:19/11/21 ಇಂದು ಮಧ್ಯಾಹ್ನ:3:00 pm ಗೆ, ರೈತ ವಿರೋಧಿ ಮಸೂದೆ ವಿರುದ್ಧ ದೇಶದ ರೈತರ ಹೋರಾಟಕ್ಕೆ ಸರ್ವಾಧಿಕಾರಿ ಮೋದಿ ಆಡಳಿತ ಕೊನೆಗೂ ರೈತರ ಹೋರಾಟದ ಮುಂದೆ ಕೇಂದ್ರ ಸರ್ಕಾರ ಶರಣಾಗಿದೆ.ಈ ಹಿನ್ನೆಲೆಯಲ್ಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆಯನ್ನು ಸ್ಥಳ@ ಗಾಂಧಿ ಪ್ರತಿಮೆ ರೇಸ್ ಕೋರ್ಸ್ ರಸ್ತೆ ಮೌರ್ಯ ಹೋಟೆಲ್ ಬಳಿ ನಡೆಸಲಾಯಿತು. ಸುಮಾರು ತಿಂಗಳಿನಿಂದ ದೇಶದ ಅನ್ನದಾತರು ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರೂ ಸರ್ವಾಧಿಕಾರಿ ನರೇಂದ್ರ ಮೋದಿ ರೈತರ ಹೋರಾಟಕ್ಕೆ ಇನ್ನು ಕಿವಿಕೊಡದೆ ಸರ್ವಾಧಿಕಾರಿಯಂತೆ ವರ್ತಿಸಿದರು ಆದರೆ ದೇಶದ ಎಲ್ಲ ಉಪಚುನಾವಣೆಗಳಲ್ಲೂ ನರೇಂದ್ರ ಮೋದಿ ನಾಯಕತ್ವಕ್ಕೆ ಸೋಲಾದ ಹಿನ್ನೆಲೆಯಲ್ಲಿ ಇಂದು ರೈತರ ಹೋರಾಟ ಗಮನಿಸಿ ರೈತರ ಮನವಿ ಪರಿಶೀಲಿಸಿ ರೈತ ವಿರೋಧಿ ಮಸೂದೆಯನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ ಇದು ನರೇಂದ್ರ ಮೋದಿಯ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಡಿ ಮೃತಪಟ್ಟ ಹುತಾತ್ಮ ರೈತರಿಗೆ ಹಾಗೂ ಅವರ ಕುಟುಂಬಕ್ಕೆ ಅತಿ ಹೆಚ್ಚಿನ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಬೇಕು ರೈತರ ಪ್ರಾಮಾಣಿಕ ಹೋರಾಟವನ್ನು ಇಡೀ ದೇಶದ ಪ್ರತಿಯೊಬ್ಬ ನಾಗರಿಕರು ಬೆಂಬಲಿಸಿದ್ದಾರೆ ಈ ಹೋರಾಟದ ಅನೇಕ ಹೊರ ರಾಷ್ಟ್ರಗಳಲ್ಲೂ ಸಹ ನಮ್ಮ ದೇಶದ ರೈತರನ್ನು ಬೆಂಬಲಿಸಿದ್ದಾರೆ.
ರೈತರ ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯವನ್ನು ರೈತರು ಮುಂದಿನ ದಿನಗಳಲ್ಲಿ ಅವರ ಇನ್ನೂ ಹೆಚ್ಚಿನ ಹೋರಾಟದೊಂದಿಗೆ ಇತರ ರೈತ ವಿರೋಧಿ ಕಾನೂನುಗಳನ್ನು ತೆಗೆದು ಹಾಕಲು ರೈತರು ಹೋರಾಟವನ್ನು ಮುಂದುವರೆಸಲು ರೈತರ ಪ್ರಾಮಾಣಿಕ ಹೋರಾಟಕ್ಕೆ ದೇಶದ ಪ್ರತಿಯೊಬ್ಬ ನಾಗರಿಕರ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಈ ಸಂದರ್ಭದಲ್ಲಿ ರೈತರ ಈ ಹೋರಾಟ ರೈತರ ಪ್ರಾಮಾಣಿಕತೆಗೆ ಸಿಕ್ಕ ಜಯವಾಗಿದೆ.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುನ್ನಡೆದ ಈ ಸಂಭ್ರಮಾಚರಣೆಯಲ್ಲಿ ಪಕ್ಷದ ಮುಖಂಡರಾದ ಎಸ್.ಮನೋಹರ್ ಜಿ ಜನಾರ್ದನ್ ಎಂ ಆನಂದ್ ಎಲ್ ಜಯಸಿಂಹ ಚಂದ್ರಶೇಖರ್ ಪ್ರಕಾಶ್ ಕೆ ಟಿ ನವೀನ್ ಚಂದ್ರ ತೇಜಸ್ ಕುಮಾರ್ ಬಿ ಎಲ್ ಚೇತನ್ ಕುಮಾರ್ ಮೋಹನ್ ಪುಟ್ಟರಾಜ ಮಾಧವ ವೆಂಕಟೇಶ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.