ಪೂರ್ಣಗೊಳಲಿ: ಜಿಲ್ಲಾಧಿಕಾರಿ
ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು
ಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ
ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು,
ಯೋಜನೆಗಳು ಸಕಾಲಕ್ಕೆ ಸಮಪರ್ಕವಾಗಿ ಫಲಾನುಭವಿಗಳಿಗೆ
ತಲುಪಬೇಕು. ಯೋಜನೆ ಅನುಷ್ಠಾನದಲ್ಲಿ ವಿಳಂಬವಾದರೆ
ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು
ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿವಿಧ ಇಲಾಖೆ ಅಧಿಕಾರಿಗಳಿಗೆ
ಎಚ್ಚರಿಸಿದರು.
ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ವಿಶೇಷ ಘಟಕ ಯೋಜನೆ ಹಾಗೂ
ಬುಡಕಟ್ಟು ಉಪಯೋಜನೆಯಡಿ ಅಕ್ಟೋಬರ್-2021ರ ಅಂತ್ಯಕ್ಕೆ
ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ
ಅವರು ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ಬಿಡುಗಡೆಯಾದ
ಅನುದಾನವನ್ನು ಶೀಘ್ರವಾಗಿ ನಿಗಧಿತ ಕಾರ್ಯಕ್ರಮಗಳಿಗೆ ಬಳಸಿ
ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಕೋವಿಡ್-19 ಸೋಂಕಿನಿಂದ ಕಳೆದ ಎರಡು ವರ್ಷಗಳಿಂದ ಸಭೆ
ನಡೆಸಲು ಸಾಧ್ಯವಾಗಲಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಪ್ರತಿ
ತಿಂಗಳ ಕೊನೆಯ ವಾರದಲ್ಲಿ ಎಸ್‍ಸಿಪಿ, ಟಿಎಸ್‍ಪಿ ಸಭೆ ನಡೆಸಲಾಗುವುದು
ಸಭೆಗೆ ಎಲ್ಲ ಇಲಾಖೆಗಳು, ನಿಗಮ ಮಂಡಳಿ, ನಗರ ಸ್ಥಳೀಯ
ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ಸೂಕ್ತ
ಮಾಹಿತಿಯೊಂದಿಗೆ ಸಭೆಯಲ್ಲಿ ಕಡ್ಡಾಯವಾಗಿ ಇರಬೇಕು. ಮತ್ತು
ಪ್ರಗತಿ ಮಾಹಿತಿಯನ್ನು ನೀಡಬೇಕು. ಮುಂದಿನ ಸಭೆಯಲ್ಲಿ
ಯಾವುದೇ ವಿಳಂಬವಿಲ್ಲದಂತೆ ಪ್ರಗತಿ ಸಾಧಿಸಿದ ವರದಿ ಸಲ್ಲಿಸಬೇಕು.
ಹಾಗೂ ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು. ತಪ್ಪಿದ್ದಲ್ಲಿ
ಕಾಯ್ದೆ ಪ್ರಕಾರ ಕರ್ತವ್ಯಲೋಪದಡಿ ಆಯಾ ಇಲಾಖೆಗಳ
ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ಅತಿ ಕಡಿಮೆ ಪ್ರಗತಿಯಲ್ಲಿರುವ ಹಾಗೂ ಸಭೆಗೆ ಗೈರಾಗಿರುವ
ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚನೆ
ನೀಡಿದರು.
ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇಲಾಖೆ, ಸಹಕಾರ,
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕುಟುಂಬ ಮತ್ತು
ಕಲ್ಯಾಣ ಇಲಾಖೆ, ಪ್ರವಾಸೋದ್ಯಮ, ಶಿಕ್ಷಣ ಇಲಾಖೆ, ಕೈಗಾರಿಕಾ ಕೇಂದ್ರ,
ಗ್ರಾಮೀಣ ಕುಡಿಯುವ ನೀರು, ಪಶುಪಾಲನೆ, ಕೌಶಲ್ಯಾಭಿವೃದ್ದಿ
ಇಲಾಖೆ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ,
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆÉಗಳು
ಅವಧಿಯೊಳಗೆ ಪ್ರಗತಿ ಸಾಧಿಸುವಂತೆ ತಿಳಿಸಿದರು.
ಲಸಿಕೆ ನೀಡಿಕೆ ಗುರಿ ಸಾಧನೆ ಕಡಿಮೆಯಿರುವ ಕಡೆ ಹೆಚ್ಚು
ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಆರೋಗ್ಯ
ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಶ್ರಮಿಸಬೇಕು. ಜತೆಗೆ
ಜನರಲ್ಲಿ ಜಾಗೃತಿ ಮೂಡಿಸಬೇಕು. ಪಡಿತರ ಸೇರಿದಂತೆ ಸರ್ಕಾರದ
ಸವಲತ್ತುಗಳನ್ನು ಪಡೆಯಲು ಬರುವ ಜನರಲ್ಲಿ ಕಡ್ಡಾಯವಾಗಿ
ಆಧಾರ್ ಕಾರ್ಡ್ ಸ್ವೀಕರಿಸಬೇಕು. ಆಧಾರ್ ಮೂಲಕ ಲಸಿಕೆ ಕುರಿತು
ಪರಿಶೀಲಿಸಬೇಕು. ಲಸಿಕೆ ಪಡೆಯದಿದ್ದಲ್ಲಿ ಅಂತಹವರನ್ನು ಮನವೊಲಿಸಿ
ಲಸಿಕೆ ಪಡೆಯಲು ಉತ್ತೇಜಿಸಬೇಕು ಎಂದು ಜಿಲ್ಲಾಧಿಕಾರಿಗಳು
ತಿಳಿಸಿದರು
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಸಮಾಜ
ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮಾ, ಪರಿಶಿಷ್ಟ ವರ್ಗಗಳ
ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜನಾಯ್ಕ್, ಆಹಾರ ಇಲಾಖೆಯ
ಜಂಟಿನಿರ್ದೇಶಕ ಮಂಟೆಸ್ವಾಮಿ, ಡಿಹೆಚ್‍ಓ ಡಾ.ನಾಗರಾಜ್,
ಪಶುಸಂಗೋಪನ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರಶೇಖರ
ಸುಂಕದ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು
ಉಪಸ್ಥಿತರಿದ್ದರು.