ಹೊನ್ನಾಳಿ ತಾಲೂಕು ಎಚ್ ಗೋಪನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನದಲ್ಲಿ ಇಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಹೊನ್ನಾಳಿ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಟ್ರಸ್ಟ್ ರಿಜಿಸ್ಟರ್ ಹೆಚ ಗೋಪಗೊಂಡನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ 1482ನೆಯ ಮದ್ಯವರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪವನ್ನ ಬೆಳಗಿಸುವುದರ ಮೂಲಕ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುರವರು ಚಾಲನೆ ನೀಡಿದರು.


ನಂತರ ಡಿ ಜಿ ಶಾಂತನಗೌಡ್ರುರವರು ಮಾತನಾಡಿ ಟಿಪ್ಪು ಸುಲ್ತಾನ್ ಮತ್ತು ರಾಜಮಹಾರಾಜರ ಕಾಲದಿಂದಲೂ ಇಲ್ಲಿಯವರೆಗೂ ಆಡಳಿತ ನಡೆಸಿದಂತ ಸರ್ಕಾರ ಗಳು ಲೈಸೆನ್ಸ್ ಅನ್ನು ಕೊಟ್ಟು ಮದ್ಯವನ್ನು ಮಾರಾಟ ಮಾಡಲಿಕ್ಕೆ ಅನುಮತಿಯನ್ನು ಕೊಟ್ಟಿದ್ದಾರೆ. ಆದರೆ ಯಾವುದೇ ಸರ್ಕಾರವಾಗಲಿ ಲೈಸೆನ್ಸನ್ನು ರದ್ದುಪಡಿಸಲು ಇಲ್ಲಿಯವರೆಗೂ ಸಹ ಸಾಧ್ಯವಾಗಿಲ್ಲ ಕಾರಾಣಾಂತರದಿಂದ ಆದ ಕಾರಣ ಅಂಗಡಿಗಳನ್ನು ಮುಚ್ಚುವುದಕ್ಕೆ ಸಾಧ್ಯವಾಗಿಲ್ಲ, ಇಂತ ಆಯಾಯ ಗ್ರಾಮಗಳಲ್ಲಿ ಮಧ್ಯ ಕುಡಿಯುವ ಮಧ್ಯ ಪ್ರಿಯರಗಳು ಧರ್ಮಸ್ಥಳದ ಸಂಘದ ಮದ್ಯವರ್ಜನ ಸಮಿತಿಯವರು ಮದ್ಯವನ್ನು ಕುಡಿಯಬಾರದು ಎಂದು ಮದ್ಯವರ್ಜನ ಶಿಬಿರವನ್ನು 1482ನೆಯ ಮಧ್ಯವರ್ಜನ ಶಿಬಿರವನ್ನು ಈ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. .ಇದರಲ್ಲಿ ಸುಮಾರು 30ರಿಂದ 35 ಮಧ್ಯ ವ್ಯಸನಿಗಳು , ನಾವು ಕುಡಿಯುವುದನ್ನು ಬಿಡುತ್ತವೆ ಎಂದು ಈ ಕಾರ್ಯಗಾರದಲ್ಲಿ ಭಾಗಿಯಾಗಿದ್ದಾರೆ .
ಇಂತಹ ಮಹತ್ತರವಾದ ಕಾರ್ಯವನ್ನು ಮಾಡುತ್ತಿರುವ ಧರ್ಮಸ್ಥಳ ಸಂಘದ ಸಮಿತಿಯವರಿಗೆ ಧನ್ಯವಾದಗಳನ್ನು ತಿಳಿಸುತ್ತಾ ಅವರುಗಳನ್ನು ಶ್ಲಾಘಿಸಿದರು. ಮದ್ಯವ್ಯಸನಿಗಳ ಹೆಂಡತಿಯರು ಮಕ್ಕಳು ಕುಟುಂಬ ಸಮೇತವಾಗಿ ಈ ಶಿಬಿರದಲ್ಲಿ ಭಾಗಿಯಾಗಿ ನನ್ನ ಗಂಡ ಅಣ್ಣತಮ್ಮ ಮಾವ ಅಳಿಯ ಎಲ್ಲರೂ ಕುಡಿಯುವುದನ್ನು ಬಿಟ್ಟರೆ ಅವರು ಕಟ್ಟಿದ ತಾಳಿ ಜೋಪಾನವಾಗಿ ಇರಲಿಕ್ಕೆ ಸಾಧ್ಯ ಎಂದು ಅವರ ಮೇಲೆ ನಂಬಿಕೆ ಇಟ್ಟುಕೊಂಡು ಮಧ್ಯ ಕುಡಿಯುವುದನ್ನು ಬಿಡಸಲಿಕ್ಕೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಡಿ ಜಿ ಶಾಂತನಗೌಡರ ಅವರು ತಿಳಿಸಿದರು.
ಮಾತನ್ನು ಮುಂದುವರಿಸಿದ ಡಿ ಜಿ ಶಾಂತನಗೌಡ್ರು ಅವರು ಇಂತಹ ಮಧ್ಯೆ ವೆಸನಿಗಳು ಶಿಬಿರದಲ್ಲಿ ಭಾಗಿಯಾಗಿ 100 ನೂರಕ್ಕೆ 9 9 /:ರಷ್ಟು ಜನರು ಕುಡಿಯುವುದನ್ನು ಬಿಟ್ಟಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಕತ್ತಿಗೆ ಗ್ರಾಮದ ರಮೇಶ ಎಂಬ ವ್ಯಕ್ತಿ ಕುಡಿತದ ದುಶ್ಚಟದಿಂದ ಅವರ ಕುಟುಂಬವೇ ಹಾಳಾಗಿತ್ತು ಇಂತಹ ಶಿಬಿರಕ್ಕೆ ಭಾಗಿಯಾಗಿ ಕುಡಿಯುವುದನ್ನು ಬಿಟ್ಟು ,ಪ್ರಗತಿಪರ ರೈತನಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಜನರ ಸೇವೆಯನ್ನು ಮಾಡುತ್ತಿರುವುದು ಒಂದು ಮಾದರಿಯಾಗಿದೆ .


ಆದ ಕಾರಣ ಈ ಶಿಬಿರದಲ್ಲಿ ಭಾಗಿ ಯಾಗಿರುವ ಎಲ್ಲಾ ಮದ್ಯವ್ಯಸನಿಗಳು ನೀವು ಕೂಡಾ ಈ ಚಟದಿಂದ ಮುಕ್ತರಾಗುತ್ತೀರಿ ಎಚ್ ಗೋಪನಹಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಆಶೀರ್ವಾದ ಮತ್ತು ಧರ್ಮಸ್ಥಳ ಮಂಜುನಾಥಸ್ವಾಮಿ ಆಶೀರ್ವಾದದಿಂದ ಇಂತಹ ದುಶ್ಚಟ ಗಳಿಂದ ನೀವುಗಳು ಮುಕ್ತರಾಗಿರಿ ಎಂದು ಮಾತನ್ನು ಮುಗಿಸಿದರು.
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ;- ಡಿ ಜಿ ಶಾಂತನ ಗೌಡ್ರು ಮಾಜಿ ಶಾಸಕರು ಹೊನ್ನಾಳಿ ಡಿ ಬಿ ಗಂಗಪ್ಪ ಮಾಜಿ ಶಾಸಕರು ನ್ಯಾಮತಿ ,ರೇವಣಪ್ಪ ಕೆ ಎಂ ಆರ್ ಮಹೇಶ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ,ಮಾಜಿ ತಾಲೂಕು ಪಂಚಾಯಿತಿ ಸದಸ್ಯರುಗಳಾದ ಶಿವಪ್ಪ ಶಿವು, ಹೊಸಕೇರಿ ಸುರೇಶ್ ,ಬೆಸ್ಕಾಮ್ ಅಧಿಕಾರಿ ಸಿದ್ದಪ್ಪ ,ಮತ್ತು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಗೋಪನಹಳ್ಳಿ ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶ್ರೀ ನಾಗೇಶ್ ಯೋಜನಾಧಿಕಾರಿ ಜ ಜಾ ವೆದೀಕೆ ಇವರು ಮಾತನಾಡಿದರು. ಯೋಜನಾಧಿಕಾರಿ ಶ್ರೀ ಬಸವರಾಜ್ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.ಮೆಲ್ವಿಚಾರಕ ನಾಗರಾಜ ಸ್ವಾಗತಿಸಿದರು.35 ಶಿವಿರಾರ್ಥಿಗಳು ಭಾಗವಹಿಸಿದ್ದಾರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ) ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *