ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಚೀಲೂರು ಗ್ರಾಮದಲ್ಲಿ ದಿನಾಂಕ 24 11-21 ರಂದು ಬುಧವಾರ ಬೆಳಗ್ಗೆ 11:30ಕ್ಕೆ ಸರಿಯಾಗಿ VSSN ಕಟ್ಟಡ ಚೀಲೂರಿನಲ್ಲಿ ,ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೊನ್ನಾಳಿ ನೂತನ ಚೀಲೂರು ಶಾಖೆಯ ಉದ್ಘಾಟನಾ ಸಮಾರಂಭವು ನಡೆಯುತ್ತಿದ್ದು, ಉದ್ಘಾಟನೆ ಸಾನಿಧ್ಯವನ್ನು ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ// ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತರಳಬಾಳು ಬೃಹನ್ಮಠ, ಸಿರಿಗೆರೆ ಚಿತ್ರದುರ್ಗ ಜಿಲ್ಲೆ ಇವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ. ಹೊನ್ನಾಳಿಯಲ್ಲಿರುವ ಪ್ರಧಾನ ಕಛೇರಿ ಶಿವ ಬ್ಯಾಂಕಿನಲ್ಲಿ ಇಂದು ಪೂರ್ವಭಾವಿ ಸಭೆಯು ಅಧ್ಯಕ್ಷರಾದ ಶ್ರೀ ಜೆ ಶ್ರೀಕಾಂತ್ ರವರು ಮತ್ತು ಸರ್ವ ನಿರ್ದೇಶಕರುಗಳ ನೇತೃತ್ವದಲ್ಲಿ ನಡೆಯಿತು.
ನಂತರ ಮಾತನಾಡಿದ ಜೆ ಶ್ರೀಕಾಂತ್ ರವರು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಈ ಬ್ಯಾಂಕಿನ ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಮಾಜಿ ಹಾಲಿ ನಿರ್ದೇಶಕರುಗಳು ಹಾಗೂ ಸರ್ವ ಸದಸ್ಯರುಗಳು ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದುರ ಜೊತೆಗೆ ಶ್ರೀಗಳ ಭಕ್ತಿಗೆ ಪಾತ್ರರಾಗಲು ಕೋರಿದರು, ಈ ಕಾರ್ಯಕ್ರಮದ ಮಾಹಿತಿ ಕೆಳಗಿನಂತಿದೆ.
ಇವರು ಉಪಸ್ಥಿತಿಯಲ್ಲಿ;- ಶ್ರೀ ಜೆ ಶ್ರೀಕಾಂತ್ ಅಧ್ಯಕ್ಷರು, ಶ್ರೀ ಎಸ್ ನಾಗರಾಜಪ್ಪ ಉಪಾಧ್ಯಕ್ಷರು, ಶ್ರೀ ಕೆ ಎಂ ಬಸಲಿಂಗಪ್ಪ ಮಾಜಿ ಅಧ್ಯಕ್ಷರು ,ಶ್ರೀಮತಿ ಶಕುಂತಲಾ ಮಾಜಿ ಉಪಾಧ್ಯಕ್ಷರು, ನಿರ್ದೇಶಕರುಗಳಾದ ಶ್ರೀ ಎಂ.ಜಿ ಬಸವರಾಜಪ್ಪ, ಶ್ರೀ ಎಂ.ಸಿ ನಾಗೇಂದ್ರಪ್ಪ,ಶ್ರೀ ಕೆ ಸಿದ್ದೇಶ್ವರಪ್ಪ ,ಶ್ರೀ ಆರ್ ಸಿ ಶಂಕರಗೌಡ, ಶ್ರೀ ಪಿ ಬಿ ಶೈಲೇಶ್ ,ಶ್ರೀ ಕೆ ಎಸ್ ಶಿವಕುಮಾರ್ ,ಶ್ರೀ ಎಂ ಆರ್ ವಿಕಾಸ್ , ಶ್ರೀಮತಿ ಕೆ.ಜಿ ಮಂಜುಳ, ಶ್ರೀ ಎಂ ಕೃಷ್ಣ ನಾಯಕ್, ಶ್ರೀ ಯು ಮಲ್ಲೇಶಪ್ಪ, ಕಾರ್ಯದರ್ಶಿಯವರಾದ ಶ್ರೀ ಹೆಚ್ಎನ್ ರುದ್ರೇಶ್ ರವರು ಸಹ ಭಾಗಿಯಾಗಿದ್ದರು.