ಪ್ರಸಕ್ತ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ
ಶಿಕ್ಷಣದ ಅನುಮೋದಿತ ಚಟುವಟಿಕೆಯಾದ ತೀವ್ರತರ ವಿಕಲತೆ
ಹೊಂದಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ದೈಹಿಕ
ಚಿಕಿತ್ಸೆ/ಫಿಜಿಯೋಥೆರಫಿ ಮಾಡಿಸುವ ಅಗತ್ಯತೆ ಇರುವುದರಿಂದ
ತ್ರಿಸದಸ್ಯ ಸಮಿತಿಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ದಾವಣಗೆರೆ
ದಕ್ಷಿಣವಲಯ ಇಲ್ಲಿಗೆ ಒಂದು ಹುದ್ದೆ ಫಿಜಿಯೋಥೆರಫಿಸ್ಟ್ (ಡಿಪ್ಲೋಮ
ಇನ್ ಫಿಜಿಯೋಥೆರಫಿಸ್ಟ್/ಬ್ಯಾಚುಲರ್ ಆಫ್ ಫಿಜಿಯೋಥೆರಪಿಸ್ಟ್) ನೇಮಕ
ಮಾಡಿಕೊಳ್ಳಲು ಉದ್ದೇಶಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೂಕ್ತ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು
ದಾಖಲೆಗಳೊಂದಿಗೆ ನ.25 ರ ಸಂಜೆ 5.30 ಗಂಟೆಯೊಳಗಾಗಿ ಕ್ಷೇತ್ರ
ಸಮನ್ವಯಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ,
ಮೋತಿ ವೀರಪ್ಪ ಕಾಲೇಜ್ ಆವರಣ, ವಿಶ್ವೇಶ್ವರಯ್ಯ ಪಾರ್ಕ್ ಎದುರು,
ದಾವಣಗೆರೆ ದಕ್ಷಿಣ ವಲಯ ಮೊ.ಸಂ: 9480695178, 9449910879 ನ್ನು
ಸಂಪರ್ಕಿಸಬಹುದೆಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ
ಸಮನ್ವಯಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.