ಹೊನ್ನಾಳಿ ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು 15ರಿಂದ 20 ದಿನಗಳಿಂದ ಸುಮಾರು ಪ್ರತಿ ದಿನ ಹತ್ತರಿಂದ ಹದಿನೈದು ಹಂದಿಗಳು ಸಾವನ್ನಪ್ಪುತ್ತಿವೆ ಪ್ರತಿ ವಾರ್ಡಿನ ಸದಸ್ಯರುಗಳು ಮತ್ತು ಸಾರ್ವಜನಿಕರು ಫೋನಿನ ಮುಖಾಂತರ ದೂರು ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರಾದ ಓಬಳದಾರ್ ಬಾಬುರವರು ಸುದ್ದಿಗೋಷ್ಠಿಯನ್ನು ಹೊನ್ನಾಳಿ ಪತ್ರಿಕಾಭವನದಲ್ಲಿ ಕರೆಯಲಾಯಿತು.
ನಂತರ ಅಧ್ಯಕ್ಷರಾದ ಬಾಬು ರವರು ಮಾತನಾಡಿ ನಮಗೆ ಸಾರ್ವಜನಿಕರು ಫೋನಿನ ಕರೆ ಮಾಡಿ ನಮ್ಮ ನಮ್ಮ ವಾರ್ಡಿನಲ್ಲಿ ಹಂದಿಗಳು ಸಾಯುತ್ತಿವೆ ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಆ ಸತ್ತಿರುವ ಹಂದಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದಾವಣಗೆರೆಗೆ ಕಳಿಸಲಾಗಿತ್ತು. ಅಲ್ಲಿ ಪರೀಕ್ಷೆಯಾದ ನಂತರ ಅದು ನೆಗೆಟಿವ್ ಎಂದು ಮಾಹಿತಿ ಬಂತು, ಮತ್ತೆ ಪುನಃ ಎರಡು ದಿನಗಳ ನಂತರ ಹಂದಿಗಳು ಸಾವನ್ನಪ್ಪುತ್ತಿದ್ದು ನಮ್ಮ ಗಮನಕ್ಕೆ ಬಂದ ತಕ್ಷಣ ದೇಹದ ಅಂಗಾಂಗವನ್ನು ಬೆಂಗಳೂರಿಗೆ ಲ್ಯಾಬ್ ಟೆಸ್ಟಿಗೆ ಕಳುಹಿಸಿ ಪರೀಕ್ಷಿಸಿದಾಗ.
ಕ್ಲಾಸಿಕಲ್ ಸ್ವೈನ್ ಪೀವರ್ ಎಂಬ ರೋಗ ಇರುವ ಬಗ್ಗೆ ವರದಿ ಬಂದಿರುವ ಕಾರಣ ಹಂದಿಯನ್ನು ಮಾಲೀಕರಿಗೆ ನೋಟಿಸ್ ಅನ್ನು ಕೊಟ್ಟಿದ್ದೇವೆ, ನೀವು ಸಾಕುವ ಹಂದಿಯನ್ನು ಮಾಸಡಿ ಶಾಲೆಗೆ ಸಾಗಿಸುವಂತೆ ಸೂಚಿಸಲಾಗಿದೆ. ಹಾಗೂ ಸದರಿ ಹಂದಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ನೀಡುವಂತೆ ಸಹಾಯಕ ನಿರ್ದೇಶಕರು ಪಶುವೈದ್ಯಕೀಯ ಇಲಾಖೆ ಅವರಿಗೆ ಕೇಳಿಕೊಳ್ಳಲಾಗಿದೆ ಅವರು ಸಹ ಸ್ಪಂದಿಸಿದ್ದಾರೆ ಆದ ಕಾರಣ ಪಟ್ಟಣದಲ್ಲಿ ರವ ಪ್ರತಿಯೊಂದು ಹಂದಿ ಗಳನ್ನು ವರಹ ಶಾಲೆಗೆ ಕಳುಹಿಸಿ, ಅವುಗಳಿಗೆ ಚುಚ್ಚುಮದ್ದು ಹಾಕಿಸಬೇಕು ಆ ಹಂದಿಗಳಿಗೆ ನೀರಿನ ವ್ಯವಸ್ಥೆಯನ್ನು ಉಚಿತವಾಗಿ ಪುರಸಭೆಯಿಂದ ವಿತರಿಸಲಾಗುವುದು. ಹಂದಿಗಳಿಗೆ ಆಹಾರವನ್ನು ಹಂದಿಯ ಮಾಲೀಕರುಗಳೇ ಒದಗಿಸತಕ್ಕದ್ದು ಹಂದಿಯನ್ನು ಸಾಕಲಿಕ್ಕೆ ಪುರಸಬೆಯ ವತಿಯಿಂದ ಜಾಗವನ್ನು ಗುರುತಿಸಿದ್ದೇವೆ ಅಲ್ಲಿಯೇ ಹಂದಿಯನ್ನು ಸಾಕಬೇಕು ಹಂದಿಯ ಮಾಲೀಕರು ಪುನಃ ಪಟ್ಟಣದಲ್ಲಿ ಹಂದಿಗಳನ್ನು ಪುನಹ ಬದುಕಲಿಕ್ಕೆ ಬಿಟ್ಟಿದ್ದು ಕಂಡುಬಂದರೆ ಕಾನೂನು ರೀತಿಯ ಕ್ರಮವನ್ನು ಪುರಸಭೆಯ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅವರುಳಿಗೆ ಎಚ್ಚರಿಕೆ ನೀಡಿದರು.
ಇವರು ಉಪಸ್ಥಿತಿಯಲ್ಲಿ ಬಾಬು ಹೋಬಳಿದಾರ್ ಅಧ್ಯಕ್ಷರು ,ರಂಜಿತ ಚೆನ್ನಪ್ಪ ಉಪಾಧ್ಯಕ್ಷರು ,ಬಿಜೆಪಿ ಸದಸ್ಯರುಗಳಾದ ಮಹೇಶ್ ಹುಡೆದ್ ಸತೀಶ್ ಕೋಳಿ ,ಮಾರುತಿ ಸಿ, ಚಂದ್ರು (ಗುಂಡ )ಬಾವಿಮನಿ ರಾಜಣ್ಣ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.