ಅಭಿಯಾನ
ನಗರ ವ್ಯಾಪ್ತಿಯಲ್ಲಿ ಕಂಡುಬರುವ ಚಿಂದಿ ಆಯುವ, ಬೀದಿ
ಸುತ್ತುವ, ಭಿಕ್ಷೆ ಬೇಡುವ ಮಕ್ಕಳು ಹಾಗೂ ಬಾಲಕಾರ್ಮಿಕ
ಮಕ್ಕಳನ್ನು ರಕ್ಷಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್
ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿವಿಧ ಸ್ವಯಂ
ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನ.23 ರಿಂದ ಡಿ.05
ರವರೆಗೆ ವಿಶೇಷ ಅಭಿಯಾನ ಕೈಗೊಳ್ಳಲಾಗಿದ್ದು, ಈ ಅವಧಿಯಲ್ಲಿ
ನಗರದ ಎ.ಪಿ.ಎಂ.ಸಿ., ಬಸ್ ನಿಲ್ದಾಣ, ನಿಟುವಳ್ಳಿ, ಹದಡಿ ರಸ್ತೆ, ಬಾಪೂಜಿ ಆಸ್ಪತ್ರೆ
ರಸ್ತೆ, ಪಿ.ಬಿ ರಸ್ತೆಗಳಲ್ಲಿ ಅನಿರೀಕ್ಷತ ದಾಳಿ ಮಾಡುವುದರ ಮೂಲಕ
ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸಿ ಪುನರ್ವಸತಿ
ಕಲ್ಪಿಸಿಕೊಡಲಾಗುವುದು.
ನ.23 ರ ಮಂಗಳವಾರದಂದು ನಗರದಲ್ಲಿ ಇಂತಹ 13 ಗಂಡು
ಮಕ್ಕಳು ಹಾಗೂ 1 ಹೆಣ್ಣು ಮಗುವನ್ನು ರಕ್ಷಣೆ ಮಾಡಲಾಗಿದ್ದು,
ಇವರನ್ನು ಬಾಲಕರ ಸರ್ಕಾರಿ ಬಾಲಮಂದಿರ ಮತ್ತು ಬಾಲಕಿಯರ
ಸರ್ಕಾರಿ ಬಾಲಮಂದಿರಕ್ಕೆ ರಕ್ಷಣೆ ಮತ್ತು ಪೋಷಣೆಗಾಗಿ ಬಿಡಲಾಗಿದೆ
ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.