ಶಿಕಾರಿಪುರ ಕಾಂಗ್ರೆಸ್
ಪಕ್ಷದ ಕೆಲ ನಾಯಕರು ಸೊಕ್ಕಿನ, ಧಿಮಾಕಿನ ಮಾತುಗಳನ್ನಾಡುತ್ತಿದ್ದಾರೆ,ಇದಕ್ಕೆ ಉತ್ತರವನ್ನು ಕೊಡಲು ಅಭ್ಯರ್ಥಿ ಡಿ ಎಸ್ ಅರುಣ್ ಅವರನ್ನು ಸಲ್ಲಿಸುವುದರ ಮೂಲಕ ಉತ್ತರ ಕೊಡಲು ಸಾಧ್ಯ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ ಡಿ ಎಸ್ ಅರುಣ್ ಅವರಿಗೆ ಮತ ನೀಡಿ ದೇಶದಲ್ಲಿ ಕಾಂಗ್ರೆಸ್ ಮುಳುಗುವ ಹಡಗು ಅದಕ್ಕೆ ಉಸಿರೇ ಇಲ್ಲ.ಕರ್ನಾಟಕದಲ್ಲಿ ಸ್ವಲ್ಪ ಉಸಿರು ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವ ರು. ಹೇಳಿ ದಾರು. ಅವರು ಇಂದು ಶಿಕಾರಿಪುರದ ಮಂಡಳದ ವತಿಯಿಂದ ಶಿಕಾರಿಪುರದಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪುರಸಭೆ ಸದಸ್ಯರ ಸಭೆಯನ್ನು ಉದ್ದೇಶಿಸಿ ನ್ಮಾಅಗ್ತಅರ್ನಾಅಡ್ಡಿ ಕುಮದುತಿ ಶಾಲಾ ಮೈದಾನದಲ್ಲಿ ನೆಡೆದ ಪ್ರಚಾರ ಅಭೆಯಲ್ಲಿ ತಿಳಿಸಿದರು,ಡಿ ಎಸ್ ಅರುಣ್ ಅವರು ಮೊದಲನೇ ಸುತ್ತಿನಲ್ಲಿ ವಿಜಯವನ್ನು.ಸಾಧಿಸುತ್ತಾರೆ. ,ಅವರು ಅತಿ ಹೆಚ್ಚು ಮತಗಳಿಂದ ಜಯ ಸಾಧಿಸಿಸಲು ನಮ್ಮ ಪಕ್ಷದ ಬೆಂಬಲಿತ ಸದಸ್ಯರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರುಗಳು ಅನ್ಯಪಕ್ಷದ ಮತ್ತು ಪಕ್ಷೇತರ ಅಭ್ಯರ್ಥಿಗಳನ್ನು ನಮ್ಮ ಪಕ್ಷಕ್ಕೆ ಮತ ನೀಡುವಂತೆ ನೋಡಿಕೊಳ್ಳಬೇಕು ಈ ರೀತಿ ಮಾಡಿದರೆ ನಾವು ಪಕ್ಷಕ್ಕೆ ದೊಡ್ಡ ಕೊಡುಗೆಯನ್ನು ನೀಡ ಬಹುದು ಎಂದರು. ರಾಜ್ಯದಲ್ಲಿ ನಾವು 15 ಹದಿನೈದಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಆದ್ದರಿಂದ ಪರಿಷತ್ ಸದಸ್ಯರ ಸಂಖ್ಯೆ ಬಿಜೆಪಿ ಪಕ್ಷ ಹೆಚ್ಚಿಸಲಿದೆ,ಶಿಕಾರಿಪುರಕ್ಕೆ ಮತ್ತು ರಾಜ್ಯಕ್ಕೆ ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ನೀಡಿದ ಅನೇಕ ಜನಪರ ಕಾರ್ಯಗಳು ಮತ್ತು ಅಭಿವದ್ಧಿ ಯೋಜನೆಗಳಿಂದ ನಾವು ಗೆಲುವು ಸಾಧಿಸಲು ಸಾಧ್ಯ ನಮ್ಮ ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸಲು 2023 ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದರು
ಭಾರತೀಯ ಜನತಾ ಪಾರ್ಟಿ ಶಿಕಾರಿಪುರ ಮಂಡಲ ವತಿಯಿಂದ ಶಿಕಾರಿಪುರದಲ್ಲಿ ಏರ್ಪಡಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಮತ್ತು ಸಂಸದ ಬಿ ವೈ ರಾಘವೇಂದ್ರ ಮಾತನಾಡಿದರು, ಸಂದರ್ಭದಲ್ಲಿ ಶಾಸಕರಾದ ಹರತಾಳು ಹಾಲಪ್ಪ, ಅಶೋಕ್ ನಾಯ್ಕ,ಎಸ್ ರುದ್ರೇಗೌಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ್,ಅಭ್ಯರ್ಥಿ ಡಿ ಎಸ್ ಅರುಣ್,ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರಾ ರಾಮಯ್ಯ,ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಎಸ್ ದತ್ತಾತ್ರಿ ,ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷರಾದ ರೇವಣಪ್ಪ, ಶಿಕಾರಿಪುರ ತಾಲ್ಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್ ,ಮತ್ತು ಪ್ರಧಾನ ಕಾರ್ಯದರ್ಶಿಯಾದ ಸಿದ್ದಲಿಂಗಪ್ಪ ನಿಂಬೆಗುಂದಿ ಗುರುಮೂರ್ತಿ.ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ,ಸೇರಿದಂತೆ ಪ್ರಮುಖ ರೂ ವೇದಿಕೆಯಲ್ಲಿ ಆಸೀನರಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತ ಗ್ರಾಮ ಪಂಚಾಯತಿ ಪುರಸಭೆ ಅಧ್ಯಕ್ಷ ಸದಸ್ಯರುಗಳು ನೆರೆದಿದ್ದರು.

Leave a Reply

Your email address will not be published. Required fields are marked *