ದರ ನಿಗದಿ:ಡಿ.ಸಿ

ಖಾಸಗಿ ಭತ್ತ ಕಟಾವು ಯಂತ್ರಗಳಿಗೆ ಪ್ರತಿ ಘಂಟೆಗೆ
ಬೆಲ್ಟ್ ಅಥವಾ ಚೈನ್ ಟೈಪ್ ಯಂತ್ರಗಳಿಗೆ ರೂ.2250 ಹಾಗೂ
ಟೈರ್ ಟೈಪ್ ಭತ್ತ ಕಟಾವು ಯಂತ್ರಗಳಿಗೆ ರೂ.1800
ದರ ನಿಗದಿಪಡಿಸಲಾಗಿದೆ. ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರು
ಹಂಗಾಮಿನಲ್ಲಿ 66245 ಹೆಕ್ಟೇರು ಪ್ರದೇಶದಲ್ಲಿ ಭತ್ತದ ಬೆಳೆ
ಕ್ಷೇತ್ರ ಆವರಿಸಿದ್ದು ಸದ್ಯ ಭತ್ತದ ಬೆಳೆಯು ಬಹುತೇಕ

ಕಾಳು ಬಲಿಯುವ ಹಂತದಿಂದ ಕಟಾವಿನ ಹಂತ ತಲುಪಿದ್ದು
ಅಲ್ಲಲ್ಲಿ ಕಟಾವು ಆರಂಭವಾಗಿದೆ.
ರೈತರು ಭತ್ತದ ಬೆಳೆಯನ್ನು ಯಂತ್ರಗಳ (***)
ಮೂಲಕ ಕಟಾವು ಮಾಡುತ್ತಿದ್ದು ತಮ್ಮ ಸಮೀಪದ ಕೃಷಿ
ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಕಟಾವು
ಯಂತ್ರಗಳ ಪ್ರಯೋಜನ ಪಡೆಯಬಹುದು.
ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ಪ್ರತಿ
ಘಂಟೆಗೆ 2800 ರಿಂದ 3800ರೂಗಳವರೆಗೆ ಬಾಡಿಗೆ ಹಣ
ನಿಗದಿಪಡಿಸುತ್ತಿರುವುದು ಗಮನಕ್ಕೆ ಬಂದಿದ್ದು ಇದರಿಂದ
ರೈತರಿಗೆ ಹೆಚ್ಚಿನ ಆರ್ಥಿಕ ಹೊರೆ ಆಗಲಿದೆ. ಆದ್ದರಿಂದ ಪರಿಷ್ಕøತ
ನಿಗದಿಪಡಿಸಿರುವ ದರವನ್ನು ಬಾಡಿಗೆ ಭತ್ತ ಕಟಾವು
ಯಂತ್ರಗಳ ಮಾಲೀಕರು ಪಡೆಯಬೇಕು. ತಪ್ಪಿದಲ್ಲಿ
ಅಂತಹ ಮಾಲೀಕರುಗಳ ವಿರುದ್ದ ವಿಪತ್ತು ನಿರ್ವಹಣಾ
ಕಾಯ್ದೆ 2005ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಒಂದು ವೇಳೆ ಹೆಚ್ಚು ಹಣಕ್ಕೆ ಒತ್ತಾಯಿಸಿದರೆ ರೈತರು ಕೃಷಿ
ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು
ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *