ಟಿ.ಸಿ.ಯವರು ದಿನಾಂಕ 16/11/2021.ರಂದು ಪತ್ರಿಕಾ ಹೇಳಿಕೆನಲ್ಲಿ ಶಿವಮೊಗ್ಗ ಜಿಲ್ಲೆನಲ್ಲಿ ಪರ್ಮಿಟ್ ನೆಪದಲ್ಲಿ ಆರ್.ಟಿ.ಓ.ಕಿರುಕುಳ ಮತ್ತು ನಿತ್ಯವೂ ನೌಕರರು ಮತ್ತು ವಿದ್ಯಾರ್ಥಿಗಳ ಪರದಾಟವೆಂದು ಹೇಳಿಕೆ ನೀಡಿರುವದು ಸಮಂಜಸವಾಗಿರುವದಿಲ್ಲ ಮತ್ತು ಸರ್ಕಾರಕ್ಕೆ ಸುಳ್ಳು ಮಾಹಿತಿಕೊಡಲು ಮತ್ತು ಅವರು ಮಾಡಿದ ತಪ್ಪನ್ನು ಮಚ್ಚಿಕೊಳ್ಳಲು ಆರ್.ಟಿ.ಓ.ಮೇಲೆ ದೂರು ಸಲ್ಲಿಸಿರುತ್ತಾರೆ.ಎಂದು ಆಮ್ ಆದ್ಮಿ ಮುಖಂಡ ನೊಂದ ಬಸ್ ಮಾಲೀಕರಾದ ಚಂದ್ರಕಾಂತ್ ರೇವಣ ಕರ್ ಮಾಧ್ಯಮದವರ ಮುಂದೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕಾನೂನಿನ ಪ್ರಕಾರ ಕೆ.ಎಸ್.ಆರ್.ಟಿ.ಸಿ. ಮತ್ತು ಕಾಸಗಿ ಬಸ್ ನಡೆಸುತ್ತಿರುವ ಸ್ಟೇಜ್ ಕ್ಯಾರೇಜ ಬಸ್ಸಿಗೆ ಆರ್.ಟಿ.ಓ.ಪರ್ಮಿಟ್ ಪಡೆಯದೆ ಓಡಿಸುವಂತಿಲ್ಲ ಇದು ಒಂದು ಸಂಸ್ತೆ ಸರ್ಕಾರದ ಆದೀನದಲ್ಲಿರುತ್ತದೆ ಮತ್ತು ಆರ್.ಟಿ.ಓ. ಮೀಟಿಂಗ್ ನಲ್ಲಿ ಎಲ್ಲಾ ಬಸ್ ಮಾಲೀಕರ ಸಮ್ಮುಕದಲ್ಲಿ
ವೇಳಾಪಟ್ಟಿ( ಟೈಮಿಂಗ್ )ಮಾಡ ಬೇಕಾಗುತ್ತದೆ. ಆ ಟೈಮಿಂಗ್ ಪ್ರಕಾರ ಬಸ್ ಓಡಿಸ ಬೇಕಾಗುತ್ತದೆ.
ಪರ್ಮಿಟ್ ಪಡೆಯಲು ಮೊದಲು ಆರ್.ಟಿ.ಓ ದಲ್ಲಿ ಒಂದು ಪರ್ಮಿಟ್ ಗೆ 2100 ರೂ. ಹಣ ಪಾವತಿಸಿ ಅದಕ್ಕೆ ಸಂಬಂದ ಪಟ್ಟ ಪಾರಂ ಬರ್ತಿಮಾಡಿ ಸಲ್ಲಿಸಬೇಕು ನಂತರ ಆರ್.ಟಿ.ಎ.ಮೀಟಿಂಗ್ ನಲ್ಲಿ ಜಿಲ್ಲಾದಿಕಾರಿಗಳು ಮತ್ತು ಜಿಲ್ಲಾ ರಕ್ಷಣಾದಿಕಾರಿಗಳು.ಮತ್ತು ಆರ್.ಟಿ.ಓ. ಮತ್ತು ಇತರೆ ಬಸ್ ಮಾಲೀಕರ ಸಮ್ಮುಕದಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕೆ ತಕ್ಕಂತೆ ಮತ್ತು ಅವಶ್ಯಕತೆ ಇದ್ದಲ್ಲಿ ಪರ್ಮಿಟ್ ಜಿಲ್ಲಾದಿಕಾರಿಗಳು ಗ್ರಾಂಟ್ ( ಒಪ್ಪಿಗೆ) ಕೊಡುತ್ತಾರೆ.ನಂತರ ಆರ್.ಟಿ.ಓ ಮೀಟಿಂಗ್ ಕರೆದು ಸಂಭಂದಪಟ್ಟ ಬಸ್ ಮಾಲೀಕರಿಗೂ ಮೀಟಿಂಗ್ ಗೆ ಹಾಜರಾಗಲು ಹಿಂಬರಹ ಕಳಿಸಿ
ಟೈಮಿಂಗ್ ಮಾಡಿದ ನಂತರ ಬಸ್ ಓಡಿಸಬೇಕಾಗುತ್ತದೆ.
ಇಡೀ ರಾಜ್ಯದಲ್ಲಿ ಪರ್ಮಿಟ್ ಪಡೆಯದೆ ಬಗರ್ ಹುಕುಮ್ ನಂತೆ ಪಾರಂ -4 ಅವರ ಡಿಪೋ ದಿಂದ ಪಡೆದು ಅವರೆ ಟಯಮಿಂಗ್ ನಮೂದಿಸಿ. ಓಡಿಸಿದ ಹಾಗೆ ಕಾಸಗಿ ಬಸ್ ಇದ್ದಲ್ಲಿ ಓಡಿಸಲು ಹೋಗಿ ಶಿವಮೊಗ್ಗ ಆರ್.ಟಿ.ಓ.ಕೈಯಲ್ಲಿ ಬಸ್ ಸೀಜ್ ಮಾಡಿ 5000 ರೂ ನಂತೆ ದಂಡ ಕಟ್ಟಿ 4–5 ಬಸ್ ರಿಲೀಜ್ ಮಾಡಿಕೊಂಡಿದ್ದಾರೆ 5–6 ಬಾರಿ ನೋಟಿಸ್ ಕೊಟ್ಟರೂ ಅದಕ್ಕೆ ಮನ್ನಣೆ ಕೊಟ್ಟಿರುವದಿಲ್ಲ. ನಂತರ ದಂಡ ಹಾಕಿರುತ್ತಾರೆ. ನಮಗೆ ಅನಿಸುವ ಪ್ರಕಾರ ಪ್ರತಿ ವರ್ಷ . ಸರ್ಕಾರಕ್ಕೆ ಅಂದರೆ ಆರ್.ಟಿ.ಓ.ಗೆ 800 ರೂ ಚಲನ್ ಕಟ್ಟಿ ಎಪ್.ಸಿ. (ಅರ್ಹತಾ ಪ್ರಮಾಣಪತ್ರ) ಮಾಡಿಸಬೇಕು ಆದರೆ 24 ಸಾವಿರ ಬಸ್ ನಲ್ಲಿ ಸರಿಯಾಗಿ ಎಪ್.ಸಿ. (ಅರ್ಹತಾ ಪ್ರಮಾಣ ಪತ್ರ) ಕೂಡ ಮಾಡಿಸುವದಿಲ್ಲ.
ಕರ್ನಾಟಕದಲ್ಲಿ ಸುಮಾರು 17 ಜಿಲ್ಲೆನಲ್ಲಿ ಕಾಸಗಿಬಸ್ 100 ವರ್ಷದಿಂದ ಆರ್.ಟಿ.ಓ. ಪರ್ಮಿಟ್ ಪಡೆದು ಸಂಚರಿಸುತ್ತವೆ. ವರ್ಷಕ್ಕ 200000 ಎರಡು ಲಕ್ಷ ರೂಪಾಯಿ ಟ್ಯಾಕ್ಷ ಕಟ್ಟಿ 90 ಸಾವಿರ ಇನ್ಸೂರೆನ್ಸ ಕಟ್ಟಿ ಮತ್ತು ಎಪ್.ಸಿ. (ಅರ್ಹತಾ ಪ್ರಮಾಣಪತ್ರ) ಪ್ರತಿ ವರ್ಷ ಮಾಡಿಸಿ ಓಡಿಸುವವರಿಗೆ ಮತ್ತು ಲಕ್ಷಾಂತರ ಕಾರ್ಮಿಕರು ಉಧ್ಧೋಗ ಪಡೆದಿರುತ್ತಾರೆ. ಕೆ.ಎಸ್.ಆರ್.ಟಿಸಿ.ಬಸ್ ನವರು ಪರ್ಮಿಟ್ ಪಡೆಯದೆ ಸರ್ಕಾರಕೆ 1 ರೂ.ಕೂಡ ಟ್ಯಾಕ್ಷ ಕಟ್ಟದೆ ಡಿಪೋದಿಂದ ಪಾರಂ -4 ನಲ್ಲಿ ಟಯಮಿಂಗ್ ಮಾಡಿಕೊಂಡು ಶಿವಮೊಗ್ಗ ಕಾಸಗಿಬಸ್ ಮುಂದೆ ಐಡೆಂಟಿಕಲ್ ಆಗಿ ಓಡಿಸಿದರೆ ಕಾಸಗಿ ಬಸ್ ಮಾಲೀಕರು ಆರ್.ಟಿ.ಓ.ಗೆ ದೂರು ಸಲ್ಲಿಸಿರುತ್ತಾರೆ ಅದಕ್ಕೆ ಆರ್.ಟಿ.ಓ.ರವರು ಕಾನೂನಿನ ಪ್ರಕಾರ ಕ್ರಮ ಕೈಗೊಂಡಿದ್ದಾರೆ.ತಪ್ಪೇನಿದೆ.?
ಶಿವಮೊಗ್ಗ ಜಿಲ್ಲೆನಲ್ಲಿ ಸುಮಾರು 700 ಬಸ್ ಪರ್ಮಿಟ್ ಪಡೆದು ಚಾಲನೆನಲ್ಲಿದ್ದು ದಿನನಿತ್ಯ ಸುಮಾರು 8 ರಿಂದ 10 ಸಾವಿರ ಟ್ರಿಪ್ ಮಾಡುತ್ತವೆ.
ಸುಮಾರು 15 ವರ್ಷದ ಹಿಂದೆ ಜಿಲ್ಲಾದಿಕಾರಿಗಳು ಶಿವಮೊಗ್ಗ ದಿಂದ ಆನವಟ್ಟಿ ವರೆಗೆ ಎಲ್ಲ ಬಸ್ ಗಳನ್ನ ಸಟ್ಲ ಆಗಿ ಓಡಿಸಲು ಆದೇಶ ಮಾಡಿರುತ್ತಾರೆ.ತಡೆ ರಹಿತ ಬಸ್ ಗಳನ್ನುಕೂಡ ಸಟ್ಲಾಗಿ ಓಡಿಸಲು ಆದೇಶ ಮಾಡಿ ಗ್ರಾಮಾಂರ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುತ್ತಾರೆ.
ಈ ಕೆ.ಎಸ್.ಆರ್.ಟಿ.ಸಿ. ಬಸ್.ರವರು ಪರ್ಮಿಟ್ ಇಲ್ಲದೆ ತಡೆರಹಿತವಾಗಿ ಬಸ್ ಓಡಿಸುತ್ತಾರೆ ಇವರು ಶಾಲಾ ವಿಧ್ಯರ್ಥಿ ಗಳಿಗೆ ಮತ್ತು ಸರ್ಕಾರಿ ಮತ್ತು ಕಾಸಗಿ ಸಿಬ್ಬಂದಿಗಳು ಅಧಿಕಾರಿಗಳಿಗೆ ಪಾಸ್ ಎಂದು ತಪ್ಪು ಮಾಹಿತಿ ನೀಡಿರುತ್ತಾರೆ. ಹಾಲಿ ಕಾಸಗಿ ಬಸ್ ಪ್ರತಿ 8–10 ನಿಮಿಷಕ್ಕೆ ಚಲಿಸುತ್ತವೆ. ಕೊರೋನ ದಿಂದ ನಿಂತ ಬಸ್ ಕೂಡ ಲೈನಿಗೆ ಬಿಡುತಿದ್ದಾರೆ.
ಶಿವಮೊಗ್ಗ ದಿಂದ ನವಲೆ ಅಬ್ಬಲಗೆರೆ ಕುಂಚೆನಳ್ಳಿ ಸವಳಂಗ ಚಿನ್ನಿಕಟ್ಟಿ ಹಾರೊಗೊಪ್ಪ ಶಿಕಾರಿಪುರ ಜಕ್ಕನಹಳ್ಳಿ ಉಡುಗಣಿ ಶಿರಾಳಕೊಪ್ಪ ತೊಗರ್ಸಿ ಆನವಟ್ಟಿ ಮತ್ತು ಹಾನಗಲ್ ಮತ್ತು ಚಿಕ್ಕೆರಿ ಮತ್ತು ಶಿರಾಳಕೊಪ್ಪ ಮಾವಲಿ ಚನ್ನಾಪುರ ಸೊರಬ ಕಡೆ ಶಿವಮೊಗ್ಗದಿಂದ ಪ್ರತಿ 8 ರಿಂದ 10 ನಿಮಿಷಕ್ಕೆಒಂದು ಬಸ್ ಓಡುತ್ತವೆ ಮತ್ತು ಶಾಲಾ ಮಕ್ಕಳಿಂದ ಹಿರಿಯನಾಗರಿಕೆ ಮತ್ತು ಸರ್ಕಾರಿ ಮತ್ತು ಕಾಸಗಿ ಸಿಬ್ಬಂದಿ ಗಳು ರಿಯಾಯತಿ ಪಡೆದು ಸುಮಾರು ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಈ ರಿಯಾಯತಿ ಪಾಸ್ ಗೆ ಸರ್ಕಾರ ಒಂದು ಪೈಸೆ ಕೊಡುವದಿಲ್ಲ. ಇದೆರೀತಿ ಶಿವಮೊಗ್ಗದಿಂದ ಸಾಗರ ಹೊಸನಗರ ತೀರ್ಥಹಳ್ಳಿ ಜಿಲ್ಲೆಯ ಸುತ್ತಲೂ ಬಸ್ ಓಡುತ್ತವೆ.
ಕೆ.ಎಸ್.ಆರ್.ಟಿ.ಸಿ. ಇವರಿಗೆ ಈ ರಿಯಾಯತಿ ಪಾಸ್ ಸಬ್ಸಿಡಿ ಎಲ್ಲವನ್ನು ಸರ್ಕಾರ ಬರಿಸುತ್ತದೆ. ಅಲ್ಲದೆ ಕಲೆಕ್ಷನ್ ಮೇಲೆ 5% ಪರ್ಸಂಟ್ ಟ್ಯಾಕ್ಸಕೂಡ ಕಟ್ಟುವದಿಲ್ಲ ಇನ್ಸೂರೆನ್ಸ ಕಟ್ಟುವದಿಲ್ಲ ಕ್ಲೈಮ್ ಅವರೆ ಬರಿಸುತ್ತಾರೆ ಅದರಲ್ಲೂ ಉಳಿತಾಯ.
ಆದರೂ ಸರ್ಕಾರಕ್ಕೆ ಪಂಗನಾಮ ಹಾಕುತ್ತಾರೆ. ಪ್ರತಿ ವರ್ಷ 5 ರಿಂದ 6 ಸಾವಿರ ಕೋಟಿ ಸರ್ಕಾರ ಬರಿಸುತ್ತದೆ. ಈ ಬಿಳಿ ಆನೆ ಸಾಕಲಿಕ್ಕೆ ಕಾಸಗಿ ಬಸ್ ಮಾಲೀಕರು ಕಟ್ಟಿದ ಟ್ಯಾಕ್ಷ ಹಣ ಇವರಿಗೆ ತುಂಬುತ್ತಾರೆ. ಇದು ಸಾರ್ವಜನಿಕರು ಕೊಡುವ ತೆರಿಗೆ ಹಣ ಅಲ್ಲವೇ.?. ಹುಬ್ಬಳ್ಳಿ ಬೆಳಗಾವ್ ಬಿಜಾಪುರ ಕಾರವಾರ ಜಲ್ಲೆನಲ್ಲಿರುವ ಕೆ.ಎಸ್.ಆರ್ ಟಿ.ಸಿ. ಡಿಪೋಗೆ ಸಂಬಂದ ಪಟ್ಟ ಸೊತ್ತುಗಳನ್ನ ಲೀಜಿಗೆ ಕೊಡುತ್ತೆವೆ ಎಂದು ಪತ್ರಿಕೆನಲ್ಲಿ ಹಾಕಿರುತ್ತಾರೆ. ಕಾರಣ ಕಾರ್ಮಿಕರ ಸಂಬಳ ಮತ್ತು ಅಟೋಮೊ ಬೈಲ್ ಪಾರ್ಟ್ಸಗೆ ಹಣದಕೊರತೆ. ಬೆಂಗಳೂರು ಶಾಂತಿನಗರ ಬಿ.ಎಮ್.ಟಿ.ಸಿ. ಸೊತ್ತನ್ನ 16000000 ರೂ. ಗೆ ಕೆನರಾ ಬ್ಯಾಂಕಿಗೆ ಪ್ಲಜ್ ಮಾಡಿರುತ್ತಾರೆ. ತಿಂಗಳ 10400000 ರೂ.ಬಡ್ಡಿ ಕಟ್ಟಬೇಕು. ಆದರೆ ಆದಾಯ ಎಲ್ಲಿಗೆ ಹೊಗುತ್ತದೆ. ಸರ್ಕಾರದ ಗಮನಕ್ಕೆ ಬರುವದಿಲ್ಲವೆ.
9000 ಕಾಸಗಿ ಸ್ಟೇಜ್ ಕ್ಯಾರೇಜ ಬಸ್ ಇದ್ದು ವರ್ಷಕ್ಕೆ ಒಂದು ಬಸ್ಸಿಗೆ 200000.ಲಕ್ಷ ರೂ ಟ್ಯಾಕ್ಷ ಕಟ್ಟಿ 90000 ರೂ. ಇನ್ಸೂರೆನ್ನ ಕಟ್ಟಿ ದಿನನಿತ್ಯೆ ಡೀಜಲ್ ತೆರಿಗೆ ದಿನ 3000 ರೂ ಕಟ್ಟುವವರಿಗೆ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ.ತಾರತಮ್ಯ ಮಾಡುತ್ತಾರೆ.ಕಾರಣ ಕೊಡಿ.
24000 ಸಾವಿರ ಕೆ.ಎಸ್.ಆರ್.ಟಿ.ಬಸ್ ಸ್ಟೇಜ್ ಕ್ಯಾರೇಜ ಬಸ್ ರಾಜ್ಯದಲ್ಲಿ ಸಂಚರಿಸುತಿದ್ದು.ಸರ್ಕಾರ ಈ ಕೆ.ಎಸ್.ಆರ್.ಟಿ.ಸಿ.ಎಂಬ ಸಂಸ್ತೆಗೆ ವಹಿಸಿರುತ್ತದೆ. ಸರಿಯಾಗಿ 99% ಪರ್ಸಂಟ್ ಪರ್ಮಿಟ್ ಪಡೆಯದೆ 5% ಪರ್ಸಂಟ್ ಟ್ಯಾಕ್ಸ ಕಟ್ಟಲೂ ಆಗದೆ. ವರ್ಷಕ್ಕೆ 5–6 ಸಾವಿರ ಕೋಟಿ ಸರ್ಕಾರಬರಿಸುತ್ತದೆ.
ಆದರೆ ಕೆ.ಎಸ್.ಆರ್.ಟಿ.ಸಿ. ಆದಾಯ ಯಾವ ಖಜಾನೆಗೆ ಹೋಗುತ್ತದೆ ಆದಾಯ ತಿಂದು ತೇಗುವ ತಿಮಿಂಗಲ ಬಿಳಿ ಆನೆ ಎಲ್ಲಿವರೆಗೂ ಸಾಕುತ್ತೀರಾ ?.ಈ ಹಿಂದೆ ಈ ತಿಮಿಂಲಗಲ ಬಿಳಿಆನೆಗಳಬಗ್ಗೆ ಪ್ರಜಾವಾಣಿ ದಿನ ಪತ್ರಿಕೆನಲ್ಲಿ ವಿವರವಾಗಿ ಬರೆದಿರುತ್ತಾರೆ.
ಹಗಲು ರಾತ್ರಿ ಎನ್ನದೆ ಡ್ರೈವರ್ ಕಂಡಕ್ಟರ್ ಬಸ್ಸಿನಿಂದ ಕಲೆಕ್ಷನ್ ತಂದುಕೊಟ್ಟ ಹಣ ಎಲ್ಲಿಗೆ ಹೋಗುತ್ತದೆ.ಕಾರಣ ಡಿಫೋ ದಿಂದ ಮೆಲ್ಮಟ್ಟದ್ದ ವರೆಗೆ ತಿಮಿಂಗಲಗಳು ತಿಂದು ತೇಗುತ್ತವೆ.ಸರ್ಕಾರದ ಕಣ್ಣಿಗೆ ಕಾಣುತ್ತಲ್ಲವೇ?.
ಹೊಸ ಬಸ್ ಕರೀದಿಗೆ 30 ರಿಂದ 35 ಲಕ್ಷ ಬರಿಸುತ್ತಾರೆ. ಇದಕ್ಕೆ 15 ವರ್ಷ ಆಯುಷ್ಯ ಇರುತ್ತದೆ. ಈ ಬಸ್ ಗಳು 7 ರಿಂದ 8 ವರ್ಷದಲ್ಲಿ ಗುಜರಿ ಸೇರುತ್ತವೆ ಅಲ್ಲಿಕೂಡ 50% ಪರ್ಸಂಟ್ ಕಮಿಷನ್. ಅಥವಾ 8 ಲಕ್ಷ ಕಿ.ಮೀ.ಓಡಿದರೆ ಬಸ್ ಗುಜರಿ ಸೇರುತ್ತದೆ. ಕಾರಣ ಬ್ಯಾಂಕ ಸಾಲ ಕಟ್ಟಬೇಕಾಗಿಲ್ಲ. ನಂದಲ್ಲ ನಮ್ಮಪ್ಪಂದಲ್ಲ ಹೇಗೂ ಸರ್ಕಾರ ಬರಿಸುತ್ತದೆ.
ಸರ್ಕಾರ ಇದನ್ನೆಲ್ಲ ಪರಿಗಣಿಸಿ ತಮಿಳ್ ನಾಡ ರಾಜ್ಯದಲ್ಲಿ 50×50 ರೀತಿ ಕಾಸಗಿ ಮತ್ತು ಸರ್ಕಾರಿ ಬಸ್
.ಬಿಟ್ಟಿರುತ್ತಾರೆ. ಅದೇರೀತಿ ಕರ್ನಾಟಕದಲ್ವಿ ಜಾರಿತಂದರೆ ಮಾತ್ರ ಸುದಾರಣೆ ಯಾಗುತ್ತದೆ.
ಕೆ.ಎಸ್.ಆರ್.ಟಿ.ಸಿ. ರವರು ಶಿವಮೊಗ್ಗ ಅರ್.ಟಿ.ಓಮೇಲೆ ದೂರು ಹೇಳುವದು ಸಮಂಜಸವಲ್ಲ. ನೀವು ಮೊದಲು ಆರ್.ಟಿ.ಓ.ರವರಿಗೆ ಮಾನ್ಯತೆ ಗೌರವ ಕೊಡಿ ಅದರಲ್ಲಿ ಕಾನೂನಿನ ಪ್ರಕಾರ ತಪ್ಪಾಗಿದ್ದರೆ ಮೇಲಾದಿಕಾರಿಗಳಿಗೆ.ದೂರುಸಲ್ಲಿಸಿರಿ.
ಸಾರ್ವ ಜನಿಕರಿಗೆ ಬಸ್ಸಿನ ಅವಶ್ಯಕತೆ ಇದ್ದಲ್ಲಿ ಕಾನೂನಿನ ಅಡಿನಲ್ಲಿ ಆರ್.ಟಿ.ಓ. ದಿಂದ ಪರ್ಮಿಟ್ ಪಡೆದು ಮೀಟಿಂಗ್ ನಲ್ಲಿ ಟೈಮಿಂಗ್ ಪಡೆದು ಬಸ್ ಬಿಡಲು ಕಾಸಗಿ ಬಸ್ ಮಾಲೀಕರು ಅಬ್ಜಕ್ಷನ್ ಮಾಡುವದಿಲ್ಲ.
. ಕೆ.ಎಸ್.ಆರ್.ಟಿ.ಸಿ.ರವರಿಗೆ ಶಿವಮೊಗ್ಗ ಜಲ್ಲೆ ಮಾತ್ರ ಗುರಿಇಟ್ಟುಕೊಂಡಿದ್ದಾರೆ 100 ವರ್ಷದಿಂದ ಕಾಸಗಿ ಬಸ್ ಚಾಲನೆನಲ್ಲಿಇದ್ಧು ಈ ಬಸ್ ಮಾಲೀಕರಿಗೆ ಹೇಗಾದರೂ ಮಾಡಿ ಮಟ್ಟ ಹಾಕಲು ಹೊರಟಿದ್ದಾರೆ. ಸರ್ಕಾರಕ್ಕೆ ಸುಳ್ಳುಮಾಹಿತಿ ಕೊಡುತಿದ್ದಾರೆ.
. ಕೆ.ಎಸ್.ಆರ್.ಟಿ ಸಿ. ಮಾನಪಲ್ಲಿ ( ಎಕ ಸೌಮ್ಯೆ) ಇದ್ದಕಡೆ ಹಾವೇರಿ ಧಾರವಾಡ ಬೆಳಗಾವ್ ಬಿಜಾಪುರ ಕಾರವಾರ ಬಾಗಲಕೋಟೆ ರಾಯಚೂರ್ ಬೀದರ್ ಈ ಎಲ್ಲ ಜಿಲ್ಲೆ ಗ್ರಾಮಗಳಿಗೆ ಇಗಲೂ ಸರಿಯಾಗಿ ಬಸ್ ಗಳಿಲ್ಲದೆ ಅಲ್ಲಿ ಅಟೋ ಮ್ಯಾಕ್ಸಿಕ್ಯಾಪ್ ನಿಂದ ಕೆ ಎಸ್.ಆರ್.ಟಿ.ಸಿ. ಹಿಂದೆ ಸರಿದು ಬಿಟ್ಟಿದ್ದಾರೆ. ಶಿವಮೊಗ್ಗ ಚಿಕ್ಕಮಗಳೂರು ಮಂಗಳೂರು ಜಿಲ್ಲೆನಲ್ಲಿ ಅಚ್ಚುಕಟ್ಟಾಗಿ ಟಯಮಿಗೆ ಸರಿಯಾಗಿ ನಡೆಸುವ ಬಸ್ ಮಾಲೀಕರಿಗೆ ಗುರಿಯಾಗಿಟ್ಟು ದಾರಿತಪ್ಪಿಸಲು ಮುಂದಾಗಿದ್ದಾರೆ.ಸರ್ಕಾರಕ್ಕೆ ಬರುವ ಸಾವಿರಾರು ಕೋಟಿ ರೂಪಾಯಿ ತೆರಿಗೆ ಕಟ್ಟದ ಹಾಗೆ ಮಾಡಲು ಹೊರಟಿದ್ದಾರೆ. ಇದರ ಬಗ್ಗೆ ಸರ್ಕಾರಕ್ಕೆ ಮಾಹಿತಿಕೊಡಲು ಈ ಲೇಕನ ಬರೆದಿರುತ್ತೇವೆ.ಮತ್ತು ರಾಜ್ಯದ ಸಾರ್ವಜನಿಕರಿಗೆ ಮಾಹಿತಿ ಮುಟ್ಟಿಸು ಕೆಲಸ ನಮ್ಮದಾಗಿದೆ ಎಂದು ಭಾವುಕರಾಗಿ ಹೇಳಿದರು..
ವರದಿ ಜಿ ಕೆ ಹೆಬ್ಬಾರ್

Leave a Reply

Your email address will not be published. Required fields are marked *