ಹೊನ್ನಾಳಿ : ನಾವು ಹುಟ್ಟಿದ್ದಕ್ಕೂ, ಬದುಕಿದ್ದಕ್ಕೂ ಸಾರ್ಥಕತೆ ಸಿಗ ಬೇಕೆಂದರೆ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ನೇತ್ರದಾನ ಮಾಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು..
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಇದ್ದ ಹಿನ್ನೆಲೆ, ವಿದ್ಯಾರ್ಥಿಗಳ ಮನವಿ ಮೇರೆಗೆ ನೂತನ ಕೊಠಡಿಗಳಿಗೆ ಇಂದು ಸಾಂಕೇತಿಕವಾಗಿ ಚಾಲನೆ ನೀಡಿ, ಒಂದು ಸಾವಿರ ವಿದ್ಯಾರ್ಥಿಗಳಿಗೆ ನೇತ್ರದಾನದ ಅರ್ಜಿಗಳನ್ನು ವಿತರಿಸಿ ಅವರು ಮಾತನಾಡಿದರು..
ದಾನಗಳಲ್ಲಿ ಶ್ರೇಷ್ಟವಾದ ದಾನ ಎಂದರೆ ಅದು ನೇತ್ರದಾನ, ನೇತ್ರದಾನ ಮಾಡುವುದರಿಂದ ಅಂಧ ಮಕ್ಕಳ ಬಾಳಲ್ಲಿ ಬೆಳಕು ಮೂಡಲಿದ್ದು, ವಿದ್ಯಾರ್ಥಿಗಳು ಕೂಡ ನೇತ್ರದಾನ ಮಾಡಲು ಮುಂದೆ ಬರ ಬೇಕೆಂದು ಕರೆ ನೀಡಿದರು..
ಪುನೀತ್ ರಾಜ್‍ಕುಮಾರ್ ಅವರ ಪ್ರೇರಣೆಯಿಂದ ನಾನು ಸೇರಿದಂತೆ ನನ್ನ ಕುಟುಂಬದ ಸರ್ವ ಸದಸ್ಯರು ನೇತ್ರದಾನಕ್ಕೆ ನೊಂದಾವಣಿ ಮಾಡಿಸಿದ್ದು, ಅವಳಿ ತಾಲೂಕಿನಾಧ್ಯಂತ ಐದು ಸಾವಿರಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ನೊಂದಾವಣಿ ಮಾಡಿಸುವ ಗುರಿಯೊಂದಲಾಗಿದೆ ಎಂದರು.
ಶಿಕ್ಷಣ ಮನುಷ್ಯನ ಜೀವನದಲ್ಲಿ ಅತ್ಯತ ಮುಖ್ಯವಾದದ್ದು, ಶಿಕ್ಷಣ ಎಂಬ ಮೂರಕ್ಷರ ಇಲ್ಲದಿದ್ದರೇ ಮನುಷ್ಯನ ಜೀವನ ಅಂದಕಾರದಲ್ಲಿ ಮುಳುಗಿ ಹೋಗಲಿದ್ದು ಪ್ರತಿಯೊಬ್ಬರೂ ಕೂಡ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡ ಬೇಕೆಂದು ರೇಣುಕಾಚಾರ್ಯ ಕರೆ ನೀಡಿದರು.
ಪೋಷಕರು ತಮ್ಮ ಕಷ್ಟಗಳನ್ನು ಮರೆ ಮಾಚಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದು ಅವರಿಗೆ ಒಳ್ಳೆಯ ಹೆಸರು ತರುವ ಕೆಲಸವನ್ನು ಮಕ್ಕಳ ಮಾಡ ಬೇಕೆಂದರು.
ಮೂರನೇ ಅಲೆಯ ಬಗ್ಗೆ ಎಚ್ಚರದಿಂದಿರಿ :
ಕೊರೊನಾ ಮೂರನೇ ಅಲೆ ಬರ ಬಹುದೆಂದು ಹೇಳಲಾಗುತ್ತಿದ್ದು ಪ್ರತಿಯೊಬ್ಬರೂ ಜಾಗರೂಕತೆ ಇರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ರೇಣುಕಾಚಾರ್ಯ, ಒಮಿಕ್ರಾನ್ ಎಂಬ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದ್ದು ಯಾರೂ ಕೂಡ ಮೈರೆಯದೇ ಎಚ್ಚರಿಕೆಯಿಂದ ಇರುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕರೆ ನೀಡಿದರು.
ಕೊರೊನಾ ಎರಡನೇ ಅಲೆ ಸೇರಿದಂತೆ, ಅತಿವೃಷ್ಟಿಯಿಂದಾಗಿ ಸರ್ಕಾರ ಆರ್ಥಿಕ ಸಂಷ್ಟವನ್ನು ಎದುರಿಸುತ್ತಿದ್ದು, ಒಮಿಕ್ರಾನ್ ಬಂದರೆ ಇನ್ನು ಸಾಕಷ್ಟು ತೊಂದರೆ ಅನುಭವಿಸ ಬೇಕಾಗುತ್ತದೆ ಎಂದ ರೇಣುಕಾಚಾರ್ಯ ಪ್ರತಿಯೊಬ್ಬರೂ ಲಸಿಕೆ ಪಡೆಯುವ ಮೂಲಕ ವೈರಸ್ ನಿಂದ ದೂರ ಉಳಿಯುಂತೆ ಕರೆ ನೀಡಿದರು..
ನಾನು ಹುಲಿಯಲ್ಲ ನಿಮ್ಮ ಸೇವಕ :
ರೇಣುಕಾಚಾರ್ಯ ಅವರು ಕಾಲೇಜಿಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಹೊನ್ನಾಳಿ ಹುಲಿಗೆ ಎಂದು ಘೋಷಣೆ ಕೂಗಿದರು, ಇದಕ್ಕೆ ಪ್ರತಿಕ್ರಿಯಿಸಿ ರೇಣುಕಾಚಾರ್ಯ ನಾನು
ಹೊನ್ನಾಳಿ ಹುಲಿ ಅಲ್ಲಾ ನಾನು ನಿಮ್ಮ ಸೇವಕ, ನಾನು ಸೇವಕನಾಗಿ ನಿಮ್ಮ ಕೆಲಸ ಮಾಡುತ್ತಿದ್ದೇನೆ ಎಂದರು.. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಾಲೀಕರು, ನಾವು ಸೇವಕರಾಗ ಬೇಕು, ನಾವು ಎಂದೂ ಮಾಲೀಕರಾಗ ಬಾರದು ಈ ನಿಟ್ಟಿನಲ್ಲಿ ನಾನು ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು..
ಈ ಸಂದರ್ಭ ಕಾಲೇಜು ಪ್ರಾಂಶುಪಾಲರಾದ ಶಿವಬಸಪ್ಪ ಎಚ್. ಎತ್ತನಹಳ್ಳಿ, ಸಿಂಡಿಕೇಟ್ ಸದಸ್ಯರಾದ ಹಳದಪ್ಪ, ಸಿಡಿಸಿ ಸದಸ್ಯರಾದ ಪ್ರೇಮ್ ಕುಮಾರ್ ಬಂಡಿಗಡಿ, ಎಸ್.ಎಸ್.ಎ ಹುಡೇದ್, ಸಾಬೂನು ಮಾರ್ಜಕಗಳ ನಿದೇರ್ಶಕರಾದ ಶಿವು ಹುಡೇದ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಸ್.ಪಿ.ರವಿಕುಮಾರ್, ಅರಕೆರೆ ನಾಗರಾಜ್, ನೆಲವೊನ್ನೆ ಮಂಜುನಾಥ್, ಅಜಯ್ ರೆಡ್ಡಿ, ಸಿ.ಕೆ.ರವಿಕುಮಾರ್,ಅಜಯ್ ರೆಡ್ಡಿ, ಚೇತನ್ ಸೇರಿದಂತೆ ಉಪನ್ಯಾಸಕರಿದ್ದರು..