ಹೊನ್ನಾಳಿ ತಾಲೂಕು ದಿನಾಂಕ25/11/2021ರಂದು ಇಂದು ಅರಬಗಟ್ಟೆ ಗ್ರಾಮದಲ್ಲಿ ಬೆಂಗಳೂರಿನ ಹೊಸ ಹಾಟ್ ಸಂಸ್ಥೆ ಮತ್ತು ವನ ಯಾತ್ರಿ ಈ ಎರಡು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸುಮಾರು ಅಂದಾಜು 58 ರಿಂದ 60 ಲಕ್ಷ ರಷ್ಟು ಹಣವನ್ನು ತೊಡಗಿಸಿ ಸ್ವಯಂಪ್ರೇರಿತ ಉಚಿತವಾಗಿ ಅರಬಗಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಈ ಸಂಸ್ಥೆಯ ವತಿಯಿಂದ ನಾಲ್ಕು ಕೊಠಡಿ ಮತ್ತು ಶೌಚಾಲಯ ಕಟ್ಟಲಿಕ್ಕೆ ಇಂದು ಗುದ್ದಲಿ ಪೂಜೆಯನ್ನು ತಾಲೂಕಿನ ಶಿಕ್ಷಣಾಧಿಕಾರಿಗಳಾದ ಪಿ ರಾಜೀವ್ ಮತ್ತು ಬಿ ಆರ ಸಿ ಅಧಿಕಾರಿಗಳು ಹಾಗೂ SDMC ತಾಲೂಕು ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸ ಘಟ್ಟ ಇವರುಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.
ಇವರ ಉಪಸ್ಥಿತಿಯಲ್ಲಿ ತಾಲೂಕ ಶಿಕ್ಷಣಾಧಿಕಾರಿಗಳಾದ ಪಿ ರಾಜೀವ್ ಮತ್ತು ತಾಲೂಕು SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟNayamathi Rajshekar , ಹಾಗೂ ಹೊಸ ಹಾಟ್ ಸಂಸ್ಥೆ ಮತ್ತು ವನ ಯಾತ್ರಿ ಸಂಸ್ಥೆ ಯವರು ಬೆಂಗಳೂರು ಮತ್ತು ಬಿ ಆರ್ ಸಿ ಅಧಿಕಾರಿಗಳು , ಅರಬಗಟ್ಟೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಹಶಿಕ್ಷಕರು, ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರುಗಳು ಹಾಗೂ ಊರಿನ ಗ್ರಾಮಸ್ಥರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You missed