ದಾವಣಗೆರೆ: ಪ್ರತಿ ಮಕ್ಕಳು ಶುದ್ಧನೀರಿನ ಮಹತ್ವವನ್ನು ಅರಿತುಕೊಂಡು ಶುದ್ಧನೀರನನು
ಬಳಕೆ ಮಾಡಿ ಎಂದು ಎಸ್‌,ಎಮ್‌,ಎಸ್‌ ಕಾನ್ವೇಂಟ್‌ ಶಾಲೆಯ ಮುಖ್ಯೋಪಾಧ್ಯರಾದ
ಶ್ರೀಯುತ ಮಾಂತೇಶ್‌ ಆಚಾಯ೯ ತಿಳಿಸಿದರು.
ರಾಜೀವ್‌ ಗಾಂಧಿ ಬಡಾವಣೆಯ ಎಸ್‌,ಎಮ್‌ ಎಸ್‌ ಕಾನ್ವೆಂಟ್‌ ಶಾಲೆಯ ಆವರಣದಲ್ಲಿ
ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆದ “ ಶುದ್ಧಜಲ ಜಾಥಾ
ಅಭಿಯಾನ ” ಕಾಯ೯ಕ್ರಮದ ಜ್ಯೋತಿ ಬೆಳಗಿಸುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿ
ಧಮ೯ಸ್ಥಳದ ಪೂಜ್ಯರು ಮಾಡುವ ಪ್ರತಿ ಕಾಯ೯ಕ್ರಮ ಅಥ೯ಪೂಣ೯ವಾಗಿರುತ್ತವೆ, ಪೂಜ್ಯರು
ಮಾಡುವ ಕೆಲಸಗಳು ಜನಮನ್ನಣೆ ಪಡೆದಿವೆ, ಪ್ರತಿ ಕುಟುಂಬವು ಶುದ್ಧನೀರನ್ನು ಪಡೆದು ಆರೋಗ್ಯ
ವಂತರಾಗಬೆಕು, ಶುದ್ಧಜಲ ಅಭಿಯಾನ ಕಾಯ೯ಕ್ರಮ ಮಾಡಿ ಜನರಿಗೆ ಅರಿವು
ಮೂಡಿಸುತ್ತಿರವುದರಿಂದ ಎಲ್ಲ ಮಕ್ಕಳು ಶುದ್ಧನೀರಿನ ಮಹತ್ವವನ್ನು ಅರಿತುಕೊಂಡು ಪ್ರತಿ
ಕುಟುಂವವು ಶುದ್ಧನೀರನ್ನು ಉಪಯೋಗ ಮಾಡಬೇಕೆಂದು ತಿಳಿಸಿದರು.
ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಜನಪರ ಕಾಯ೯ಕ್ರಮಗಳನ್ನು
ಅನುಷ್ಠಾನ ಮಾಡಿಕೊಂಡು ಬಂದಿದೆ, ಈ ಎಲ್ಲಾ ಕಾಯ೯ಕ್ರಮಗಳು ಸಮುದಾಯದ
ಪಾಲ್ಗೋಳುವಿಕೆಯಿಂದ ಅನುಷ್ಠಾನ ಮಾಡುತ್ತಿರುವುದರಿಂದ ಯಶಸ್ಸು ಸಾಧ್ಯವಾಗಿದೆ, ಪೂಜ್ಯರಾಧ
ಡಾ|| ಡಿ,ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು

ಸಮುದಾಯದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಹಲವಾರು ಕಾಯ೯ಕ್ರಮಗಳಿಗೆ ಪ್ರೇರೇಪಣೆ
ಮತ್ತು ಮಾಗ೯ದಶ೯ನ ನೀಡುತ್ತಿದ್ಧಾರೆ, ಇಂತಹ ಆಶಯದೊಂದಿಗೆ ಪ್ರಾರಂಭಗೊಂಡ
ಕಾಯ೯ಕ್ರಮವೆ ಶುದ್ಧಗಂಗಾ ಕಾಯ೯ಕ್ರಮ.
ಸಕಲ ಜೀವಿಗಳ ಹುಟ್ಟಿಗೆ ಕಾರಣವಾದ ಪಂಚಭೂತಗಳಲ್ಲಿ ನೀರೂ ಒಂದು, ನೀರು
ಸಕಲ ಜೀವಿಗಳ ಉಗಮ,ಬದುಕು, ಸಂತಾನ ವಿಕಾಸದಲ್ಲಿ ನೀರು ಪ್ರಮುಖ ಪಾತ್ರವಹಿಸಿದೆ,
ಇತ್ತಿಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಧಿಕಗೊಂಡ ಜನಸಂಖ್ಯೆ ಹಾಗೂ
ಪರಿಸರ ನಾಶದಿಂದ ನೀರಿನ ಅಭಾವ ತಲೆದೋರುತ್ತಿದ್ದು ಶುದ್ಧಕುಡಿಯುವ ನೀರನ್ನು ಜನರಿಗೆ
ಪೂರೈಸುವುದು ಕಷ್ಠಕರವಾಗಿದೆ, ಕನಾ೯ಟಕ ರಾಜ್ಯದಲ್ಲಿ ಶೇಕಡಾ 60ರಷ್ಟು ಪ್ರದೇಶದಲ್ಲಿ
ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕಿಂತ ಹೆಚ್ಚು ಪ್ಲೋರೈಡ್‌, ಶೇಕಡಾ 20ರಷ್ಟು ಅತ್ಯಧಿಕ
ನೈಟ್ರೇಟ್‌, ಮತ್ತು ಶೇಕಡಾ 38ರಷ್ಟು ಸೂಕ್ಷಾಣುಗಳಿಂದ ಕಲುಷಿತವಾಗಿ ಜನರು
ರೋಗರುಜಿನುಗಳಿಗೆ ತುತ್ತಾಗುತ್ತಿದ್ದಾರ, ಎಂದು ತಿಳಿಸಿದರು. ಆದ್ದರಿಂದ ಪ್ರತಿಯೊಬ್ಬ
ಶುದ್ಧನೀರನ್ನು ಬಳಕೆ ಮಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು
ಶುದ್ಧಗಂಗಾ ಮೇಲ್ವಿಚಾರಕರಾದ ಶ್ರೀಯುತ ಫಕ್ಕೀರಪ್ಪ ಬೆಲ್ಲಾಮುದ್ದಿ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈಗಾಗಲೆ ನಾವು 324
ಶುದ್ಧನೀರಿನ ಘಟಕವನ್ನು ಪ್ರಾರಂಭ ಮಾಡಿ ಪ್ರತಿ ಲೀಟರ್‌ ಗೆ 0.15 ಪೈಸೆಯಲ್ಲಿ 81756
ಬಳಕೆದಾರರಿಗೆ ಪ್ರತಿದಿನ ಶುದ್ಧನೀರನ್ನು ಪೂರೈಸುತ್ತಿದ್ದೇವೆ, ಈ ತಿಂಗಳ ಶುದ್ಧ ಜಲ ಅಭಿಯಾನ
ಕಾಯ೯ಕ್ರಮ ಮಾಡುವ ಮೂಲಕ ಒಂದು ಲಕ್ಷ ಗ್ರಾಹಕರಿಗೆ ಶುದ್ಧನೀರನ್ನು ಒದಗಿಸುವ
ಆಶಯವನ್ನು ಇಟ್ಟು ಕೊಂಡಿದ್ದೇವೆ, ಈ ಘಟಕಗಳಲ್ಲಿ ಸಮಾಜದ ಅತೀ ಬಡ ಕುಟುಂಬಗಳಿಗೂ ಅತಿ

ಕಡಿಮೆ ದರದಲ್ಲಿ ನೀರು ದೊರೆಯುತ್ತಿರುವುದರಿಂದ ಈ ಕಾಯ೯ಕ್ರಮದ ಜನ ಮಾನ್ಯತೆ ಗಳಿಸಿದೆ.
ಆದ್ದರಿಂದ ಪ್ರತಿಯೊಬ್ಬರು ಶುದ್ಧನೀರನ್ನು ಬಳಕೆ ಮಾಡಿಕೋಳ್ಳಬೇಕೆಂದು ತಿಳಿಸಿದರು.
ಕಾಯ೯ಕ್ರಮದಲ್ಲಿ ಶಾಲಾ ಶಿಕ್ಷಕರಾದ ಸುಮಯ್ಯ ಭಾನು, ಸವ೯ಮಂಗಳ ಶುದ್ಧಗಂಗಾ
ಪ್ರೇರಕರಾದ ಶ್ರೀಮತಿ ಮಂಜುಳಾ ಟಿ ಆರ್, ಚಂದ್ರಮ್ಮ, ದಿವ್ಯ, ಅಮೃತ, ದಿಲ್‌ಶಾದ,
ಸೇವಾಪ್ರತಿನಿಧಿಯಾದ ಶ್ರೀಮತಿ ಮಂಜುಳಾ, ಸ್ವಸಹಾಯ ಸಂಘದ ಸದಸ್ಯರು ಮತ್ತು ಶಾಲಾ
ಮಕ್ಕಳು ಭಾಗವಹಿಸಿದ್ದರು, ಸೇವಾಪ್ರತಿನಿಧಿಯಾದ ಶ್ರೀಮತಿ ಮಂಜುಳಾ ಕಾಯ೯ಕ್ರಮನ್ನು
ನಿರೂಪಿಸಿ ವಂದಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಹಾಗೂ
ಘೋಷಣೆಯೊಂದಿಗೆ ಶುದ್ಧ ನೀರಿನ ಬಗ್ಗೆ ಅರಿವು ಮೂಡಿಸಲಾಯಿತು.

Leave a Reply

Your email address will not be published. Required fields are marked *

You missed