ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ 2021-
22ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣಕ್ಕಾಗಿ
ಮಾತ್ರ), ಮಹಿಳೆಂiÀiರಿಗೆ ಸ್ವ-ಸಹಾಯ ಗುಂಪುಗಳ ಮೂಲಕ ಸಾಲ
ಮತ್ತು ಸಹಾಯಧನ ಯೋಜನೆ, ಕಿರುಸಾಲ ಯೋಜನೆಗಳ
ಅನುಷ್ಠಾನಕ್ಕಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1 ರ ಅರ್ಜಿದಾರರಿಂದ
ಅರ್ಜಿ ಆಹ್ವಾನಿಸಲಾಗಿದೆ.
ಕಳೆದ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸೌಲಭ್ಯ
ಪಡೆದ ವಿದ್ಯಾರ್ಥಿಗಳು 2021-22ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ
ಮುಂದುವರೆದ ಕಂತುಗಳಿಗೆ (2, 3, 4ನೇ
ಕಂತುಗಳು) ಅರ್ಜಿಗಳನ್ನು ಸುವಿಧಾ ಆನ್‍ಲೈನ್
ಪೋರ್ಟಲ್ hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ ಮುಖಾಂತರ 2022 ರ ಜ.10
ರ ಸಂಜೆ 5.30 ರೊಳಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಬಂದ
ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಜಾಮೀನುದಾರರ ಒಪ್ಪಿಗೆ ಪತ್ರ,
ವ್ಯಾಸಂಗ ಪ್ರಮಾಣ ಪತ್ರ, ಹಣ ಸಂದಾಯ ರಶೀದಿ, ತಂದೆ
ತಾಯಿ/ಪೋಷಕರ ಒಪ್ಪಿಗೆ ಪತ್ರ, ಅರ್ಜಿದಾರರ ಆಧಾರ್
ಜೋಡಣೆಯಾದ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐ.ಎಫ್.ಎಸ್.ಸಿ ಸಂಖ್ಯೆ
ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು ಈ ಎಲ್ಲಾ ದಾಖಲೆಗಳನ್ನು
ತರಬೇಕು.
ಮಹಿಳೆಯರಿಗೆ ಸ್ವ-ಸಹಾಯ ಗುಂಪುಗಳ ಮೂಲಕ ಸಾಲ
ಮತ್ತು ಸಹಾಯಧನ ಯೋಜನೆ/ಕಿರುಸಾಲ ಯೋಜನೆಗೆ ಅರ್ಜಿ
ಸಲ್ಲಿಸುವ ಅರ್ಜಿದಾರರು ಹಸ್ತಚಾಲಿತ ಮೂಲಕ ಸಾಲ ಸೌಲಭ್ಯ
ಪಡೆಯಲು ಇಚ್ಚಿಸುವ ಕನಿಷ್ಟ 10 ಜನ ಮಹಿಳೆಯರನ್ನು
ಒಳಗೊಂಡ ಸ್ವ-ಸಹಾಯ ಸಂಘದ ಸದಸ್ಯರು ನಿಗದಿತ ಅರ್ಜಿ
ನಮೂನೆಗಳಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ 2022 ರ
ಜ.10ರ ಸಂಜೆ 5:30 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ
ನಿಗಮ ನಿಯಮಿತ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ
ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ಅಥವಾ ನಿಗಮದ
ವೆಬ್‍ಸೈಟ್ hಣಣಠಿs://ಚಿmbigಚಿಡಿಚಿಜeveಟoಠಿmeಟಿಣ.ಞಚಿಡಿಟಿಚಿಣಚಿಞಚಿ.gov.iಟಿ ನ್ನು
ಸಂಪರ್ಕಿಸಬಹುದು.
ಅರ್ಜಿ ನಮೂನೆಯನ್ನು ನಿಗಮದ ವೆಬ್‍ಸೈಟ್‍ನಲ್ಲಿ ಹಾಗೂ
ಉಚಿತವಾಗಿ ಡಿ.01 ರಿಂದ ಜಿಲ್ಲಾ ಕಚೇರಿಯಲ್ಲಿ ಪಡೆಯಬಹುದು. ಜಿಲ್ಲಾ
ನಿಗಮದ ಕಚೇರಿ ದೂರವಾಣಿ ಸಂಖ್ಯೆ 08192-230934 ಕ್ಕೆ
ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.