ಮಾಡಿಸಲು ಸೂಚನೆ
ದಾವಣಗೆರೆ ಜಿಲ್ಲೆ 05 ತಾಲ್ಲೂಕಿನ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ
ಪ್ರವರ್ಗ-1, 2(ಎ), 3(ಎ) ಮತ್ತು 3(ಬಿ) ವಿದ್ಯಾರ್ಥಿಗಳು ಮೆಟ್ರಿಕ್
ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ
ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ
ವಿದ್ಯಾರ್ಥಿಗಳು ತಮ್ ಆಧಾರ್ ಸಂಖ್ಯೆಯನ್ನು ಬ್ಯಾಂಕ್ಖಾತೆಗೆ ಎನ್ಪಿಸಿಐ
ಜೋಡಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಅರ್ಹ ವಿದ್ಯಾರ್ಥಿಗಳಿಗೆ ಈಗಾಗಲೇ ಎಸ್.ಎಸ್.ಪಿಯಲ್ಲಿ ಈ ಇಲಾಖೆಯಿಂದ
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ
ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಗಳು ವಿದ್ಯಾರ್ಥಿಗಳಿಗೆ
ಮಂಜೂರಾಗಿರುತ್ತದೆ. ಮಂಜೂರಾಗಿರುವ ವಿದ್ಯಾರ್ಥಿಯು ಕೂಡಲೇ
ತಮ್ಮ ಆಧಾರ್ ಸಂಖ್ಯೆಯನ್ನು ತಾನು ಹೊಂದಿರುವ ಬ್ಯಾಂಕ್ ಖಾತೆಗೆ
ಎನ್.ಪಿ.ಸಿ.ಐ (ಓPಅI) ಜೋಡಣೆ ಮಾಡಬೇಕಾಗಿರುತ್ತದೆ. ಅಲ್ಲದೇ
ವಿದ್ಯಾರ್ಥಿಯ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ಆಧಾರ್ ನಲ್ಲಿರುವ
ಹೆಸರು ಒಂದೇ ರೀತಿ ಇರಬೇಕಾಗಿರುತ್ತದೆ. ಇಲ್ಲವಾದಲ್ಲಿ ಈ ವಿದ್ಯಾರ್ಥಿಯು
ಆಧಾರ್ ಸೆಂಟರ್ಗೆ ಹೋಗಿ ಹೆಸರನ್ನು ಆಪ್ಡೇಟ್ ಮಾಡಿಸಿಕೊಂಡು
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಚೇರಿಗಳಿಗೆ
ಭೇಟಿ ನೀಡಿ ಎಸ್.ಎಸ್.ಪಿ. ಯಲ್ಲಿ ಆಧಾರ್ ಜೋಡಣೆ ಮಾಡುವುದು
ಕಡ್ಡಾಯವಾಗಿರುತ್ತದೆ. ಆಧಾರ್ ಜೋಡಣೆ ಮಾಡಲು ಡಿ.02
ಕೊನೆಯ ದಿನವಾಗಿರುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ
ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.