ಕ್ರೀಡಾಪಟುಗಳ ಆಯ್ಕೆ
ಹಿಮಾಚಲ ಪ್ರದೇಶದ ಹುನಾದಲ್ಲಿ ನ.27 ರಿಂದ ಡಿ.01 ರವರೆಗೆ
ನಡೆಯುವ 31ನೇ ರಾಷ್ಟ್ರಮಟ್ಟದ ಸಬ್ ಜ್ಯೂನಿಯರ್ ಖೋ-ಖೋ
ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ತಂಡಕ್ಕೆ
ದಾವಣಗೆರೆ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳಾದ ಪುನೀತ್
ಭೋವಿ, ಪ್ರಕಾಶ್ ಮಾದರ್ ಮತ್ತು ಸಮರ್ಥ ಇವರು ಚಿತ್ರದುರ್ಗ
ಜಿಲ್ಲೆಯ ಚಳ್ಳಕೆರೆಯಲ್ಲಿ ನ.12 ರಿಂದ 23 ರವರೆಗೆ ನಡೆದ ರಾಜ್ಯ
ತಂಡದ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ ತರಬೇತಿ
ಪಡೆದು, ರಾಜ್ಯ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಈ ಕ್ರೀಡಾಪಟುಗಳಿಗೆ ಇಲಾಖೆಯ ಖೋ-ಖೋ ತರಬೇತುದಾರ
ಜೆ.ರಾಮಲಿಂಗಪ್ಪ ಇವರು ತರಬೇತಿ ನೀಡುತ್ತಿದ್ದಾರೆ. ಇವರು
ಹಿಮಾಚಲ ಪ್ರದೇಶದ ಹುನಾದಲ್ಲಿ ನಡೆಯುವ 31ನೇ
ರಾಷ್ಟ್ರಮಟ್ಟದ ಸಬ್ ಜ್ಯೂನಿಯರ್ ಖೋ-ಖೋ ಚಾಂಪಿಯನ್‍ಷಿಪ್‍ನಲ್ಲಿ
ಭಾಗವಹಿಸುವ ಕರ್ನಾಟಕ ರಾಜ್ಯ ತಂಡ ವಿಜೇತರಾಗಲೆಂದು
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ
ಎಂ.ಟಿ. ಮಂಜುನಾಥಸ್ವಾಮಿ ಎಂ. ಟಿ. ಮಂಜುನಾಥಸ್ವಾಮಿ, ಎಲ್ಲಾ
ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಶುಭ
ಹಾರೈಸಿದ್ದಾರೆ.