ಜಿಲ್ಲೆಯಲ್ಲಿ ನ.19 ರಂದು 49.0 ಮಿ.ಮೀ ಸರಾಸರಿ ಉತ್ತಮ
ಮಳೆಯಾಗಿದ್ದು, ಒಟ್ಟು ರೂ.319.15 ಲಕ್ಷ ರೂ. ನಷ್ಟದ ಅಂದಾಜು
ಮಾಡಲಾಗಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು 69 ಮಿ.ಮೀ.
ಮಳೆಯಾಗಿದೆ. ಅತಿವೃಷ್ಟಿಯಿಂದಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ
ಜರುಗಿದೆ.
ಉಳಿದಂತೆ ಚನ್ನಗಿರಿ ತಾಲ್ಲೂಕಿನಲ್ಲಿ 52 ಮಿ.ಮೀ, ದಾವಣಗೆರೆ 53 ಮಿ.ಮೀ,
ಹರಿಹರ 69 ಮಿ.ಮೀ, ಹೊನ್ನಾಳಿ 56 ಮಿ.ಮೀ, ಜಗಳೂರು ತಾಲ್ಲೂಕಿನಲ್ಲಿ 30
ಮಿ.ಮೀ, ನ್ಯಾಮತಿ 44 ಮೀ.ಮಿ ವಾಸ್ತವ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾಮನೆ ತೀವ್ರ
ಹಾನಿಯಾಗಿದ್ದು, ರೂ.2.00 ಲಕ್ಷ, 22 ಕಚ್ಚಾ ಮನೆ ಭಾಗಶಃ
ಹಾನಿಯಾಗಿದ್ದು, ರೂ.1.20 ಲಕ್ಷ. 910 ಎಕರೆ ಭತ್ತ,  10 ಎಕರೆ
ಮೆಕ್ಕೆಜೋಳದ  ಬೆಳೆ  ಹಾನಿಯಾಗಿದ್ದು ರೂ.27.60 ಲಕ್ಷ ಸೇರಿದಂತೆ
30.80 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ತಾಲ್ಲೂಕಿನ
ಹುಚ್ಚವ್ವನಹಳ್ಳಿ ಕೆರೆಯಲ್ಲಿ ತಿಪ್ಪೇಸ್ವಾಮಿ ತಂದೆ ನಾಗಪ್ಪ ಎಂಬ
ವ್ಯಕ್ತಿ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದು, ಇವರ ಶೋಧ ಕಾರ್ಯ
ನಡೆಯುತ್ತಿದೆ. 
    ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ
ತೀವ್ರಹಾನಿಯಾಗಿದ್ದು, ರೂ.13.00ಲಕ್ಷ, 10 ಪಕ್ಕಾ ಮನೆ ಭಾಗಶಃ
ಹಾನಿಯಾಗಿದ್ದು, ರೂ.4.00 ಲಕ್ಷ, 3 ಕಚ್ಚಾಮನೆ ತೀವ್ರ
ಹಾನಿಯಾಗಿದ್ದು, ರೂ.11.00 ಲಕ್ಷ, 8 ಕಚ್ಚಾಮನೆ ಭಾಗಶಃ
ಹಾನಿಯಾಗಿದ್ದು ರೂ.2.40 ಲಕ್ಷ, 2485 ಎಕರೆ ಭತ್ತದ ಬೆಳೆ
ಹಾನಿಯಾಗಿದ್ದು, ರೂ.144.00 ಲಕ್ಷ ರೂ. ನಷ್ಟದ ಅಂದಾಜು
ಮಾಡಲಾಗಿದೆ. ಮಲೇಬೆನ್ನೂರು ಹೋಬಳಿಯ ಗೋವಿನಹಾಳು
ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು 62 ವರ್ಷದ ಬಸವರಾಜಪ್ಪ
ತಂದೆ ಹಾಲಪ್ಪ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ ಅಲ್ಲದೆ, 2 ಕುರಿಗಳು
ಮೃತಪಟ್ಟಿರುತ್ತವೆ. ತಾಲ್ಲೂಕಿನಲ್ಲಿ ಒಟ್ಟು ರೂ.161.46 ಲಕ್ಷ ನಷ್ಟದ
ಅಂದಾಜು ಮಾಡಲಾಗಿದೆ.
ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆ ತೀವ್ರ
ಹಾನಿಯಾಗಿದ್ದು, ರೂ.7.00 ಲಕ್ಷ, 23 ಪಕ್ಕಾ ಮನೆ ಭಾಗಶಃ
ಹಾನಿಯಾಗಿದ್ದು ರೂ.11.00 ಲಕ್ಷ ಮತ್ತು 94 ಎಕರೆ ಭತ್ತದ ಬೆಳೆ
ಹಾನಿಯಾಗಿದ್ದು, ರೂ.5.00ಲಕ್ಷ  ಸೇರಿ ಒಟ್ಟು 23.00 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ.
ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ತೀವ್ರ
ಹಾನಿಯಾಗಿದ್ದು, ರೂ.3.00ಲಕ್ಷ, 39 ಕಚ್ಚಾ ಮನೆ ಭಾಗಶಃ
ಹಾನಿಯಾಗಿದ್ದು, ರೂ.11.70ಲಕ್ಷ. 4 ದನದ ಕೊಟ್ಟಿಗೆ ಹಾನಿಯಾಗಿದ್ದು,
ರೂ.0.60ಲಕ್ಷ ಮತ್ತು 1.20 ಎಕರೆ ಸೂರ್ಯಕಾಂತಿ ಬೆಳೆ
ಹಾನಿಯಾಗಿದ್ದು, ರೂ.0.80ಲಕ್ಷ, ಸೇರಿ ಒಟ್ಟು ರೂ.16.10 ಲಕ್ಷ ಅಂದಾಜು
ನಷ್ಟ ಸಂಭವಿಸಿರುತ್ತದೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ತೀವ್ರ
ಹಾನಿಯಾಗಿದ್ದು, ರೂ.5.50 ಲಕ್ಷ, 15 ಪಕ್ಕಾ ಮನೆ ಭಾಗಶ:
ಹಾನಿಯಾಗಿದ್ದು, ರೂ.7.95 ಲಕ್ಷ ಮತ್ತು 5 ಕಚ್ಚಾ ಮನೆ
ತೀವ್ರಹಾನಿಯಾಗಿದ್ದು ರೂ.7.50 ಲಕ್ಷ, ಹಾಗೂ 19 ಕಚ್ಚಾ ಮನೆ
ಭಾಗಶಃ ಹಾನಿಯಾಗಿದ್ದು, ರೂ.9.60 ಲಕ್ಷ 252 ಎಕರೆ ಭತ್ತ ಮತ್ತು
6 ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗಿದ್ದು, 46.44 ಲಕ್ಷ ರೂ.
ನಷ್ಟದ ಅಂದಾಜು ಮಾಡಲಾಗಿದೆ. ತಾಲ್ಲೂಕಿನ ನಲ್ಲೂರು ಸೇತುವೆ ಬಳಿ
ಎರವಾನಾಗ್ತಿಹಳ್ಳಿ ಗ್ರಾಮದ 70 ವರ್ಷ ವಯಸ್ಸಿನ ಕೆಂಚಪ್ಪ ಎಂಬ
ವೃದ್ಧ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ
ವರದಿಯಾಗಿರುತ್ತದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 77..79 ಲಕ್ಷ
ರೂ. ಅಂದಾಜು ನಷ್ಟ  ಸಂಭವಿಸಿರುತ್ತದೆ.
ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 6 ಕಚ್ಚಾ ಮನೆ ಭಾಗಶಃ
ಹಾನಿಯಾಗಿದ್ದು ರೂ.10.00 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಜಿಲ್ಲೆಯಲ್ಲಿ ಒಟ್ಟಾರೆ ರೂ.319.15 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ
ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು
ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *