ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ.
ರೇಣುಕಾಚಾರ್ಯ ಅವರು ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ
ಹಮ್ಮಿಕೊಂಡಿದ್ದಾರೆ.
ರೇಣುಕಾಚಾರ್ಯ ಅವರು ನ. 26 ರಂದು ಬೆಳಿಗ್ಗೆ
ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 10.30 ಕ್ಕೆ ದಾವಣಗೆರೆಗೆ
ಆಗಮಿಸುವರು. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ
ಕಚೇರಿಯಲ್ಲಿ ‘ಸಂವಿಧಾನ ದಿವಸ’ ಆಚರಣೆ ಅಂಗವಾಗಿ ಭಾರತ
ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮದಲ್ಲಿ
ಭಾಗವಹಿಸುವರು.
ಅಂದು ಬೆಳಿಗ್ಗೆ 11.30 ಕ್ಕೆ ನಗರದ ಹದಡಿ ರಸ್ತೆಯಲ್ಲಿರುವ
ಎಸ್.ಎಸ್.ಕಲ್ಯಾಣ ಮಂಟಪದಲ್ಲಿ ಪಕ್ಷದ ವತಿಯಿಂದ ಆಯೋಜಿಸಿರುವ ಶಾಸಕ
ಎಸ್.ಎ.ರವೀಂದ್ರನಾಥ್ ಅವರ ಅಮೃತ ಮಹೋತ್ಸವ ಅಭಿನಂದನಾ
ಸಮಾರಂಭ ಮತ್ತು ‘ಕೃಷಿ ಕಣ್ಮಣಿ’ ಪುಸ್ತಕ ಬಿಡುಗಡೆ
ಸಮಾರಂಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸುವರು.
ಮಧ್ಯಾಹ್ನ 03 ಗಂಟೆಗೆ ನ್ಯಾಮತಿ ತಾಲ್ಲೂಕು ಚಟ್ನಹಳ್ಳಿ ಗ್ರಾಮಕ್ಕೆ
ತೆರಳಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 7
ಗಂಟೆಗೆ ಹೊನ್ನಾಳಿಗೆ ತೆರಳಿ ವಾಸ್ತವ್ಯ ಮಾಡುವರು.
ನ. 27 ರಂದು ಬೆ. 10 ರಿಂದ ಮಧ್ಯಾಹ್ನ 2 ರವರೆಗೆ
ಹೊನ್ನಾಳಿಯಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ
ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ಮಾದಾಪುರಕ್ಕೆ ತೆರಳಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸಂಜೆ 6 ಗಂಟೆಗೆ ಹೊನ್ನಾಳಿಗೆ ಆಗಮಿಸಿ ಸಾರ್ವಜನಿಕ ಕುಂದುಕೊರತೆ
ಅಹವಾಲು ಸ್ವೀಕರಿಸಿ ವಾಸ್ತವ್ಯ ಮಾಡುವರು.
ನ. 28 ರಂದು ಬೆಳಿಗ್ಗೆ 11 ಗಂಟೆಗೆ ಕುಂದೂರು ಗ್ರಾಮಕ್ಕೆ
ತೆರಳಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ
12 ರಿಂದ ಸಂಜೆ 6 ರವರೆಗೆ ಹೊನ್ನಾಳಿ ಮತ್ತು ನ್ಯಾಮತಿ
ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ
ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ರಾತ್ರಿ 7
ಗಂಟೆಗೆ ದಾವಣಗೆರೆಗೆ ತೆರಳಿ ಸ್ಥಳೀಯ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ರಾತ್ರಿ 9.30 ಗಂಟೆಗೆ ಹೊನ್ನಾಳಿಗೆ ತೆರಳಿ
ವಾಸ್ತವ್ಯ ಮಾಡುವರು.
ನ.29 ರಿಂದ ಡಿ.02 ರವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 7
ಗಂಟೆಯವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ
ಅತಿವೃಷ್ಟಿಯಿಂದ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ
ನಡೆಸುವರು. ನಂತರ ಹೊನ್ನಾಳಿಗೆ ತೆರಳಿ ವಾಸ್ತವ್ಯ
ಮಾಡುವರು.
ಡಿ.03 ರಂದು ಬೆಳಿಗ್ಗೆ 10.30ಕ್ಕೆ ಹೊನ್ನಾಳಿ ತಾಲ್ಲೂಕಿನ ಸದ್ಗುರು
ಬಸವರಾಜ ದೇಶಿಕೇಂದ್ರ ಮಹಾಸ್ವಾಮೀಜಿಯವರ ಪಟ್ಟಾಭೀಷೇಕದ
44ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ
ಹೊನ್ನಾಳಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆ
ಅಹವಾಲುಗಳನ್ನು ಸ್ವೀಕರಿಸುವರು. ನಂತರ ವಾಸ್ತವ್ಯ
ಮಾಡುವರು.
ಡಿ.04 ರಂದು ಬೆಳಿಗ್ಗೆ 11 ಗಂಟೆಗೆ ನ್ಯಾಮತಿ ಪಟ್ಟಣದ ಬಾಲಕಿಯರ
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ತಾಲ್ಲೂಕು ಮಟ್ಟದ
ಕ್ರೀಡಾಕೂಟ ಸಮಾರಂಭದ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ
1.30ಕ್ಕೆ ಹೊನ್ನಾಳಿಗೆ ಆಗಮಿಸಿ, ಬಳಿಕೆ ರಾತ್ರಿ 7 ಗಂಟೆಗೆ ಬೆಂಗಳೂರಿಗೆ
ತೆರಳುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.