ಜಿಲ್ಲಾ ಮಟ್ಟದ ರೆಡ್ಡಿ ಸಮುದಾಯದ ಸದಸ್ಯರ ಜಿಲ್ಲಾ ಮಟ್ಟದ ಸಂಘಟನಾ ಸಭೆ ಹಾಗೂ ಉಯ್ಯಾಲವಾಡ ನರಸಿಂಹರೆಡ್ಡಿಯ ಜನ್ಮ ದಿನೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಇಂದು ದಿನಾಂಕ 22-11-2021 ರಂದು ಬಾಗಲಕೋಟೆ ನಗರದ ವಿವೇಕಾನಂದ ಸಂಸ್ಥೆಯ ಹೇಮ-ವೇಮ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಸಭೆಯನ್ನು ನಡೆಸಲಾಯಿತು. ಸಭೆಗೂ ಮುನ್ನ ದಾಸರಲ್ಲಿ ಶ್ರೇಷ್ಟರಾದ ಕನಕದಾಸರ ಜಯಂತ್ಯೋತ್ಸವ ಶುಭಾಶಯಗಳನು ಕೊರುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭೆಯನ್ನುದ್ದೇಶಿಸಿ ಅಖಿಲ ಭಾರತ ರೆಡ್ಡಿ ಒಕ್ಕೂಟದ ರಾಜ್ಯ ಕಾರ್ಯಕಾರಿಣಿಯ ಸಮಿತಿ ಸದಸ್ಯರಾದ ಬಿ ಎಂ ಪಾಟೀಲ್ ಮಾತನಾಡಿ ರಾಜ್ಯದಲ್ಲಿರುವ ಪ್ರತಿಯೊಂದು ಜಿಲ್ಲೆಯಾದ್ಯಂತ ರೆಡ್ಡಿ ಸಮಾಜವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಸಂಘಟಿಸಲು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಗ್ರಾಮೀಣ ಹಾಗೂ ಹೋಬಳಿ ಮಟ್ಟದ ತಳಪಾಯದಿಂದ ಹಿಡಿದು ಸಂಘಟನೆಯನ್ನು ಬಲವರ್ಧನೆ ಮಾಡಲು ಸಮಾಜದ ಯುವಕರಿಗೆ ಮನವಿ ಮಾಡಿದರು. ಅಖಿಲ ಭಾರತ ರೆಡ್ಡಿ ಒಕ್ಕೂಟವು ರಾಷ್ಟ್ರಮಟ್ಟದ ಏಕೈಕ ಸಂಘಟನೆಯಾಗಿದ್ದು ರಾಷ್ಟ್ರಮಟ್ಟದ ರೆಡ್ಡಿ ಸಮುದಾಯವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಈ ಸಂಘಟನೆಯನ್ನು ಕಟ್ಟಲಾಗಿದೆ ಎಂದ ಅವರು ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಲು ಸಂಘಟನೆಯನ್ನು ಸಂಘಟಿಸಲೇ ಬೇಕಾಗಿದೆ ಈಗಾಗಲೇ ಸಮಾಜದ ಸದಸ್ಯರು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಅಖಿಲ ಭಾರತ ರೆಡ್ಡಿ ಒಕ್ಕೂಟದ ಸದಸ್ಯತ್ವವನ್ನು ಪಡೆದಿದ್ದಾರೆ,
ಇದೇ ತಿಂಗಳು 24 ರಂದು ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜಯಂತ್ಯೋತ್ಸವ ಆಚರಿಸಲು ರೆಡ್ಡಿ ಒಕ್ಕೂಟದಿಂದ ತೀರ್ಮಾನಿಸಲಾಗಿದೆ ನರಸಿಂಹ ರೆಡ್ಡಿ ಅವರು ಸ್ವತಂತ್ರ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಬಲಿದಾನವಾಗಿದ್ದಾರೆ ಅಂಥವರ ಜಯಂತಿಯನ್ನು ಆಚರಿಸುವುದು ನಮ್ಮ ಸಮುದಾಯದ ಹಿರಿಯರಿಗೆ ನೀಡುತ್ತಿರುವ ಗೌರವ ಎಂದರು, ಕಾರ್ಯಕ್ರಮ ಉದ್ದೇಶಿಸಿ ಇನ್ನೋರ್ವ ರಾಜ್ಯ ಕಾರ್ಯಕಾರಿಣಿಯ ಸದಸ್ಯರಾದ ಶಂಕರ ರೆಡ್ಡಿ ಮಾತನಾಡಿ ಸಮಾಜದ ಸಂಘಟನೆ ಈ ಸಂದರ್ಭದಲ್ಲಿ ಅತೀ ಅವಶ್ಯಕತೆ ಇದೇ ಹಾಗೂ ಸಮುದಾಯದ ಮುಂದಿನ ದಿನಗಳಲ್ಲಿ ಐರಾ ಜಿಲ್ಲಾಧ್ಯಂತ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.ಸಮುದಾಯದ ಕುರಿತು ಗುತ್ತಿಗೆದಾರರಾದ ಬಸವರಾಜ ಕಟಗೇರಿ ಮಾತನಾಡಿದರು.. ಕಾರ್ಯಕ್ರಮದಲ್ಲಿ ವೆಂಕಟೇಶ್ ಛಬ್ಬಿ ಮಹಾಂತೇಶ್ ಮಾಚಾ, ಹನುಮಂತರೆಡ್ಡಿ ಬಿಲ್ ಕೆರೂರು, ಮಲ್ಲನಗೌಡ ಕೆಸರಭಾವಿ, ಶಿಪುತ್ರಪ್ಪಾ ರೂಗಿ, ಜಗದೀಶ ದಾದ್ಮಿ ಹಾಗೂ ಸಮಾಜದ ಸದಸ್ಯರು ಭಾಗವಹಿಸಿದ್ದರು.