ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ವಿ.ಎಸ್.ಎಸ್.ಎನ್. ಕಟ್ಟಡದಲ್ಲಿ ಶಿವಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಲಿ., ಇದರ ನಾಲ್ಕನ್ನೇ ಶಾಖೆಯನ್ನು ಉದ್ಘಾಟಿಸಿ ಹಾಗೂ ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ಸಿರಿಗೆರೆ ತರಳಬಾಳು ಬೃಹನ್ಮಠ ಡಾ. ಶಿವಮೊರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಮಾತನಾಡಿದರು
ಹೊನ್ನಾಳಿ,24: ಸಮಾಜದ ಕೆಲವರು ಮಠ ಮತ್ತು ಗುರುಗಳ ಹೆಸರನ್ನು ಬಳಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಆದರೆ ಇನ್ನು ಕೆಲ ದುಷ್ಟರು ಇದೇ ಮಠ ಮತ್ತು ಗುರುಗಳ ಹೆಸರನ್ನು ಸ್ವಾರ್ಥಕ್ಕೆ ಬಳಿಸಿಕೊಂಡು ಮಠ ಮತ್ತು ಗುರುಗಳ ವಿರುದ್ದವೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಅವರು ಬುಧವಾರ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ವಿ.ಎಸ್.ಎಸ್.ಎನ್. ಕಟ್ಟಡದಲ್ಲಿ ಶಿವ ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಲಿ., ಇದರ ನಾಲ್ಕನ್ನೇ ಶಾಖೆಯನ್ನು ಉದ್ಘಾಟಿಸಿ ಹಾಗೂ ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ಮಾತನಾಡಿದರು.
ಸೇವೆಯೇ ಸಹಕಾರದ ಮೂಲ ಉದ್ದೇಶವಾಗಿದ್ದು ಇದರಂತೆ ಸುಮಾರು 20ವರ್ಷಗಳ ಹಿಂದೆ ಹೊನ್ನಾಳಿ ತಾಲೂಕಿನಲ್ಲಿ ಶಿವಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಆರಂಭಗೊಂಡು ಕುಂದೂರು ಸಾಸ್ವೇಹಳ್ಳಿ, ನ್ಯಾಮತಿ ಹಾಗೂ ಇದೀಗ ಚೀಲೂರು ಗ್ರಾಮದÀಲ್ಲಿ 4ನೇಶಾಖೆ ಆರಂಭಗೊಂಡಿದೆ ಎಂದರೆ ಇಲ್ಲಿನ ಸೊಸೈಟಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ ಎಂದರ್ಥ ಎಂದು ಹೇಳಿದರು.


ಆದರೆ ಪ್ರಸ್ತುತ ದಿನಗಳಲ್ಲಿ ಕೆಲ ಸ್ವಾರ್ಥಿಗಳು ಗುರು ಹಾಗೂ ಮಠಗಳ ವಿರುದ್ದ ಅಪಪ್ರಚಾರ ಹಾಗೂ ಆರೋಪ ಗಳನ್ನು ಮಾಡಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ ಮಠದ ವಿರುದ್ಧ ಆರೋಪ ಹಾಗೂ ಪಿತೂರಿ ಮಾಡುತ್ತಿರುವವರ ಗುಂಪಿನಲ್ಲಿ ಹೊನ್ನಾಳಿ ತಾಲೂಕಿನ ಎರಡು ಜನ ಇದ್ದಾರೆ ಎಂದು ಹೇಳಿದರು.
ಇಂತಹ ವಿಚಾರಗಳಲ್ಲಿ ಗುರುಗಳು ಮತ್ತು ಮಠದ ಸಂರಕ್ಷಣೆಯ ಹೊಣೆ ಆ ಸಮಾಜದ ಭಕ್ತರದ್ದಾಗಿಯೇ ಹೊರತು ಪೆÇಲೀಸರದ್ದಲ್ಲ ಈ ಕಾರಣಕ್ಕೆ ಮಠ ಮತ್ತು ಗುರುಗಳ ವಿರುದ್ಧ ಪಿತೂರಿ ಮಾಡುವವರಿಗೆ ಭಕ್ತರೇ ಬುದ್ದಿಕಲಿಸಬೇಕಾಗಿದೆ ಕೆಲ ಸಂದರ್ಭದಲ್ಲಿ ಕಾನೂನಿಗಿಂತ ಧರ್ಮ ದೊಡ್ಡದು ಮಠದ ನ್ಯಾಯಪೀಠದಲ್ಲಿ ಧರ್ಮದ ಆಧಾರದ ಮೇಲೆ ನ್ಯಾಯ ತೀರ್ಮನಗಳಾಗುತ್ತವೆ ಎಂದು ಹೇಳಿದರು.
ಸಮುದಾಯ ಭವನಕ್ಕೆ ಮಠದಿಂದ 50 ಲಕ್ಷಃ- ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿ ಬಿದ್ದಿದ್ದ ತರಳಬಾಳು ಸಮುದಾಯ ಭವನದ ಬಗ್ಗೆ ಪ್ರಸ್ತಾಪಿಸಿ ಶ್ರಿಮಠದಿಂದ ತಕ್ಷಣ 50 ಲಕ್ಷನೀಡಲಾಗುವುದು ಇದರ ಜೊತೆಗೆ ತಾಲೂಕು ವೀರಶೈವ ಸಮಾಜದವತಿಯಿಂದ 50ಲಕ್ಷ ಸಂಗ್ರಹಿಸಿ ಸಮುದಾಯ ಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸಮಾಜದ ಮುಖಂಡರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅವರು ಮಾತನಾಡಿ, ತಾಲೂಕಿನಲ್ಲಿ ಸ್ವಾಮೀಜಿಯವರ ಮೂಲಕ ಆರಂಭಗೊಂಡ ಶಿವ ಕ್ರೆಡಿಟ್ ಕೋ.ಆಪರೇಟಿವ್‍ಸೊಸೈಟಿ ಇನ್ನು 4 ಶಾಖೆಗಳನ್ನು ಹೊಂದುವ ಮೂಲಕ ಉತ್ತಮ ಕೆಲಸ ಮಾಡಿದ್ದು ಜೊತಗೆ ಶೇಕಡ 3ರಿಂದ ಆರಂಭಗೊಂಡು ಇಂದು ಶೇಕಡ 12ರಷ್ಟು ಡಿವಿಡೆಂಟ್ ನೀಡುವ ಹಂತ ತಲುಪಿರುವುದು ಉತ್ತಮ ಕಾರ್ಯವೈಖರಿಗೆ ಹಾಗೂ ಸಮಾಜದ ಬಂಧುಗಳ ಸಹಕಾರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರೈತ ಸಂಘದ ರಾಜ್ಯ್ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ ಸಿರಿಗೆರೆ ಮಠದ ಸ್ವಾಮೀಜಿಯವರು ನೀರಾವರಿ ಸೌಲಬ್ಯಗಳು ಹಾಗೂ ರೈತರ ಹಿತಕಾಯುವ ಅನೇಕ ಮಹತ್ತರ ಕೆಲಸಗಳನ್ನು ಮಾಡಿದ್ದಾರೆ ಸಿರಿಗೆರೆ ಮಠ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.
ಸೊಸೈಟಿಯ ಅಧ್ಯಕ್ಷ ಜೆ.ಶ್ರಿಕಾಂತ್ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಮತಿ ತಾಲೂಕು ಸಾಧು ವೀರಶ್ರೈವ ಸಮಾಜದ ಅಧ್ಯಕ್ಷ ಜಿ. ಶಿವಪ್ಪ, ಹೊನ್ನಾಳಿ ತಾಲೂಕು ಅಧ್ಯಕ್ಷ ಕೆ. ಕರೆಗೌಡರು,D S Pradeep, ಕಾರ್ಯದರ್ಶಿ ರುದ್ರೇಶ್, ಜಿ.ಪಂ.ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್, ಅಡಳಿತ ಮಂಡಳಿ ಸದಸ್ಯರುಗಳು, ಸಮಾಜದ ಮುಖಂಡರುಗಳು ಇದ್ದರು.

Leave a Reply

Your email address will not be published. Required fields are marked *